ಇಂಫಾಲ್: ಮಣಿಪುರದಲ್ಲಿ ಹಿಂಸಾಚಾರ (Manipur Violence) ಮುಂದುವರೆದಿದ್ದು, ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಗೆ ಮಹಿಳೆ ಸೇರಿದಂತೆ 9 ಮಂದಿ ಸಾವನ್ನಪ್ಪಿದ್ದಾರೆ.
ಖಮೆನ್ಲೋಕ್ ಪ್ರದೇಶದಲ್ಲಿ ತಡರಾತ್ರಿ ಈ ದಾಳಿ ನಡೆದಿದೆ. ಮೃತ ದೇಹಗಳು ಗುರುತು ಸಿಗದಂತೆ ಗಾಯಗಳಾಗಿದ್ದು, ಅನೇಕ ಸುತ್ತಿನ ಗುಂಡುಗಳು ದೇಹವನ್ನು ಛಿದ್ರಗೊಳಿಸಿವೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಇಂಫಾಲ್‍ನ (Imphal) ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಸೇನೆಯ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಶಿವಮೊಗ್ಗದಲ್ಲಿ ಬಿಜೆಪಿ ಪ್ರತಿಭಟನೆ – ಮೆಸ್ಕಾಂ ಕಚೇರಿ ಮೇಲೆ ಕಲ್ಲು ತೂರಾಟ
Advertisement
ಮೇಟಿ ಮತ್ತು ಕುಕಿ ಸಮುದಾಯಗಳ ನಡುವಿನ ಜನಾಂಗೀಯ ಘರ್ಷಣೆಗಳಿಂದಾಗಿ ಕಳೆದ ಒಂದು ತಿಂಗಳಿನಿಂದ ಮಣಿಪುರದಲ್ಲಿ ಹಿಂಸಾಚಾರ ನಡೆಯುತ್ತಿದೆ. ಶಾಂತಿಯನ್ನು ಪುನರ್ ಸ್ಥಾಪಿಸುವ ಪ್ರಯತ್ನಗಳ ಮಧ್ಯೆ ಈ ಘಟನೆಯು ದೊಡ್ಡ ಹಿನ್ನಡೆಯಾಗಿದೆ. ರಾತ್ರಿಯ ಘಟನೆಯ ನಂತರ ಕಫ್ರ್ಯೂ ಸಡಿಲಿಕೆಯನ್ನು ನಿಬರ್ಂಧಿಸಲಾಗಿದೆ ಎಂದು ತಿಳಿದು ಬಂದಿದೆ.
Advertisement
Advertisement
ಬಹುಸಂಖ್ಯಾತ ಮೇಟಿಗಳಿಗೆ ಪರಿಶಿಷ್ಟ ಪಂಗಡಗಳ ಸ್ಥಾನಮಾನ ನೀಡುವ ಕ್ರಮದ ವಿರುದ್ಧ ಬುಡಕಟ್ಟು ಸಮುದಾಯ (Tribal) ಪ್ರತಿಭಟನೆ ನಡೆಸಿದ ನಂತರ ಈ ಹಿಂಸಾಚಾರ ಆರಂಭವಾಗಿತ್ತು. ಇಲ್ಲಿವರೆಗಿನ ಘರ್ಷಣೆಯಲ್ಲಿ ಸುಮಾರು 100 ಜನರು ಸಾವನ್ನಪ್ಪಿದ್ದಾರೆ. ಅನೇಕರು ಗಾಯಗೊಂಡಿದ್ದಾರೆ. ಸಾವಿರಾರು ಜನರನ್ನು ಸ್ಥಳಾಂತರಿಸಲಾಗಿದೆ.
Advertisement
ರಾಜ್ಯದ 16 ಜಿಲ್ಲೆಗಳಲ್ಲಿ 11 ಜಿಲ್ಲೆಗಳು ಕಫ್ರ್ಯೂ ವಿಧಿಸಲಾಗಿದೆ. ಹಿಂಸಾಚಾರವನ್ನು ಉತ್ತೇಜಿಸುವ ವದಂತಿಗಳನ್ನು ತಡೆಯಲು ರಾಜ್ಯಾದ್ಯಂತ ಇಂಟರ್ನೆಟ್ ಸ್ಥಗಿತಗೊಳಿಸಲಾಗಿದೆ. ಇದನ್ನೂ ಓದಿ: ಅವರು ರಾಜ್ಯದ ಹಣ ಲೂಟಿ ಮಾಡಲು ಬಂದಿರೋ ದೆಹಲಿ ಪ್ರತಿನಿಧಿ – `ಕೈ’ನಾಯಕನ ವಿರುದ್ಧ HDK ಕಿಡಿ