ಚೆನ್ನೈ: ಕಬ್ಬಿಣದ ರಾಡ್‍ಗಳನ್ನು ಕೊಂಡೊಯ್ಯುತ್ತಿದ್ದ ಟ್ರಕ್‍ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ 9 ಮಂದಿ ಸಾವನ್ನಪ್ಪಿದ್ದು ಸುಮಾರು 25 ಜನ ಗಾಯಗೊಂಡಿರುವ ಘಟನೆ ತಮಿಳುನಾಡಿನ ತಂಜಾವೂರ್ ಜಿಲ್ಲೆಯ ಓವರ್‍ಬ್ರಿಡ್ಜ್ ವೊಂದರ ಬಳಿ ನಡೆದಿದೆ.
ಶುಕ್ರವಾರದಂದು ತಿರುಪ್ಪುರ್‍ನಿಂದ ಕುಂಬಕೋಣಂಗೆ ಹೋಗುತ್ತಿದ್ದ ರಾಜ್ಯ ಸಾರಿಗೆ ಬಸ್‍ನಲ್ಲಿ ಸುಮಾರು 60 ಪ್ರಯಾಣಿಕರಿದ್ದರು. ಜಿಲ್ಲೆಯ ವಲ್ಲಂ ನಗರದ ಓವರ್‍ಬ್ರಿಡ್ಜ್ ಬಳಿ ಬಸ್ ಟ್ರಕ್‍ಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಟ್ರಕ್‍ನಲ್ಲಿದ್ದ ರಾಡ್‍ಗಳು ಬಸ್‍ನಲ್ಲಿದ್ದ ಕೆಲವು ಪ್ರಯಣಿಕರಿಗೆ ಚುಚ್ಚಿಕೊಂಡಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಬಸ್‍ನಲ್ಲಿದ್ದ 7 ಪ್ರಯಾಣಿಕರು ಸೇರಿದಂತೆ ಎರಡೂ ವಹನಗಳ ಚಾಲಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಗಾಯಗೊಂಡವರನ್ನು ತಂಜಾವೂರು ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಗೆ ನಿಖರವಾದ ಕಾರಣವೇನೆಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಜಿಲ್ಲಾಧಿಕಾರಿ ಎ ಅಣ್ಣಾದುರೈ ಹಾಗೂ ಎಸ್‍ಪಿ ಜೆ ಮಹೇಶ್ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ ಎಂದು ವರದಿಯಾಗಿದೆ.