ಬೆಂಗಳೂರು: ಸಿಲಿಕಾನ್ ಸಿಟಿ ಪೊಲೀಸರು ಕಾನೂನು ವ್ಯವಸ್ಥೆ ಕಾಪಾಡುವಲ್ಲಿ ಮತ್ತೆ ಎಡುವುತ್ತಿದ್ದಾರಾ ಅನ್ನೋ ಅನುಮಾನ ಕಾಡುತ್ತಿದೆ. ಯಾಕಂದ್ರೆ ಕಳೆದ ಮೂರು ದಿನಗಳ ಅಸುಪಾಸಿನಲ್ಲಿ ಬರೋಬ್ಬರಿ 9 ಕೊಲೆ ಪ್ರಕರಗಳು ದಾಖಲಾಗಿವೆ.
ಈ ಹಿನ್ನೆಲೆಯಲ್ಲಿ ನಗರದಲ್ಲಿ ಪುಡಿರೌಡಿಗಳ ಅರ್ಭಟ ಮತ್ತೆ ಶುರುವಾದಂತೆ ಕಾಣುತ್ತಿದೆ. ಹಬ್ಬದ ಸಮಯದಲ್ಲಿ ಎಣ್ಣೆ ಪಾರ್ಟಿಗಳು, ಡಾನ್ಸ್‍ಗಳು ಮಾಡೋ ವೇಳೆ ಕ್ಷುಲ್ಲಕ ಕಾರಣಕ್ಕೆ ಈ ರೀತಿಯ ಕೊಲೆಗಳು ನಡೆದಿವೆ. ಇಂತಹ ದುರ್ಘಟನೆಗಳು ನಡೆದಿರೋದು ಸಾರ್ವಜನಿಕರನ್ನು ಬೆಚ್ಚಿಬಿಳಿಸುವಂತೆ ಮಾಡಿದೆ.
Advertisement
ಆ ಒಂಬತ್ತು ಕೊಲೆಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಕೇಸ್ ನಂಬರ್-01
ಜ್ಞಾನಭಾರತಿ ಪೊಲೀಸ್
ಅರ್ಜುನ್ ಅಲಿಯಾಸ್ ತಟ್ಟೆ
ಹಳೇ ವೈಷಮ್ಯದ ವಿಚಾರಕ್ಕೆ ಜ್ಞಾನಭಾರತಿ ಕ್ಯಾಂಪಸ್‍ನಲ್ಲಿ ಕತ್ತುಕೊಯ್ದು ಕೊಲೆ
Advertisement
Advertisement
ಕೇಸ್ ನಂಬರ್-02
ತಲಘಟ್ಟಪುರ ಪೊಲೀಸ್ ಠಾಣೆ
ಟಾಯ್ಲೆಟ್ ರಾಘು
ಹಪ್ತ ವಸೂಲಿ ವಿಚಾರದಲ್ಲಿ ಸ್ನೇಹಿತರಿಂದಲೇ ಕೊಲೆ
Advertisement
ಕೇಸ್ ನಂಬರ್-03
ಜಾಲಹಳ್ಳಿ ಪೊಲೀಸ್ ಠಾಣೆ
ಮೋಹನ್ ಅಲಿಯಾಸ್ ಮೋನಿ
ಅಪರಿಚಿತರಿಂದ ಕೊಲೆ.
ಕೇಸ್ ನಂಬರ್-04
ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆ
ಪುನೀತ್
ಹುಡುಗಿ ವಿಚಾರಕ್ಕೆ ಸ್ನೇಹಿತರಿಂದಲೇ ಕೊಲೆ.
ಕೇಸ್ ನಂಬರ್-05
ಹನುಮಂತನಗರ ಪೊಲೀಸ್ ಠಾಣೆ
ಗಣೇಶ್
ಕ್ಷಲ್ಲಕ ವಿಚಾರಕ್ಕೆ ಚಾಕು ಇರಿದು ಕೊಲೆ.
ಕೇಸ್ ನಂಬರ್-06
ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆ
ಕಾರ್ತಿಕ್
ಅಪರಿಚಿರಿಂದ ಚಾಕು ಇರಿದು ಕೊಲೆ
ಕೇಸ್ ನಂಬರ್-07
ಮಾರತ್ತಹಳ್ಳಿ ಪೊಲೀಸ್ ಠಾಣೆ
ಬಾಶಿರ್
ಕಳ್ಳತನ ಆರೋಪದಲ್ಲಿ ಹಲ್ಲೆ ನಡೆಸಿ ಕೊಲೆ
ಕೇಸ್ ನಂಬರ್-08
ಆರ್ ಆರ್ ನಗರ ಪೊಲೀಸ್ ಠಾಣೆ
ಅಪರಿಚಿತ ವ್ಯಕ್ತಿ
ಕೊಲೆ ಮಾಡಿ ರಾಜಕಾಲುವೆಗೆ ಎಸೆದ ದುಷ್ಕರ್ಮಿಗಳು.
ಕೇಸ್ ನಂಬರ್-09
ಸೂರ್ಯಸಿಟಿ ಪೊಲೀಸ್ ಠಾಣೆ
ಪ್ರಕಾಶ್
ಆಸ್ತಿ ವಿಚಾರದಲ್ಲಿ ಕೊಲೆ ಮಾಡಿದ ಗುಂಪು
ಇನ್ನು ನಗರದ ಕೆಲವು ಕಡೆ ಗಣೇಶ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. ಹಾಗಾಗಿ ನಗರದ ಜನರು ಭಯಭೀತರಾಗಿದ್ದಾರೆ. ಪೊಲೀಸ್ ಇಲಾಖೆ ಎಚ್ಚರಿಕೆಯನ್ನು ವಹಿಸಬೇಕಾಗಿದೆ.