ಅಮರಾವತಿ: ಮಾವು ತುಂಬಿದ್ದ ಲಾರಿಯೊಂದು ಮಿನಿ ಟ್ರಕ್ ಮೇಲೆ ಬಿದ್ದು 9 ಮಂದಿಯನ್ನ ಬಲಿ ಪಡೆದ ಘಟನೆ ಆಂಧ್ರದ (Andhra Pradesh) ಅನ್ನಮಯ್ಯ ಜಿಲ್ಲೆಯಲ್ಲಿ ನಡೆದಿದೆ.
ಮಿನಿ ಟ್ರಕ್‌ನಲ್ಲಿ 20 ಮಂದಿ ಪ್ರಯಾಣಿಕರಿದ್ದರು. ಅವರೆಲ್ಲರೂ ರಾಜಂಪೇಟೆಯಿಂದ ಕೊಡೂರಿಗೆ ಪ್ರಯಾಣಿಸುತ್ತಿದ್ದರು. 20 ಪ್ರಯಾಣಿಕರಲ್ಲಿ 9 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನುಳಿದ 11 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಶೂಟಿಂಗ್ ವೇಳೆ ಯಡವಟ್ಟು: SUVಯಲ್ಲಿ ಸ್ಟಂಟ್ ವೇಳೆ ಅವಘಡ – ತಮಿಳುನಾಡಿನ ಸ್ಟಂಟ್‌ಮೆನ್ ಸಾವು
ಮಾವು ಹೊತ್ತೊಯ್ಯುತಿದ್ದ ಲಾರಿಯ (Lorry) ಹಿಂಬದಿ ಚಕ್ರ ಮರಳಿನಲ್ಲಿ ಸಿಲುಕಿಕೊಂಡಿದ್ದರಿಂದ ನಿಯಂತ್ರಣ ತಪ್ಪಿ ಮಿನಿ ಟ್ರಕ್ ಮೇಲೆ ಪಲ್ಟಿಯಾಗಿ ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಗಾಯಗೊಂಡವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಮುಂಬೈ ಏರ್‌ಪೋರ್ಟ್‌ನಲ್ಲಿ ಆಕಾಸ ಏರ್ ವಿಮಾನಕ್ಕೆ ಟ್ರಕ್ ಡಿಕ್ಕಿ
ಘಟನೆಯ ಕುರಿತು ಆಂಧ್ರ ಸಿಎಂ ಎನ್.ಚಂದ್ರಬಾಬು ನಾಯ್ಡು ಅವರು ಸಂತಾಪ ಸೂಚಿಸಿದ್ದು, ಮೃತರ ಕುಟುಂಬಗಳಿಗೆ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಭರವಸೆ ನೀಡಿದ್ದಾರೆ.