ಬೆಂಗಳೂರು: ನಗರದ (Bengaluru) ವಾಣಿ ವಿಲಾಸ ಆಸ್ಪತ್ರೆಗೆ ದಾಖಲಾಗಿದ್ದ 9 ತಿಂಗಳ ಮಗುವಿನಲ್ಲಿ ಕೋವಿಡ್ (Covid 19) ಸೋಂಕು ಪತ್ತೆಯಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಮೂಲದ ಮಗುವನ್ನು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಬಳಿಕ ಮಗುವನ್ನು ವಾಣಿ ವಿಲಾಸ (Vani Vilas Hospital) ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಇದೀಗ ಮಗುವಿಗೆ ಕೋವಿಡ್ ಸೋಂಕು ತಗುಲಿರುವುದು ದೃಢವಾಗಿದೆ. ಇದನ್ನೂ ಓದಿ: ಕೋವಿಡ್ ಏರಿಕೆ – ಮಾಸ್ಕ್ ಕಡ್ಡಾಯಗೊಳಿಸಿದ ಆಂಧ್ರ
ಮಗುವಿನಲ್ಲಿ ಸೋಂಕು ಪತ್ತೆಯಾದ ಬೆನ್ನಲ್ಲೇ ಕೋವಿಡ್ ಮಾನಿಟರ್ ಮಾಡಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೂಚಿಸಿದ್ದಾರೆ. ಈ ಬಗ್ಗೆ ಕೇಂದ್ರದಿಂದ ಯಾವುದೇ ಗೈಡ್ ಲೈನ್ಸ್ ಬಂದಿಲ್ಲ. ಜನ ಆತಂಕಪಡುವ ಅಗತ್ಯ ಇಲ್ಲ ಎಂದು ಸಚಿವರು ಹೇಳಿದ್ದಾರೆ.
ದೇಶಾದ್ಯಂತ 257 ಸಕ್ರಿಯ ಪ್ರರಕಣಗಳಿದ್ದು, ನೆರೆ ರಾಜ್ಯ ಕೇರಳ ಒಂದರಲ್ಲೆ 186 ಕೇಸ್ ಇದ್ದು, 95 ಸಕ್ರಿಯ ಪ್ರಕರಣಗಳಿವೆ. ಕರ್ನಾಟಕದಲ್ಲಿ 33 ಕೇಸ್ ದಾಖಲಾಗಿದ್ದು, 16 ಸಕ್ರಿಯ ಪ್ರಕರಣಗಳಿವೆ. ಆಂದ್ರಪ್ರದೇಶದಲ್ಲಿ ಗುರುವಾರ 19 ಪಾಸಿಟಿವ್ ಕೇಸ್ ದಾಖಲಾಗಿದ್ದು, ಗುಜರಾತ್‍ನಲ್ಲಿ 15 ಕೇಸ್ ದಾಖಲಾಗಿವೆ.
ಆಂಧ್ರಪ್ರದೇಶ ಮಾಸ್ಕ್ ಕಡ್ಡಾಯಗೊಳಿಸಿದೆ. ಜನರ ಗುಂಪು, ಸಭೆ ಸಮಾರಂಭಗಳಲ್ಲಿ ಮಾಸ್ಕ್ ಹಾಕಿಕೊಳ್ಳಲು ಸಲಹೆ ನೀಡಲಾಗಿದ್ದು, ರೋಗ ಲಕ್ಷಣ ಇದ್ದರೆ ಟೆಸ್ಟ್ ಮಾಡಿಸಲು ಸಲಹೆ ನೀಡಲಾಗಿದೆ. ಇದನ್ನೂ ಓದಿ: ಬೆಂಗಳೂರು ಕಂಪನಿಯಿಂದ ದೇಶದ ಮೊದಲ ಎಐ ಆಧಾರಿತ ಆಟೋಪೈಲಟ್ ಕಾರು ಅಭಿವೃದ್ಧಿ