ಫ್ಲೋರಿಡಾ: ಅಮೆರಿಕದ ಫ್ಲೊರಿಡಾ ಮೂಲದ ಬಾಲಕನೊಬ್ಬ 60 ಸೆಕೆಂಡ್ ನಲ್ಲಿ 1080 ಬಾರಿ ಚಪ್ಪಾಳೆ ಬಾರಿಸುವ ಮೂಲಕ ಗಿನ್ನಿಸ್ ದಾಖಲೆ ಬರೆದಿದ್ದಾನೆ.
ಸೆವೆನ್ ವೆಡ್ ಎಂಬ 9 ವರ್ಷದ ಬಾಲಕ ಈ ಸಾಧನೆ ಮಾಡಿದ್ದು, ಈ ಕುರಿತು ಗಿನ್ನಿಸ್ ಸಂಸ್ಥೆ ಅಧಿಕೃತವಾಗಿ ವಿಚಾರವನ್ನು ತಿಳಿಸಿದೆ. ಬಾಲಕನ ಈ ಸಾಧನೆಯ ವಿಡಿಯೋವನ್ನು ತನ್ನ ವೆಬ್‍ಸೈಟ್‍ನಲ್ಲಿ ಪ್ರಕಟಿಸಿದೆ.
Advertisement
Advertisement
ವೆಡ್ ಈ ಹಿಂದೆಯೇ ಒಂದು ನಿಮಿಷದಲ್ಲಿ 1020 ಬಾರಿ ಚಪ್ಪಾಳೆ ಬಾರಿಸುವ ಮೂಲಕ ದಾಖಲೆ ನಿರ್ಮಿಸಿದ್ದ. ಸದ್ಯ ಸೆವೆನ್ ತನ್ನ ಸಾಧನೆಯನ್ನೇ ಉತ್ತಮ ಪಡಿಸಿಕೊಂಡಿದ್ದಾನೆ.
Advertisement
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸವೆನ್ ವೆಡ್ ತಂದೆ, ತಮ್ಮ ಮಗ ಈ ಸಾಧನೆ ಮಾಡಲು ಬಹಳ ಶ್ರಮ ವಹಿಸಿದ್ದು, ಪ್ರತಿ ದಿನ ಅಭ್ಯಾಸ ನಡೆಸುತ್ತಿದ್ದ. ಅಲ್ಲದೇ ತನ್ನ ದಾಖಲೆಯನ್ನು ಉತ್ತಮ ಪಡಿಸುವ ಉದ್ದೇಶ ಹೊಂದಿದ್ದ. ಆದರೆ ಇದನ್ನು ಅಧಿಕೃತ ದಾಖಲೆಯಾಗಿ ಪರಿವರ್ತನೆ ಮಾಡಲು ಸ್ಥಿರ ಪ್ರದರ್ಶನ ಅಗತ್ಯವಿತ್ತು. ಈ ಹಿನ್ನೆಲೆಯಲ್ಲಿ ನಾವು ಆತನಿಗೆ ಪ್ರೋತ್ಸಾಹ ನೀಡಿದ್ದಾಗಿ ತಿಳಿಸಿದ್ದಾರೆ.