ಹೈದರಾಬಾದ್: ಕಾಮುಕನೊಬ್ಬ 9 ತಿಂಗಳ ಮಗುವಿನ ಅತ್ಯಾಚಾರಕ್ಕೆ ಯತ್ನಿಸಿ ಕೊಲೆಗೈದಿರುವ ಅಮಾನವೀಯ ಘಟನೆ ತೆಲಂಗಾಣದ ವಾರಂಗಲ್ ನಲ್ಲಿ ನಡೆದಿದೆ.
9 ತಿಂಗಳ ಮಗು ಪೋಷಕರೊಂದಿಗೆ ಮೇಲ್ಚಾವಣೆ ಮೇಲೆ ಮಲಗಿದ್ದಾಗ ಬೇರೆಡೆ ಕರೆದೊಯ್ದು ಆರೋಪಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಪಕ್ಕದ ಮನೆಯವನೇ ಈ ಕೃತ್ಯವೆಸಗಿದ್ದು, ಮಗು ಅಳಲು ಪ್ರಾರಂಭಿಸುತ್ತಿದ್ದಂತೆ ಬಾಯಿಗೆ ಬಟ್ಟೆ ಹಾಕಿ ಬಿಗಿಯಾಗಿ ಹಿಡಿದ್ದರಿಂದ ಕಂದಮ್ಮ ಸಾವನ್ನಪ್ಪಿರುವ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮಗು ಕಳೆದು ಹೋಗಿದೆ ಎಂದು ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಮಗುವಿನ ಜೊತೆಗೆ ಆರೋಪಿಯನ್ನೂ ಪತ್ತೆ ಹಚ್ಚಿದ್ದಾರೆ. ಪ್ರಜ್ಞಾಹೀನವಾಗಿದ್ದ ಮಗುವನ್ನು ಕೂಡಲೇ ಸ್ಥಳೀಯ ರವಾನಿಸಿದರೂ, ವೈದ್ಯರೂ ಕಂದಮ್ಮ ಈಗಾಗಲೇ ಸಾವನ್ನಪ್ಪಿದೆ ಎಂಬುದನ್ನು ದೃಢಪಡಿಸಿದ್ದಾರೆ.
ಆರೋಪಿ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸ್ ಕಸ್ಟಡಿಯಲ್ಲಿಟ್ಟು ವಿಚಾರಣೆ ನಡೆಸಲಾಗುತ್ತಿದೆ. ಮರಣೋತ್ತರ ಪರೀಕ್ಷೆಗೆ ಮಗುವಿನ ಮೃತ ದೇಹವನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಗುವಿನ ಸಾವಿಗೆ ನಿಖರವಾದ ಕಾರಣ ಹಾಗೂ ಮಗು ಲೈಂಗಿಕ ದೌರ್ಜನ್ಯಕ್ಕೊಳಗಾಗಿದೆಯೇ ಅಥವಾ ಇಲ್ಲವೇ ಎಂಬುದು ಶವ ಪರೀಕ್ಷೆ ನಂತರ ತಿಳಿಯಲಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]