– ಇತರ ಆರೋಪಿಗಳಿಂದ 256 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ
– ಚಾರ್ಜ್‌ಶೀಟ್‌ನಲ್ಲಿ ಅನೇಕ ರಹಸ್ಯಗಳು ಬಯಲು
ರಾಂಚಿ: ಅಕ್ರಮ ಹಣ ವರ್ಗಾವಣೆ & ಭೂ ಕಬಳಿಕೆ (Land Mafia) ಪ್ರಕರಣದಲ್ಲಿ ಬಂಧಿತರಾಗಿರುವ ಜಾರ್ಖಂಡ್‌ನ ಮಾಜಿ ಸಿಎಂ ಹೇಮಂತ್ ಸೊರೇನ್ ಅವರಿಗೆ ಸೇರಿದ್ದ 31 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (Enforcement Directorate) ಜಪ್ತಿ ಮಾಡಿದೆ. ಇದರೊಂದಿಗೆ ದೆಹಲಿಯಲ್ಲಿರುವ ಅವರ ನಿವಾಸದಿಂದ 36 ಲಕ್ಷ ರೂ. ನಗದು ಹಾಗೂ ಬಿಎಂಡಬ್ಲ್ಯೂ ಕಾರನ್ನು ಜಪ್ತಿ ಮಾಡಲಾಗಿದೆ.
Advertisement
ಈಗಾಗಲೇ ಹೇಮಂತ್ ಸೊರೇನ್ (Hemant Soren) ವಿರುದ್ಧ ಜಾರಿ ನಿರ್ದೇಶನಾಲಯ ಜಾರ್ಜ್‌ಶೀಟ್ ದಾಖಲಿಸಿದ್ದು, ಪ್ರಕರಣದ ಹಲವು ರಹಸ್ಯಗಳು ಬೆಳಕಿಗೆ ಬಂದಿದೆ. ಪ್ರಕರಣದಲ್ಲಿ ಇತರ ಆರೋಪಿಗಳಿಂದ ಸುಮಾರು 256 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಇಡಿ ಜಪ್ತಿ ಮಾಡಿದೆ. ಪ್ರಕರಣದಲ್ಲಿ ಈವರೆಗೆ ಹೇಮಂತ್ ಸೊರೇನ್ ಮತ್ತು ರಾಂಚಿಯ ಮಾಜಿ ಐಎಎಸ್ ಅಧಿಕಾರಿ ಛಾವಿ ರಂಜನ್ ಸೇರಿ 16 ಆರೋಪಿಗಳನ್ನ ಬಂಧಿಸಲಾಗಿದೆ. ಆದ್ರೆ ಹೇಮಂತ್ ಸೊರೇನ್ ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದಾರೆ. ಇದನ್ನೂ ಓದಿ: ಇವಿಎಂನಲ್ಲೇ ಚುನಾವಣೆ, ಸ್ಲಿಪ್ ಮತದಾರನ ಕೈಗೆ ಸಿಗಬೇಕು : ಕಾಂಗ್ರೆಸ್ ಪ್ರಣಾಳಿಕೆ
Advertisement
Advertisement
ಚಾರ್ಜ್‌ಶೀಟ್‌ನ ಪ್ರಕಾರ, ಹೇಮಂತ್ ಸೊರೇನ್ ಮತ್ತು ಅವರ ಇತರ ಸ್ನೇಹಿತರು ಭೂ ಮಾಫಿಯಾದ ಪ್ರಕರಣದ ಭಾಗವಾಗಿದ್ದಾರೆ. ಹಾಗಾಗಿ ಹೇಮಂತ್ ಸೊರೇನ್ ಮತ್ತು ಇತರ ನಾಲ್ವರಾದ ಭಾನು ಪ್ರತಾಪ್ ಪ್ರಸಾದ್, ರಾಜ್ ಕುಮಾರ್ ಪಹಾನ್, ಹಿಲರಿಯಾಸ್ ಮತ್ತು ಬಿನೋದ್ ಸಿಂಗ್ ವಿರುದ್ಧ ಮಾರ್ಚ್ 30 ರಂದು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್)ಯಡಿ ವಿಶೇಷ ನ್ಯಾಯಾಲಯದಲ್ಲಿ ಇ.ಡಿ ಚಾರ್ಜ್ ಶೀಟ್ ಸಲ್ಲಿಸಿತ್ತು. ಅಲ್ಲದೇ 8.86 ಎಕರೆ ಜಾಗವನ್ನು ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿತ್ತು. ಇದನ್ನೂ ಓದಿ: 2019ರ ಲೋಕಸಭಾ ಚುನಾವಣೆ; ಹೆಚ್ಚು, ಕಡಿಮೆ ಮತಗಳ ಅಂತರದಿಂದ ಗೆದ್ದವರಿವರು
Advertisement
ನ್ಯಾಯಾಲಯದ ಆದೇಶದ ಮೇರೆಗೆ ಕ್ರಮಕ್ಕೆ ಮುಂದಾಗಿದ್ದ ಇಡಿ, ಸಹಚರರಾದ ಭಾನುಪ್ರಸಾದ್ ಪ್ರತಾಪ್ ಅವರ ಕಚೇರಿಯನ್ನು ಪರಿಶೀಲಿಸಿದಾಗ 44 ಪುಟಗಳ ಕಡತವನ್ನ ಇಡಿ ಪತ್ತೆ ಮಾಡಿತ್ತು. ಇದರಲ್ಲಿ ಹೇಮಂತ್ ಸೊರೇನ್ ಒಡೆತನದಲ್ಲಿದ್ದ 8.86 ಎಕರೆ ಭೂಪ್ರದೇಶಕ್ಕೆ ಸಂಬಂಧಿಸಿದ ಬಗ್ಗೆ ನಿರ್ಣಾಯಕ ಮಾಹಿತಿಗಳಿತ್ತು. ಸೊರೇನ್ ರಾಂಚಿಯ ಬಾರ್ಗೇನ್ ಪ್ರದೇಶದಲ್ಲಿ 8.86 ಎಕರೆ ಭೂಮಿಯನ್ನು 2011 ರಿಂದ ಅಕ್ರಮವಾಗಿ ವಶಪಡಿಸಿಕೊಂಡಿದ್ದಾರೆ. ಅವರ ಆಪ್ತರಾದ ರಂಜಿತ್ ಸಿಂಗ್, ಹಿಲೇರಿಯಸ್ ಕಚಾಪ್ ಮತ್ತು ರಾಜ್ ಕುಮಾರ್ ಅವರು ಇದಕ್ಕೆ ಸಹಕಾರ ನೀಡಿದ್ದಾರೆ. ಅಲ್ಲದೇ ಅನೇಕ ಸರ್ಕಾರಿ ಅಧಿಕಾರಿಗಳೂ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಭೂಕಬಳಿಕೆಗೆ ಅನುಕೂಲವಾಗುವಂತೆ ದಾಖಲೆಗಳನ್ನು ಬದಲಾಯಿಸಿದ್ದಾರೆ ಎಂದು ಇಡಿ ತನ್ನ ಚಾರ್ಜ್ ಶೀಟ್‌ನಲ್ಲಿ ಉಲ್ಲೇಖಿಸಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಳೆದ ಜನವರಿಯಲ್ಲಿ ಸೊರೇನ್ ಅವರನ್ನು ಇ.ಡಿ ಬಂಧಿಸಿತ್ತು. ಬಂಧನಕ್ಕೂ ಮುನ್ನ ಮುಖ್ಯಮಂತ್ರಿ ಸ್ಥಾನಕ್ಕೆ ಅವರು ರಾಜೀನಾಮೆ ನೀಡಿದ್ದರು. ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದು, ರಾಂಚಿಯ ಹೊತ್ವಾರ್‌ನಲ್ಲಿರುವ ಬಿರ್ಸಾ ಮುಂಡಾ ಕೇಂದ್ರ ಕಾರಾಗೃಹದಲ್ಲಿದ್ದಾರೆ. ಇದನ್ನೂ ಓದಿ: ಮೋದಿ ನಾಯಕತ್ವ, ಪರಿಕಲ್ಪನೆಯ ಆಕರ್ಷಣೆಯೇ ಬಿಜೆಪಿ ಸೇರಲು ಕಾರಣ: ಸುಮಲತಾ