ದಿಸ್ಪುರ್: ಆಟೋ ರಿಕ್ಷಾ ಮತ್ತು ಟ್ರಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಮೂವರು ಅಪ್ರಾಪ್ತರು ಸೇರಿದಂತೆ ಕನಿಷ್ಠ ಒಂಬತ್ತು ಮಂದಿ ಸಾವನ್ನಪ್ಪಿರುವ ಘಟನೆ ಅಸ್ಸಾಂನ ಕರೀಂಗಂಜ್ ಜಿಲ್ಲೆಯಲ್ಲಿ ನಡೆದಿದೆ.
ಈ ಘಟನೆ ಗುರುವಾರ ಬೆಳಿಗ್ಗೆ 7.30ರ ಸುಮಾರಿಗೆ ಜರುಗಿದ್ದು, ಮೃತರು ಛಠ್ ಪೂಜಾ ವಿಧಿವಿಧಾನಗಳನ್ನು ಮುಗಿಸಿ ಹಿಂದಿರುಗುತ್ತಿದ್ದರು. ಈ ವೇಳೆ ಕರೀಂಗಂಜ್ನ ಅಸ್ಸಾಂ-ತ್ರಿಪುರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 8 ರಲ್ಲಿ ಆಟೋ-ರಿಕ್ಷಾ ಮತ್ತು ಸಿಮೆಂಟ್ ಸಾಗಿಸುವ ಲಾರಿ ಮುಖಾಮುಖಿ ಡಿಕ್ಕಿಹೊಡೆದಿದೆ. ಇದನ್ನೂ ಓದಿ: ಯಮುನಾ ನದಿಯಲ್ಲಿ ವಿಷಕಾರಿ ನೊರೆ – ಜನರಲ್ಲಿ ಆತಂಕ
Advertisement
Advertisement
ಮೃತರನ್ನು ದುಜಾ ಬಾಯಿ ಪಣಿಕಾ, ಸಾಲು ಬಾಯಿ ಪಣಿಕಾ, ಗರುವ್ ದಾಸ್ ಪಣಿಕಾ, ಶಂಭು ದಾಸ್ ಪಣಿಕಾ, ಲಾಲೋನ್ ಗುಸ್ವಾಮಿ, ಪೂಜಾ ಗೋರ್ಹ್, ದೇಬ್ ಗೋರ್ಹ್, ಸಾನು ರೀ, ಮಾಂಗ್ಲೇ ಕರ್ಮಾಕರ್ ಮತ್ತು ತೂಪು ಕರ್ಮಾಕರ್ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಕಾನ್ಪುರದಲ್ಲಿ ಝಿಕಾ ವೈರಸ್ ಪತ್ತೆ – ಮತ್ತೆ 3 ಪ್ರಕರಣ, ಸೋಂಕಿತರ ಸಂಖ್ಯೆ 91ಕ್ಕೆ ಏರಿಕೆ
Advertisement
I deeply mourn tragic death of 9 persons in an accident at Baitakhal, Patharkhandi this morning. One injured is admitted to hospital.@assampolice is trying to trace driver of the truck who had fled the scene after hitting the auto deceased were travelling in.
Condolences.
— Himanta Biswa Sarma (@himantabiswa) November 11, 2021
Advertisement
ಈ ಕುರಿತಂತೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ತಮ್ಮ ಟ್ವಿಟರ್ನಲ್ಲಿ, ಇಂದು ಬೆಳಿಗ್ಗೆ ಪಾಥರ್ಖಂಡಿಯ ಬೈತಖಾಲ್ನಲ್ಲಿ ಸಂಭವಿಸಿದ ಅಪಘಾತದಲ್ಲಿ 9 ಜನರ ದುರಂತ ಸಾವಿಗೆ ನಾನು ತೀವ್ರ ಸಂತಾಪ ವ್ಯಕ್ತಪಡಿಸುತ್ತೇನೆ. ಗಾಯಗೊಂಡ ಓರ್ವನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಟೋಗೆ ಡಿಕ್ಕಿ ಹೊಡೆದು ನಂತರ ಸ್ಥಳದಿಂದ ಪರಾರಿಯಾಗಿದ್ದ ಟ್ರಕ್ನ ಚಾಲಕನನ್ನು ಪತ್ತೆಹಚ್ಚಲು ಇದೀಗ ಅಸ್ಸಾಂ ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.