ಗದಗ: ಟಂಟಂ ಪಲ್ಟಿಯಾದ ಪರಿಣಾಮ ಗರ್ಭಿಣಿ ಸೇರಿದಂತೆ 9 ಜನರಿಗೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ರೋಣ ತಾಲೂಕಿನ ಜೀಗೇರಿ ಕೆರೆ ಬಳಿ ನಡೆದಿದೆ.
ಗಜೇಂದ್ರಗಢ ಪಟ್ಟಣದಿಂದ ಮಾಲಗಿತ್ತಿ ಗ್ರಾಮಕ್ಕೆ ಹೊರಟಿದ್ದ ಟಂಟಂ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಕಂದಕಕ್ಕೆ ಉರುಳಿದೆ. ಅಪಘಾತದಲ್ಲಿ ಕೊಪ್ಪಳ ಗುಡ್ಡದ ದೇವಲಾಪುರ ಗ್ರಾಮದ ಗರ್ಭಿಣಿ ಕವಿತಾ ಶಾಂತಗೇರಿ ಎಂಬವರ ಹೊಟ್ಟೆಗೆ ಹೊಡೆತ ಬಿದ್ದಿದೆ. 70 ವರ್ಷದ ವೃದ್ಧರಿಗೆ ಗಂಭೀರ ಗಾಯವಾಗಿದ್ದು, ಇತರರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಗಾಯಾಳುಗಳು ಸಮೀಪದ ಗಜೇಂದ್ರಗಡ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗಂಭೀರವಾಗಿ ಗಾಯಗೊಂಡವರನ್ನು ಜಿಲ್ಲೆಯ ಜಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಈ ಕುರಿತು ಗದಗ ಜಿಲ್ಲೆ ಗಜೇಂದ್ರಗಢ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.