CoronaLatestLeading NewsMain PostNational

ಬೂಸ್ಟರ್ ಡೋಸ್ ಪಡೆಯಲು 9 ರಿಂದ 12 ತಿಂಗಳ ಅಂತರ ಕಡ್ಡಾಯ?

ನವದೆಹಲಿ: ದೇಶದಲ್ಲಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ಏರಿಕೆ ಕಾಣುತ್ತಿದ್ದಂತೆ ದೇಶದಲ್ಲಿ ಫ್ರಂಟ್‍ಲೈನ್ ವರ್ಕರ್ಸ್ ಮತ್ತು 60 ವರ್ಷ ಮೇಲ್ಪಟ್ಟವರು ಬೂಸ್ಟರ್ ಡೋಸ್‍ಗೆ ಅರ್ಹರು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಈ ನಡುವೆ ಬೂಸ್ಟರ್ ಡೋಸ್ ಪಡೆಯಲು 2ನೇ ಡೋಸ್ ಲಸಿಕೆ ಬಳಿಕ 9 ರಿಂದ 12 ತಿಂಗಳ ಅಂತರ ಇರಬೇಕೆಂದು ವರದಿಯಾಗಿದೆ.

 

2 ಡೋಸ್ ಲಸಿಕೆ ಪಡೆದ ಅರ್ಹ ವ್ಯಕ್ತಿ ಬೂಸ್ಟರ್ ಡೋಸ್ ಪಡೆಯಬೇಕಾದರೆ ಕನಿಷ್ಠ ಪಕ್ಷ 9 ರಿಂದ 12 ತಿಂಗಳು ಆಗಿರಬೇಕೆಂದು ವರದಿಯಾಗಿದ್ದು, ಈ ಬಗ್ಗೆ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿ (ಎನ್‍ಟಿಎಜಿಐ) ಪರಿಶೀಲಿಸುತ್ತಿದೆ ಎಂದು ಆಪ್ತ ಮೂಲಗಳಿಂದ ವರದಿ ಹೊರಬಿದ್ದಿದೆ. ಇದನ್ನೂ ಓದಿ: ಜ.3 ರಿಂದ 15 ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ: ಮೋದಿ

ಈಗಾಗಲೇ ದೇಶದಲ್ಲಿ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಯನ್ನು 141 ಕೋಟಿಗೂ ಹೆಚ್ಚು ಡೋಸ್‍ಗಳನ್ನು ನೀಡಲಾಗಿದೆ. 90%ಕ್ಕಿಂತ ಹೆಚ್ಚು ಅರ್ಹ ಜನಸಂಖ್ಯೆಗೆ ಮೊದಲ ಡೋಸ್ ಲಸಿಕೆ ಹಾಕಲಾಗಿದೆ. ಇದೀಗ ಫ್ರಂಟ್‍ಲೈನ್ ವರ್ಕರ್ಸ್ ಮತ್ತು 60 ವರ್ಷ ಮೇಲ್ಪಟ್ಟವರು ವೈದ್ಯರ ಶಿಫಾರಸಿನ ಮೇರೆಗೆ 2022ರ ಜನವರಿ 10 ರಿಂದ ಬೂಸ್ಟರ್ ಡೋಸ್‍ಗೆ ಅರ್ಹರು ಪ್ರಧಾನಿ ಮೋದಿ ಶನಿವಾರ ಪ್ರಕಟಿಸಿದ್ದರು. ಇದನ್ನೂ ಓದಿ: 15 ರಿಂದ 18 ವರ್ಷದ ಮಕ್ಕಳಿಗೆ ಕೋವ್ಯಾಕ್ಸಿನ್ ತುರ್ತು ಬಳಕೆಗೆ ಅನುಮತಿ

ಇದೀಗ ಎನ್‍ಟಿಎಜಿಐ ಲಸಿಕೆಯ ಅಂತರದ ಬಗ್ಗೆ ಪರಿಶೀಲಿಸಿ ಶೀರ್ಘವೇ ಈ ಬಗ್ಗೆ ಸ್ಪಷ್ಟವಾಗಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

Leave a Reply

Your email address will not be published.

Back to top button