ಒಂದೇ ಬೈಕ್‍ನಲ್ಲಿ 9 ಜನ್ರು ಪ್ರಯಾಣ ನೋಡಿ ಹುಬ್ಬೇರಿಸಿದ ಜನ

Public TV
1 Min Read
bike koppala 2

ಕೊಪ್ಪಳ: ಒಂದು ಬೈಕ್‍ನಲ್ಲಿ ಅಬ್ಬಬ್ಬ ಅಂದ್ರೆ ಮೂರು ಜನ, ನಾಲ್ಕು ಜನ ಹತ್ತಿರೋದನ್ನ ನೋಡಿದ್ದೇವೆ. ಆದ್ರೆ ಇಲ್ಲಿ ಒಂದೇ ಬೈಕ್‍ನಲ್ಲಿ ಸುಮಾರು 9 ಜನ ಸವಾರಿ ಮಾಡಿದ್ದಾರೆ.

bike koppala

ಕೊಪ್ಪಳದ ಗಿಣಿಗೇರಾ ಬಳಿ ಒಂದೇ ಬೈಕ್‍ನಲ್ಲಿ 9 ಜನ ಸವಾರಿ ಮಾಡಿರೋ ದೃಶ್ಯವನ್ನು ಸ್ಥಳೀಯರು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ. ಗಿಣಗೇರಾದಿಂದ ಗಂಗಾವತಿ ಕಡೆ ಹೊರಟಿದ್ದ ಕುಟುಂಬ ಸದಸ್ಯರು ಒಂದೇ ಬೈಕ್‍ನಲ್ಲಿ ಪ್ರಯಾಣ ಮಾಡಿದ್ದಾರೆ. ಇದನ್ನೂ ಓದಿ: ಮೌನವಾಗಿರುವ ಬಿಜೆಪಿ ಮತದಾರರು ದೊಡ್ಡ ಸಂದೇಶ ಕೊಟ್ಟಿದ್ದಾರೆ: ತೇಜಸ್ವಿ ಸೂರ್ಯ 

bike koppala 1

ನಾಲ್ಕು ಜನರು ಹಿರಿಯರು, ಐದು ಜನ ಮಕ್ಕಳು ಒಂದೇ ಬೈಕ್‍ನಲ್ಲಿ ಸವಾರಿ ಮಾಡಿ ನೋಡುಗರನ್ನು ತಮ್ಮತ್ತ ಸೆಳೆದಿದ್ದಾರೆ. ಹೀರೋ ಹೊಂಡಾ ಸ್ಪೆಂಡರ್ ಬೈಕ್‍ನಲ್ಲಿ 9 ಜನ ಸವಾರಿ ಮಾಡಿರೋದು ಎಲ್ಲರನ್ನು ಹುಬ್ಬೇರುವಂತೆ ಮಾಡಿದೆ.

Share This Article
Leave a Comment

Leave a Reply

Your email address will not be published. Required fields are marked *