ಮುಂಬೈ: ಬಾಂದ್ರಾ ರೈಲು ನಿಲ್ದಾಣದಲ್ಲಿ (Bandra Railway Station In Mumbai) ಕಾಲ್ತುಳಿತ (Stampede) ಉಂಟಾಗಿ 9 ಮಂದಿ ಗಾಯಗೊಂಡಿದ್ದಾರೆ.
ಉತ್ತರ ಪ್ರದೇಶದ ಗೋರಖ್ಪುರಕ್ಕೆ (Gorakhpur, Uttar Pradesh) ತೆರಳುತ್ತಿದ್ದ ರೈಲನ್ನು ಹತ್ತಲು ಪ್ರಯಾಣಿಕರು ಯತ್ನಿಸಿದಾಗ ನೂಕುನುಗ್ಗಲು ಸೃಷ್ಟಿಯಾಗಿದೆ. ಗಾಯಗೊಂಡವರ ಪೈಕಿ 7 ಮಂದಿಯ ಆರೋಗ್ಯ ಸ್ಥಿರವಾಗಿದ್ದು ಇಬ್ಬರ ಸ್ಥಿತಿ ಗಂಭೀರವಾಗಿದೆ.
Advertisement
Advertisement
STORY | 9 persons injured in stampede at Mumbai’s Bandra railway station
READ: https://t.co/sdZpmGELdk
VIDEO:
(Source: Third Party) pic.twitter.com/LIBuwJkniS
— Press Trust of India (@PTI_News) October 27, 2024
Advertisement
ದೀಪಾವಳಿ (Deepavali) ಹಬ್ಬದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶಕ್ಕೆ ತೆರಳಲು ರೈಲನ್ನು ಹತ್ತುವ ಸಂದರ್ಭದಲ್ಲಿ ಕಾಲ್ತುಳಿತ ಉಂಟಾಗಿದೆ ಎಂದು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ತಿಳಿಸಿದೆ. ಇದನ್ನೂ ಓದಿ: ಮಹಾರಾಷ್ಟ್ರ ಚುನಾವಣೆಯಲ್ಲಿ ಎಎಪಿ ಸ್ಪರ್ಧಿಸಲ್ಲ – ಮಹಾ ವಿಕಾಸ್ ಅಘಾಡಿ ಒಕ್ಕೂಟಕ್ಕೆ ಬೆಂಬಲ
Advertisement
ಬಾಂದ್ರಾದಿಂದ ಗೋರಖ್ಪುರಕ್ಕೆ ಹೋಗುವ ರೈಲು ಸಂಖ್ಯೆ 22921 ನಿಲ್ದಾಣದ ಪ್ಲಾಟ್ಫಾರ್ಮ್ ಸಂಖ್ಯೆ 1ಕ್ಕೆ ಬಂದಿತ್ತು. ಗೋರಖ್ಪುರದ ಸಾಪ್ತಾಹಿಕ ರೈಲು ಭಾನುವಾರ ಬೆಳಿಗ್ಗೆ 5:10ಕ್ಕೆ ಹೊರಡಬೇಕಿತ್ತು. ಆದರೆ ರೈಲು 5:56ಕ್ಕೆ ನಿಲ್ದಾಣಕ್ಕೆ ಬಂದಿದೆ. ಮೊದಲೇ ಭಾರೀ ಸಂಖ್ಯೆಯಲ್ಲಿ ಪ್ರಯಾಣಿಕರು ಜಮಾಯಿಸಿದ್ದರಿಂದ ನೂಕುನುಗ್ಗಲು ಉಂಟಾಗಿ ಈ ಘಟನೆ ನಡೆದಿದೆ.
ಗಾಯಗೊಂಡವರನ್ನು ರೈಲ್ವೇ ಪೊಲೀಸ್ ಸಿಬ್ಬಂದಿ ಮತ್ತು ಇತರ ಪ್ರಯಾಣಿಕರು ಸ್ಟ್ರೆಚರ್ಗಳಲ್ಲಿ ಎತ್ತಿಕೊಂಡು ಸಾಗಿಸಿದ್ದಾರೆ. ಸದ್ಯ ರೈಲ್ವೆ ನಿಲ್ದಾಣದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಮತ್ತು ಗಾಯಾಳುಗಳನ್ನು ಭಾಭಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಬಿಎಂಸಿ ಹೇಳಿದೆ.