ಚಂಡೀಗಢ: ನಿಯಂತ್ರಣ ತಪ್ಪಿ ಮಿನಿ ಬಸ್ (Mini Bus) ಪಲ್ಟಿಯಾದ ಪರಿಣಾಮ 9 ಮಂದಿ ಸಾವನ್ನಪ್ಪಿದ್ದು, 33 ಮಂದಿ ಗಾಯಗೊಂಡಿರುವ ಘಟನೆ ಪಂಜಾಬ್‌ನ (Punjab) ಹೋಶಿಯಾರ್‌ಪುರ (Hoshiarpur) ಜಿಲ್ಲೆಯ ಸಗ್ರಾನ್ ಗ್ರಾಮದ ಬಳಿ ನಡೆದಿದೆ.
ಸುಮಾರು 40 ಮಂದಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಮಿನಿ ಬಸ್ ಹಾಜಿಪುರ ಪಟ್ಟಣದಿಂದ ದಸುಯಾಗೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ ಎಂದು ಮುಕೇರಿಯನ್ ಉಪ ಪೊಲೀಸ್ ವರಿಷ್ಠಾಧಿಕಾರಿ ಕುಲ್ವಿಂದರ್ ಸಿಂಗ್ ವಿರ್ಕ್ ತಿಳಿಸಿದ್ದಾರೆ. ಇದನ್ನೂ ಓದಿ: ಶಿರಸಿ ನಗರಸಭೆಯಲ್ಲಿ 21 ಲಕ್ಷ ಮೌಲ್ಯದ ಐರನ್ ಪೈಪ್ ಕಳ್ಳತನ ಕೇಸ್ – ನಗರಸಭೆ ಕಮಿಷನರ್, ಮಾಜಿ ಅಧ್ಯಕ್ಷ ಸೇರಿ 7 ಆರೋಪಿಗಳು
ಗಾಯಾಳು ಪ್ರಯಾಣಿಕರನ್ನು ಚಿಕಿತ್ಸೆಗಾಗಿ ದಸುಯಾ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ತಕ್ಷಣವೇ ಸ್ಥಳೀಯ ಅಧಿಕಾರಿಗಳು ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಗಳನ್ನು ಪ್ರಾರಂಭಿಸಿದ್ದಾರೆ. ಗಾಯಾಳು ಪ್ರಯಾಣಿಕರನ್ನು ಚಿಕಿತ್ಸೆಗಾಗಿ ದಸುಯಾ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಕೇಂದ್ರದ ಮಾಜಿ ಸಚಿವೆ ಸ್ಮೃತಿ ಇರಾನಿಯ ಸೀರಿಯಲ್ ಫಸ್ಟ್ ಲುಕ್ ಔಟ್
ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಮತ್ತು ಗಂಭೀರವಾಗಿ ಗಾಯಗೊಂಡವರಿಗೆ 50,000 ರೂ. ಪರಿಹಾರವನ್ನು ಸರ್ಕಾರದಿಂದ ನೀಡಲಾಗುವುದು. ಗಾಯಾಳುಗಳ ಸಂಪೂರ್ಣ ವೈದ್ಯಕೀಯ ವೆಚ್ಚವನ್ನು ಸಹ ಸರ್ಕಾರ ಭರಿಸುತ್ತದೆ ಎಂದು ಡಿಸಿ ಜೈನ್ ತಿಳಿಸಿದ್ದಾರೆ. ಇದನ್ನೂ ಓದಿ: KSRTC ಬಸ್‌ನಲ್ಲಿ ಹೃದಯಾಘಾತ – ಆಸ್ಪತ್ರೆಯಲ್ಲಿ ವೈದ್ಯರಿಲ್ಲದೇ ವ್ಯಕ್ತಿ ಸಾವು
ಮೃತರನ್ನು ಬುಧಾಬಾರ್ ಗ್ರಾಮದ ರಾಜು ಬಾಲಾ (5), ಮೀನಾ (30), ಕಾಂಗ್ರಾ ಜಿಲ್ಲೆಯ (ಹಿಮಾಚಲ ಪ್ರದೇಶ) ಲವ್ ಕುಮಾರ್ (50), ಹಾಲೇರ್ ಗ್ರಾಮದ ಗುರ್ಮಿತ್ ರಾಮ್ (65), ಜಲಾಲ್ ಚಕ್ ಗ್ರಾಮದ ಸತ್ವಿಂದರ್ ಕೌರ್ (55), ದಾಸುಯಾದ ಬಲ್ಬೀರ್ ಕೌರ್ (60), ಗುರುದಾಸ್ಪುರ ಜಿಲ್ಲೆಯ ಸಂಜೀವ್ ಕುಮಾರ್ (30) ಮತ್ತು ಸಹೋರಾ ಗ್ರಾಮದ ಸುಬಾಗ್ ರಾಣಿ (55) ಎಂದು ಗುರುತಿಸಲಾಗಿದೆ ಎಂದು ಸಿವಿಲ್ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ. ಮನಮೋಹನ್ ಸಿಂಗ್ ಮಾಹಿತಿ ನೀಡಿದ್ದಾರೆ. ಸುಮಾರು 50 ವರ್ಷ ವಯಸ್ಸಿನ ಒಬ್ಬ ವ್ಯಕ್ತಿಯ ಗುರುತು ಇನ್ನೂ ದೃಢಪಟ್ಟಿಲ್ಲ ಎಂದು ಸಿಂಗ್ ಹೇಳಿದರು. ಇದನ್ನೂ ಓದಿ: Shivamogga | ದೆವ್ವ ಬಿಡಿಸುತ್ತೇನೆಂದು ಚಿತ್ರಹಿಂಸೆ – ಮಹಿಳೆ ಸಾವು
ಆಸ್ಪತ್ರೆಗೆ ದಾಖಲಾಗಿರುವ 33 ಜನರಲ್ಲಿ, ಗಂಭೀರವಾಗಿ ಗಾಯಗೊಂಡಿರುವ ಮೂವರು, ಸಹೋರಾದ ರಾಜ್ ರಾಣಿ (55), ಚಕ್ರಾಲ್‌ನ ಸಂಜೀವ್ ಸಿಂಗ್ (45) ಮತ್ತು ಖುಷಿ ಮೆಹ್ತಾ (22) ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಉನ್ನತ ವೈದ್ಯಕೀಯ ಕೇಂದ್ರಗಳಿಗೆ ಕಳುಹಿಸಲಾಗಿದೆ. ಆರು ಜನರನ್ನು ಪ್ರಥಮ ಚಿಕಿತ್ಸೆ ನೀಡಿದ ನಂತರ ಬಿಡುಗಡೆ ಮಾಡಲಾಗಿದೆ. ಉಳಿದ 24 ಗಾಯಾಳುಗಳ ಸ್ಥಿತಿ ಸ್ಥಿರವಾಗಿದೆ ಎಂದು ಡಾ.ಸಿಂಗ್ ಮಾಹಿತಿ ನೀಡಿದ್ದಾರೆ. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಘಟನೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನಮಗೆ ಕುಡಿಯೋಕೆ ನೀರು ಕೊಡಿ: ಸಿಎಂಗೆ ವಿದ್ಯಾರ್ಥಿನಿ ಪತ್ರ