ಬೆಂಗಳೂರು: ಎಲೆಕ್ಟ್ರಿಕಲ್ ವೈಯರ್ ತಗುಲಿ 9 ವರ್ಷದ ಬಾಲಕ ಮೃತಪಟ್ಟ ಘಟನೆ ಬೆಂಗಳೂರಿನ ಬಾಣಸವಾಡಿಯ ರಾಜ್ಕುಮಾರ್ ಪಾರ್ಕ್ ನಲ್ಲಿ ನಡೆದಿದೆ.
ಉದಯ್ ಕುಮಾರ್ (7) ಮೃತಪಟ್ಟ ಬಾಲಕ. ಉದಯ್ ಕುಮಾರ್ ಭಾನುವಾರ ಸಂಜೆ ಸ್ನೇಹಿತರ ಜೊತೆ ಆಟವಾಡುವಾಗ ಎಲೆಕ್ಟ್ರಿಕಲ್ ವೈರ್ ತಗುಲಿ ಮೃತಪಟ್ಟಿದ್ದಾನೆ. ಈ ಘಟನೆಗೆ ಸ್ಥಳೀಯ ಬೆಸ್ಕಾಂ ಹಾಗೂ ಬಿಬಿಎಂಪಿ ಸದಸ್ಯರ ನಿರ್ಲಕ್ಷ್ಯ ಎಂದು ಹೇಳಲಾಗುತ್ತಿದೆ.
Advertisement
Advertisement
ಭಾನುವಾರ ಪಾರ್ಕ್ ನಲ್ಲಿ ಲೈಟಿಂಗ್ ಕೆಲಸ ನಡೆಯುತ್ತಿತ್ತು. ಈ ವೇಳೆ ಬೆಸ್ಕಾಂ ಸಿಬ್ಬಂದಿ ಎಲೆಕ್ಟ್ರಿಕಲ್ ವೈಯರ್ ನ್ನು ಜಾಯಿಂಟ್ ಮಾಡದೆ ನಿರ್ಲಕ್ಷ್ಯ ಮಾಡಿದ್ದಾರೆ. ಪಾರ್ಕಿನಲ್ಲಿ ವೈಯರ್ ಸ್ಕಿನ್ ಔಟ್ ಆಗಿತ್ತು. ಬಾಲಕ ಭಾನುವಾರ ಸಂಜೆ ಆಟವಾಡುವಾಗ ಕರೆಂಟ್ ಹೊಡೆದು ಮೃತಪಟ್ಟಿದ್ದಾನೆ.
Advertisement
ಈ ಬಗ್ಗೆ ಬಾಣಸವಾಡಿ ಪೊಲೀಸರಿಂದ ಪ್ರಕರಣ ದಾಖಲಾಗಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv