ಕೊಹಿಮಾ: ನಾಗಾಲ್ಯಾಂಡ್ನ (Nagaland) ಮೋನ್ ಜಿಲ್ಲಾ ಕಾರಾಗೃಹದಿಂದ (Jail) 9 ಕೈದಿಗಳು (Prisoners) ಪರಾರಿಯಾಗಿದ್ದು (Escape), ಅವರ ಪತ್ತೆಗಾಗಿ ಭಾರಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಶನಿವಾರ ಮುಂಜಾನೆ ಕೈದಿಗಳು ತಮ್ಮ ಸೆಲ್ನ ಕೀಗಳನ್ನು ಉಪಾಯದಿಂದ ಪಡೆದು, ನಂತರ ಪಲಾಯನ ಮಾಡಿದ್ದಾರೆ. ಎಸ್ಕೇಪ್ ಆಗಿರುವ ಕೈದಿಗಳಲ್ಲಿ ವಿಚಾರಣಾಧೀನ ಕೈದಿಗಳು ಹಾಗೂ ಕೊಲೆ ಅಪರಾಧಿಗಳು ಸೇರಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇದನ್ನೂ ಓದಿ: ಶ್ರೀರಾಮ ಕೇವಲ ಹಿಂದೂಗಳಿಗೆ ಮಾತ್ರವಲ್ಲ, ಎಲ್ಲರಿಗೂ ದೇವರು: ಫಾರೂಕ್ ಅಬ್ದುಲ್ಲಾ
Advertisement
Advertisement
ಘಟನೆಯ ಕುರಿತು ಸೋಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತೀವ್ರವಾದ ಶೋಧ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ. ಈ ಬಗ್ಗೆ ಲುಕ್ಔಟ್ ನೋಟೀಸ್ ಹೊರಡಿಸಲಾಗಿದ್ದು, ಸಂಬಂಧಿಸಿದ ವಿವಿಧ ಏಜೆನ್ಸಿಗಳಿಗೆ ಎಚ್ಚರಿಕೆಯನ್ನೂ ನೀಡಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬೇರೆಲ್ಲೋ ಸ್ಫೋಟವಾಗಬೇಕಿದ್ದ ಕುಕ್ಕರ್ ಬಾಂಬ್ ಹಂಪ್ಸ್ ಕಾರಣದಿಂದ ಆಟೋದಲ್ಲೇ ಬ್ಲಾಸ್ಟ್!
Advertisement
ಜೈಲಿನಿಂದ ತಪ್ಪಿಸಿಕೊಂಡಿರುವವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾದಲ್ಲಿ ಪೊಲೀಸರನ್ನು ಸಂಪರ್ಕಿಸುವಂತೆ ಕೈದಿಗಳ ಗ್ರಾಮ ಸಭೆಗಳಿಗೆ ತಿಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.