ಉಡುಪಿ: ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ವೇಳೆ ದೋಣಿ ಪಲ್ಟಿಯಾಗಿದ್ದು, 9 ಮಂದಿ ಮೀನುಗಾರರ (Fishermen Rescued) ರಕ್ಷಣೆ ಮಾಡಲಾಗಿದೆ.
ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ದೋಣಿ ಪಲ್ಟಿಯಾಗಿದೆ. ಅದೃಷ್ಟವಶಾತ್ ದೋಣಿಯಲ್ಲಿದ್ದ ಮೀನುಗಾರರು ಅಪಾಯದಿಂದ ಪಾರಾಗಿದ್ದಾರೆ. ಉಪ್ಪುಂದ ತಾರಾಪತಿಯಿಂದ ಬೆಳಗ್ಗೆ ದೋಣಿ ಮೀನುಗಾರಿಕೆಗೆ ತೆರಳಿತ್ತು. ಪುಂಡಲೀಕ ಅವರ ಒಡೆತನ ಶ್ರೀ ದುರ್ಗಾಪರಮೇಶ್ವರಿ ಹೆಸರಿನ ದೋಣಿ ಇದಾಗಿದ್ದು, 9 ಮಂದಿ ಮೀನುಗಾರರು ತೆರಳಿದ್ರು. ಇದನ್ನೂ ಓದಿ: ನಿನ್ನ ರಕ್ತ ಕುಡಿಯುತ್ತೇನೆಂದು ಗೆಳೆಯನ ಕುತ್ತಿಗೆಗೆ ಕಚ್ಚಿದವ ಹೆಣವಾದ!
5 ನಾಟಿಕಲ್ ಮೈಲುಗಳ ದೂರದಲ್ಲಿ ದೋಣಿ ಪಲ್ಟಿಯಾಗಿದ್ದು, ಸಮೀಪದ ದೋಣಿಗಳಿಗೆ ಮಾಹಿತಿ ರವಾನೆ ಹಿನ್ನೆಲೆಯಲ್ಲಿ ಮೀನುಗಾರರು ರಕ್ಷಣೆ ಮಾಡಿದ್ದಾರೆ. ಅಪಘಾತಕ್ಕೀಡಾದ ದೋಣಿಯಲ್ಲಿದ್ದ ನೀರನ್ನು ಖಾಲಿ ಮಾಡಿ ಬಳಿಕ ದೋಣಿಯನ್ನು ಮರವಂತೆ ಬಂದರಿಗೆ ರವಾನೆ ಮಾಡಲಾಗಿದೆ.
ಅಪಘಾತದಲ್ಲಿ ದೋಣಿಯಲ್ಲಿದ್ದ ಬಲೆ, ಇಂಜಿನ್ ಹಾನಿಯಾಗಿದ್ದು, ಒಟ್ಟು 2 ಲಕ್ಷಕ್ಕೂ ಅಧಿಕ ನಷ್ಟವಾಗಿದೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]