ಬೆಳಗಾವಿಯಲ್ಲಿ ನೈತಿಕ ಪೊಲೀಸ್‌ಗಿರಿ; 9 ಮಂದಿ ಬಂಧನ

Public TV
1 Min Read
belagavi police

ಬೆಳಗಾವಿ: ಬೆಳಗಾವಿಯಲ್ಲಿ (Belagavi) ಯುವಕ ಮತ್ತು ಯುವತಿ ಮೇಲೆ ನೈತಿಕ ಪೊಲೀಸ್‌ಗಿರಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ರೋಹನ್ ಜಗದೀಶ್‌ ತಿಳಿಸಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳಗಾವಿಯ ಕೋಟೆ ಕೆರೆಯಲ್ಲಿ ಸಚಿನ್ ಲಮಾಣ್‌ ಮತ್ತು ಮುಸ್ಕಾನ್ ಎಂಬವರು ಕುಳಿತಿದ್ದರು. ಈ ವೇಳೆ ಯುವಕರ ಗುಂಪು ಯುವಕ-ಯುವತಿ ಮೇಲೆ ಹಲ್ಲೆ ಮಾಡಿದೆ. ಘಟನೆ ಕುರಿತು ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಪ್ರೇಮಿಗಳೆಂದು ಅಕ್ಕ-ತಮ್ಮನನ್ನು ಕೂಡಿ ಹಾಕಿ ಮಾರಣಾಂತಿಕ ಹಲ್ಲೆ ನಡೆಸಿದ ದುಷ್ಕರ್ಮಿಗಳು

BELAGAVI SACHIN

ಪ್ರಕರಣ ಸಂಬಂಧ 9 ಆರೋಪಿತರನ್ನು ಬಂಧಿಸಲಾಗಿದ್ದು, ಇಬ್ಬರು ಕಾನೂನು ಸಂಘರ್ಷಕ್ಕೆ ಒಳಗಾದವರಿದ್ದಾರೆ. ಮೊಮ್ಮಹದ್ ಇನಾಮದಾರ್ (22), ಆತೀಫ್ ಅಹಮ್ಮದ್ ಶೇಖ್‌ (22), ಮೊಹಮ್ಮದ್ ಅಮನ್(27), ಸೈಫಲಿ ಮಗ್ದುಮ್ (27), ಉಮರ ಬಡೇಗರ್ (19), ಅಜಾನ್ ಕಾಲಕುಂದ್ರಿ (19), ರಿಯಾನ್ ರೋಟವಾಲೆ (19) ಬಂಧಿತ ಆರೋಪಿಗಳು.

ಕೋಟೆ ಕೆರೆ ಆವರಣದಲ್ಲಿ ಚಿಕ್ಕದಾದ ಶೆಡ್‌ನಲ್ಲಿ ಯುವಕರ ಮೇಲೆ ಹಲ್ಲೆ ಮಾಡಲಾಗಿದೆ. ಕೋಟೆ ಕೆರೆ ಆವರಣ ಕಾಂಪೌಂಡ್ ನಿರ್ಮಾಣ ಪೂರ್ಣವಾಗಿಲ್ಲ. ಈ ಕಾರಣಕ್ಕೆ ಕೆಲ ಯುವಕರು ‌ಚಿಕ್ಕಾದಾದ ದಾರಿ ಮಾಡಿಕೊಂಡು ಶೆಡ್ ನಿರ್ಮಿಸಿಕೊಂಡಿದ್ದಾರೆ. ಕಾಂಪೌಂಡ್ ನಿರ್ಮಿಸುವಂತೆ ಮಹಾನಗರ ಪಾಲಿಕೆಗೂ ಪತ್ರ ಬರೆಯುತ್ತೇವೆ. ಶೆಡ್‌ಗೆ ಹೊಂದಿಕೊಂಡು ಮನೆಯೊಂದು ಇದೆ. ಮಾಲೀಕರ ವಿಚಾರಣೆ ನಡೆಸುತ್ತೇವೆ. ಸಿಸಿಟಿವಿ ಕ್ಯಾಮರಾ ಪರಿಶೀಲಿಸಿ ಯಾರಾದರೂ ಇದ್ರೆ ಬಂಧಿಸಲಾಗುವುದು ಎಂದು ಡಿಸಿಪಿ ರೋಹನ್ ಜಗದೀಶ್ ತಿಳಿಸಿದ್ದಾರೆ. ಇದನ್ನೂ ಓದಿ: ಹೆಲ್ಮೆಟ್‌ನಿಂದ ಹೊಡೆದು 3 ತಿಂಗಳ ಗರ್ಭಿಣಿಯನ್ನು ಕೊಂದು ಅಪಘಾತವೆಂದ ಪತಿ!

Share This Article