ನವದೆಹಲಿ: 9 ವರ್ಷದ ಬಾಲಕಿಯೊಬ್ಬಳು ಜ್ಯೂಸ್ ಪ್ಯಾಕೆಟ್ ಮೇಲಿನ ಚಿತ್ರ ಹಾಗೂ ಅದರ ಮೇಲಿನ ಬರಹದ ಬಗ್ಗೆ ತಕರಾರು ತೆಗೆದು ಪತ್ರ ಬರೆದಿದ್ದು, ಕಂಪೆನಿನ ಜ್ಯೂಸ್ ಪ್ಯಾಕೇಜಿಂಗ್‍ನಲ್ಲಿ ಬದಲಾವಣೆ ತರುವಂತೆ ಮಾಡಿದ್ದಾಳೆ.
Advertisement
ಗುವಾಹಟಿ 9 ವರ್ಷದ ಬಾಲಕಿ ಡಾಬರ್ ಕಂಪೆನಿಯ ರಿಯಲ್ ಫ್ರೂಟ್ ಜ್ಯೂಸ್ ಪ್ಯಾಕೆಟ್ ಮೇಲಿನ ಚಿತ್ರವನ್ನು ತೋರಿಸಿ, ಈ ಜ್ಯೂಸ್ ಹುಡುಗರು ಮಾತ್ರ ಸೇವಿಸುವಂಥದ್ದಾ ಎಂದು ತನ್ನ ತಂದೆ ಮೃಗಾಂಕಾ ಮಂಜುಮ್ದಾರ್ ಅವರಿಗೆ ಕೇಳಿದ್ದಳು. ಜ್ಯೂಸ್ ಪ್ಯಾಕೆಟ್ ಮೇಲೆ ಶಾಲಾ ಸಮವಸ್ತ್ರದಲ್ಲಿರುವ ಹುಡುಗನ ಫೋಟೋವಿದ್ದು, ನಿಮ್ಮ ಮಗುವಿಗೆ ಒಳ್ಳೆಯದಾಗಿರುವುದು ಅವನಿಗೆ ಖುಷಿಯನ್ನೂ ತರಬೇಕು ಎಂದು ಬರೆಯಲಾಗಿತ್ತು.
Advertisement
ಈ ಬಗ್ಗೆ ಬಾಲಕಿಯ ತಂದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮನೇಕಾ ಗಾಂಧಿಗೆ ಪತ್ರ ಬರೆದಿದ್ದರು. ಈ ಜ್ಯೂಸ್ ಹುಡುಗರು ಮಾತ್ರ ಸೇವಿಸುವಂಥದ್ದಾ ಎಂದು ನನ್ನ ಮಗಳು ಕೇಳಿದಳು. ಯಾಕೆ ಅಂದಿದ್ದಕ್ಕೆ ಜ್ಯೂಸ್ ಮೇಲೆ, ನಿಮ್ಮ ಮಗುವಿಗೆ ಒಳ್ಳೆಯದಾಗಿರುವುದು ಅವನಿಗೆ ಖುಷಿಯನ್ನೂ ತರಬೇಕು ಎಂದು ಬರೆದಿದೆ. ‘ಅವನು` ಎಂದರೆ ಕೇವಲ ಹುಡುಗರು ಮಾತ್ರ ಕುಡಿಯಬೇಕಾ? ಇದು ಹುಡುಗಿಯರು ಸೇವಿಸಬಾರದಾ? ಯಾಕೆ ಹೀಗಿದೆ? ಅಂದಳು ಅಂತ ಮಂಜುಮ್ದಾರ್ ಪತ್ರದಲ್ಲಿ ತಿಳಿಸಿದ್ದರು.
Advertisement
ಈ ಬಗ್ಗೆ ಡಾಬರ್ ಕಂಪೆನಿ ಹೇಳಿಕೆ ಪ್ರತಿಕ್ರಿಯಿಸಿದ್ದು ಲಿಂಗ ತಾರತಮ್ಯದ ಆರೋಪವನ್ನು ತಳ್ಳಿಹಾಕಿದೆ. ಪ್ಯಾಕ್ ಮೇಲಿರುವ ಅವನು ಎಂಬ ಪದ ಲಿಂಗ ನಿರ್ದಿಷ್ಟವಾಗಿಲ್ಲ. ಅದನ್ನು ಸಾಮಾನ್ಯ ಅರ್ಥದಲ್ಲಿ ಬಳಸಲಾಗಿದೆ. ಯಾವುದೇ ನಿರ್ದಿಷ್ಟ ಲಿಂಗವನ್ನು ಉದ್ದೇಶಿಸಿ ಹೇಳಿಲ್ಲ ಎಂದು ಡಾಬರ್ ಕಂಪೆನಿಯ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Advertisement
ಆದರೂ ಮುಂದೆ ಈ ರೀತಿಯ ಅಪಾರ್ಥಗಳಾಗಬಾರದು ಎಂಬ ಉದ್ದೇಶದಿಂದ ಜ್ಯೂಸ್‍ನ ಪ್ಯಾಕೇಜಿಂಗನ್ನು ಬದಲಾಯಿಸಲು ನಿರ್ಧರಿಸಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರೋ ಸಚಿವೆ ಮನೇಕಾ ಗಾಂಧಿ, ಇದರಿಂದ ಒಂದು ಸಂದೇಶ ರವಾನಿಸಲು ಹಾಗೂ ಮುಂದೆಂದೂ ಈ ರೀತಿ ಆಗಬಾರದು ಎಂಬ ಉದ್ದೇಶದಿಂದ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದಾಗಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ