– ಅಳಲು ತೋಡಿಕೊಂಡ ಸೈನಿಕರು
ಬೆಳಗಾವಿ: ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡುವಂತೆ ಆಗ್ರಹಿಸಿ ಕಳೆದ ಮೂರು ದಿನಗಳಿಂದ ನಿರಂತರ ಮುಷ್ಕರ ನಡೆಯುತ್ತಿದೆ. ಪರಿಣಾಮ ರಾಜ್ಯಾದ್ಯಂತ ಬಸ್ ಬಂದ್ ಆಗಿದ್ದು, ಪ್ರಯಾಣಿಕರು ಪರದಾಡುತ್ತಿದ್ದಾರೆ. ಇದೇ ರೀತಿ ಇದೀಗ ಈ ಬಂದ್ ಬಿಸಿ ದೇಶ ಕಾಯುವ ಯೋಧರಿಗೂ ತಟ್ಟಿದೆ.
ಇಬ್ಬರು ಯೋಧರು ಬರೋಬ್ಬರಿ 9 ಸಾವಿರ ರೂ. ಬಾಡಿಗೆ ನೀಡಿ ಕ್ಯಾಬ್ ನಲ್ಲಿ ಬಳ್ಳಾರಿಯಿಂದ ಬೆಳಗಾವಿಗೆ ಬಂದಿದ್ದಾರೆ. ಈ ಇಬ್ಬರು ಯೋಧರು ಬೆಳಗಾವಿಯ ಮರಾಠಾ ಲೈಟ್ ಇನ್ಫೆಂಟ್ರಿಗೆ ಹಾಜರಾಗಬೇಕಿದ್ದರು. ಬೆಳಗಾವಿಯಲ್ಲಿ ರಿಪೋರ್ಟ್ ಮಾಡಿ ಜಮ್ಮುಗೆ ತೆರಳಬೇಕಿದ್ದರಿಂದ ಅವರಿಗೆ ಇಷ್ಟೊಂದು ಹಣ ಕೊಟ್ಟಾದರೂ ತೆರಳುವ ಅನಿವಾರ್ಯವಿತ್ತು.
ಬಸ್ ಬಂದ್‍ನಿಂದಾಗಿ ತುಂಬಾ ತೊಂದರೆಯಾಗುತ್ತಿದೆ. ಇನ್ನೂ ಹಲವು ಯೋಧರು ಬೆಳಗಾವಿಗೆ ಬರಬೇಕಾಗಿದೆ. ಸರ್ಕಾರಿ ಬಸ್‍ಗಳು ಆರಂಭವಾದರೆ ಕಡಿಮೆ ಹಣದಲ್ಲಿ ಬರಬಹುದು. ಬಸ್‍ಗಳ ಸಂಚಾರ ಆರಂಭಿಸಿ ಅನುಕೂಲ ಮಾಡಿಕೊಡಿ ಎಂದು ಯೋಧರೊಬ್ಬರು ತಮ್ಮ ಅಳಲು ತೋಡಿಕೊಂಡರು.