ತಿರುವನಂತಪುರಂ: ಎರ್ನಾಕುಲಂನ (Ernakulam) ಮುಲಾಂತುರುತಿಯ (Mulanthuruthy) ಬಸೆಲಿಯಸ್ ಶಾಲೆಯ (Baselious School) ವಿದ್ಯಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಟೂರಿಸ್ಟ್ ಬಸ್, ಕೆಎಸ್‍ಆರ್‌ಟಿಸಿ (KSRTC) ಬಸ್‍ಗೆ ಡಿಕ್ಕಿ ಹೊಡೆದ ಪರಿಣಾಮ ಒಂಬತ್ತು ಮಂದಿ ಸಾವನ್ನಪ್ಪಿರುವ ಘಟನೆ ವಡಕ್ಕೆಂಚೇರಿಯಲ್ಲಿ (Vadakkenchery) ನಡೆದಿದೆ.
ಈ ರಸ್ತೆ ಅಪಘಾತ ವಾಳಯಾರ್-ವಡಕ್ಕೆಂಚೇರಿ (Walayar-Vadakkencherry) ರಾಷ್ಟ್ರೀಯ ಹೆದ್ದಾರಿಯ ಅಂಜುಮೂರ್ತಿ ಮಂಗಲಂ ಬಸ್ ನಿಲ್ದಾಣದ ( Anjumoorthy Mangalam bus stop) ಬಳಿ ನಡೆದಿದ್ದು, ಕಾರನ್ನು ಓವರ್ ಟೇಕ್ ಮಾಡಲು ಹೋಗಿ ಕೆಎಸ್‍ಆರ್‌ಟಿಸಿ ಬಸ್‍ಗೆ ಹಿಂಬದಿಯಿಂದ ಟೂರಿಸ್ಟ್ ಬಸ್ ಡಿಕ್ಕಿ ಹೊಡೆದಿದೆ. ಈ ವೇಳೆ ನಿಯಂತ್ರಣ ತಪ್ಪಿ ಟೂರಿಸ್ಟ್ ಬಸ್ ಪಲ್ಟಿಯಾಗಿದೆ. ಇದನ್ನೂ ಓದಿ: ದುರ್ಗಾದೇವಿ ಮೂರ್ತಿ ವಿಸರ್ಜನೆ ವೇಳೆ ದಿಢೀರ್ ಪ್ರವಾಹ – 8 ಮಂದಿ ಸಾವು, ಮೋದಿ ಸಂತಾಪ
Advertisement
Kerala | 9 dead, 38 injured after a tourist bus crashed into KSRTC bus in Vadakkenchery in Palakkad district. The tourist bus was carrying students & teachers of Baselios Vidyanikethan in Ernakulam dist & was going to Ooty https://t.co/xIqHhROqff pic.twitter.com/XimJTDTPhA
— ANI (@ANI) October 6, 2022
Advertisement
ಗುರುವಾರ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ 12 ಮಂದಿ ಗಂಭೀರವಾಗಿ ಗಾಯಗೊಂಡಿದ್ದರೆ, 28 ಮಂದಿ ಸಣ್ಣಪುಟ್ಟ ಗಾಯಗಳಾಗಿವೆ. ಟೂರಿಸ್ಟ್ ಬಸ್‍ನಲ್ಲಿ 41 ವಿದ್ಯಾರ್ಥಿಗಳು, ಐವರು ಶಿಕ್ಷಕರು ಮತ್ತು ಬಸ್‍ನ ಇಬ್ಬರು ಸಿಬ್ಬಂದಿ ಪ್ರಯಾಣಿಸುತ್ತಿದ್ದರು ಮತ್ತು ಕೆಎಸ್‍ಆರ್‍ಟಿಸಿ ಬಸ್‍ನಲ್ಲಿ 49 ಮಂದಿ ಪ್ರಯಾಣಿಕರಿದ್ದರು.
Advertisement
Kerala | 9 people died while 38 were injured after a tourist bus crashed into Kerala State Road Transport Corporation (KSRTC) bus in Vadakkenchery in Palakkad district: State minister MB Rajesh
— ANI (@ANI) October 6, 2022
Advertisement
ಕೆಎಸ್‍ಆರ್‌ಟಿಸಿ ಬಸ್‍ನಲ್ಲಿ ಮೂವರು ಮತ್ತು ಟೂರಿಸ್ಟ್ ಬಸ್‍ನಲ್ಲಿ ಐವರು ಸಾವನ್ನಪ್ಪಿದ್ದು, ಇವರಲ್ಲಿ ಆರು ಪುರುಷರು ಮತ್ತು ಮೂವರು ಮಹಿಳೆಯರಾಗಿದ್ದಾರೆ. ಕೆಎಸ್‍ಆರ್‌ಟಿಸಿ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದ ಮೃತರನ್ನು ತ್ರಿಶೂರ್‌ನ ರೋಹಿತ್ ರಾಜ್ (24), ಕೊಲ್ಲಂನ ಓ ಅನೂಪ್ (22), ನ್ಯಾನ್ಸಿ ಜಾರ್ಜ್ ಮತ್ತು ವಿಕೆ ವಿಷ್ಣು ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ರಾವಣನ ಬದಲಾಗಿ, ಇಡಿ, ಸಿಬಿಐ ಪ್ರತಿಕೃತಿ ಸುಟ್ಟು ವಿಜಯದಶಮಿ ಆಚರಿಸಿದ ಕೈ ಕಾರ್ಯಕರ್ತರು
ಇದೀಗ ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಪಾಲಕ್ಕಾಡ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೃತ ದೇಹಗಳು ಅಲತ್ತೂರ್ ಮತ್ತು ಪಾಲಕ್ಕಾಡ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.