ಶಾರ್ಜಾ: ಇಂದು ನಡೆದ ಐಪಿಎಲ್ 9ನೇ ಮ್ಯಾಚಿನಲ್ಲಿ ರಾಹುಲ್ ತೆವಾಟಿಯಾ ಅವರ ಸ್ಫೋಟಕ ಬ್ಯಾಟಿಂಗ್ ಸಹಾಯದಿಂದ ರಾಜಸ್ಥಾನ್ ರಾಯಲ್ಸ್ ತಂಡ 4 ವಿಕೆಟ್‍ಗಳಿಂದ ರೋಚಕ ಗೆಲುವು ಸಾಧಿಸಿದೆ.
ಇಂದು ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಟಾಸ್ ಸೋತ ಪಂಜಾಬ್ ತಂಡ ಮೊದಲು ಬ್ಯಾಟಿಂಗ್ ಮಾಡಿತು. ಮಯಾಂಕ್ ಅಗರ್ವಾಲ್ ಅವರ ಸೂಪರ್ ಸೆಂಚ್ಯೂರಿ ಮತ್ತು ನಾಯಕ ರಾಹುಲ್ ಅವರ ಅರ್ಧಶತಕದಿಂದ ನಿಗದಿತ 20 ಓವರಿನಲ್ಲಿ 223 ರನ್ ಸೇರಿಸಿತು. ಇದನ್ನು ಬೆನ್ನಟ್ಟಿದ ರಾಜಸ್ಥಾನ್ ತಂಡ ನಾಯಕ ಸ್ಟೀವ್ ಸ್ಮಿತ್ ಮತ್ತು ಸಂಜು ಸ್ಯಾಮ್ಸನ್ ಅವರ ಅರ್ಧಶತಕ ಹಾಗೂ ಕೊನೆಯಲ್ಲಿ ತೆವಾಟಿಯಾ ಅವರ ಸ್ಫೋಟಕ ಬ್ಯಾಟಿಂಗ್‍ನಿಂದ 3 ಎಸೆತ ಇರುವಂತೆಯೇ ಗುರಿಯನ್ನು ತಲುಪಿತು.
Advertisement
Is there a twist in the tale?
Tewatia on ????????#Dream11IPL #RRvKXIP pic.twitter.com/yoFLzxp9IB
— IndianPremierLeague (@IPL) September 27, 2020
Advertisement
ತೆವಾಟಿಯಾ ಸ್ಫೋಟಕ ಆಟ
ಉತ್ತಮವಾಗಿ ಆಡುತ್ತಿದ್ದ ಸಂಜು ಸ್ಯಾಮ್ಸನ್ ಅವರು 16ನೇ ಓವರಿನಲ್ಲಿ ಔಟ್ ಆದರು. ಈ ವೇಳೆ ಪಂದ್ಯ ರಾಯಲ್ಸ್ ಕೈಜಾರುವ ಹಂತದಲ್ಲಿ ಇತ್ತು. ಆದರೆ ಈ ವೇಳೆ ಸ್ಫೋಟಕ ಬ್ಯಾಟಿಂಗ್‍ಗೆ ಮುಂದಾದ ತೆವಾಟಿಯಾ 17ನೇ ಓವರಿನಲ್ಲಿ ಕಮಾಲ್ ಮಾಡಿದರು. ಶೆಲ್ಡನ್ ಕಾಟ್ರೆಲ್ ಎಸೆದ ಈ ಓವರಿನಲ್ಲಿ ಬರೋಬ್ಬರಿ ಐದು ಸಿಕ್ಸರ್ ಸಿಡಿಸಿ ಪಂದ್ಯಕ್ಕೆ ರೋಚಕ ಟ್ವಿಸ್ಟ್ ಕೊಟ್ಟರು. ನಂತರ ಬಂದ ಜೋಫ್ರಾ ಆರ್ಚರ್ ಅವರು ಬ್ಯಾಕ್ ಟು ಬ್ಯಾಕ್ ಎರಡು ಸಿಕ್ಸರ್ ಸಿಡಿಸಿ ರಾಯಲ್ಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
Advertisement
ಮೊದಲ 23 ಎಸೆತದಲ್ಲಿ 17 ರನ್ ನಂತರದ 8 ಎಸೆತದಲ್ಲಿ ತೆವಾಟಿಯಾ 36 ರನ್ ಚಚ್ಚಿದ್ದರು. ಜೊತೆಗೆ 31 ಬಾಲಿಗೆ 51 ರನ್ ಸಿಡಿಸಿ ಔಟ್ ಆದರು. ಈ ಗೆಲುವಿನ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಚೇಸ್ ಮಾಡಿದ ತಂಡ ಎಂಬ ಹೆಗ್ಗಳಿಕಗೆ ರಾಜಸ್ಥಾನ ಪಾತ್ರವಾಗಿದೆ.
Advertisement
FIFTY!
That's a half-century for @IamSanjuSamson off 27 deliveries. His 12th in IPL.
Live – https://t.co/T6B9MF7F54 #Dream11IPL #RRvKXIP pic.twitter.com/lUVyG5Z4ix
— IndianPremierLeague (@IPL) September 27, 2020
ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಆರಂಭಿಕ ಆಘಾತ ನೀಡಿದ ಶೆಲ್ಡನ್ ಕಾಟ್ರೆಲ್ ಜೋಸ್ ಬಟ್ಲರ್ ಅವರನ್ನು ಔಟ್ ಮಾಡಿದರು. ಇದಾದ ನಂತರ ಜೊತೆಯಾದ ನಾಯಕ ಸ್ಟೀವನ್ ಸ್ಮಿತ್ ಮತ್ತು ಸಂಜು ಸ್ಯಾಮ್ಸನ್ ಬಿರುಸಿನ ಆಟವಾಡಿದರು. ಪರಿಣಾಮ ರಾಜಸ್ಥಾನ್ ತಂಡ ಕೇವಲ 4.3 ಓವರಿನಲ್ಲೇ ಅರ್ಧಶತಕ ದಾಟಿತು. ಜೊತೆಗೆ ಸ್ಮಿತ್ ಅವರ ಭರ್ಜರಿ ಬ್ಯಾಕ್ ಟು ಬ್ಯಾಕ್ ಬೌಂಡರಿಗಳ ಸಹಾಯದಿಂದ ಪವರ್ ಪ್ಲೇ ಮುಕ್ತಾಯದ ವೇಳೆಗೆ ಬರೋಬ್ಬರಿ 69 ರನ್ ಕಲೆಹಾಕಿತು.
Big moment in the game! Smith was looking to go big down the ground, but slices it to deep point.
Neesham gets his first wicket of the game #RRvKXIP #Dream11IPL pic.twitter.com/iKKCL6HibK
— IndianPremierLeague (@IPL) September 27, 2020
ನಂತರ ಭರ್ಜರಿ ಬ್ಯಾಟಿಂಗ್ ಆಡಿದ ಸ್ಮಿತ್ ಮತ್ತು ಸಂಜು ಬೌಂಡರಿ ಸಿಕ್ಸ್‍ಗಳ ಸುರಿಮಳೆಗೈದರು. ಈ ಮೂಲಕ ಕೇವಲ 8.5 ಓವರಿನಲ್ಲಿ ರಾಜಸ್ಥಾನ್ ತಂಡ 100ರ ಗಡಿ ದಾಟಿತು. ಆದರೆ 27 ಎಸೆತದಲ್ಲಿ ಅರ್ಧಶತಕ ಸಿಡಿಸಿ ಆಡುತ್ತಿದ್ದ ಸ್ಮಿತ್ ಅವರು 8ನೇ ಓವರಿನ ಕೊನೆಯ ಬಾಲಿನಲ್ಲಿ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. ನಂತರ ತನ್ನ ಅಬ್ಬರವನ್ನು ಮುಂದುವರಿಸಿದ ಸಂಜು ಸ್ಯಾಮ್ಸನ್ ಮಿಂಚಿನ ಅರ್ಧಶತಕ ಸಿಡಿಸಿ ಮಿಂಚಿದರು.
Did You WATCH – That U.N.B.E.L.I.E.V.A.B.L.E Pooran save.
This is fielding marvel. This is fielding at its very best. You will not see better saves than this in cricket. Play this on repeat.https://t.co/SPjR7GroIZ #Dream11IPL #RRvKXIP
— IndianPremierLeague (@IPL) September 27, 2020
ಸ್ಯಾಮ್ಸನ್ ಸ್ಫೋಟಕ ಆಟ:
ಇದೇ ವೇಳೆ ರಾಹುಲ್ ತೆವಾಟಿಯಾ ರನ್ ಗಳಿಸಲು ಕಷ್ಟಪಟ್ಟರು. ಆದರೆ ಇನ್ನೊದಡೆ ಭರ್ಜರಿಯಾಗಿ ಬ್ಯಾಟ್ ಮಾಡುತ್ತಿದ್ದ ಸ್ಯಾಮ್ಸನ್ ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಸಿಡಿಸಿದರು. ಮ್ಯಾಕ್ಸ್ ವೆಲ್ ಮಾಡಿದ 15ನೇ ಓವರಿನಲ್ಲಿ ಅವರು ಭರ್ಜರಿ 21 ರನ್ ಸಿಡಿಸಿ ಮಿಂಚಿದರು. ಆದರೆ 16ನೇ ಓವರಿನ ಮೊದಲ ಬಾಲಿನಲ್ಲಿ 42 ಎಸೆತಗಳಿಗೆ 85 ರನ್ ಸಿಡಿಸಿ ಆಡುತ್ತಿದ್ದ ಸಂಜು ಸ್ಯಾಮ್ಸನ್ ಶಮಿಯವರ ಬೌಲಿಂಗ್ ಔಟ್ ಆದರು.
FIFTY FOR RAHUL! WHAT A KNOCK! WOW!!!
We saw that coming. ????#RRvKXIP | #HallaBol | #RoyalsFamily | @rahultewatia02 pic.twitter.com/NiHrxUDtQt
— Rajasthan Royals (@rajasthanroyals) September 27, 2020
17ನೇ ಓವರಿನಲ್ಲಿ ತೆವಾಟಿಯಾ ಕಮಾಲ್ ನಾಲ್ಕು ಬಾಲಿಗೆ ನಾಲ್ಕು ಸಿಕ್ಸರ್ ಸಿಡಿಸಿ ಪಂದ್ಯಕ್ಕೆ ಟ್ವಿಸ್ಟ್ ಕೊಟ್ಟರು. ಜೊತೆ ಅದೇ ಓವರಿನ ಕೊನೆ ಬಾಲಿನಲ್ಲಿ ಇನ್ನೊಂದು ಸಿಕ್ಸ್ ಸಿಡಿಸಿ ಒಟ್ಟು ಒಂದೇ ಈವರಿನಲ್ಲಿ 5 ಸಿಕ್ಸರ್ ಸಿಡಿಸಿ ರಾಯಲ್ಸ್ ಅನ್ನು ಗೆಲುವಿನ ದಡಕ್ಕೆ ಕರೆದುಕೊಂಡು ಬಂದರು. ಆದರೆ ರಾಬಿನ್ ಉತ್ತಪ್ಪ ಅವರು 18ನೇ ಓವರಿನ ಮೊದಲ ಬಾಲಿನಲ್ಲೇ ಔಟ್ ಆದರು. ಆಗ ಬಂದ ಜೋಫ್ರಾ ಆರ್ಚರ್ ಅವರು ಬ್ಯಾಕ್ ಟು ಬ್ಯಾಕ್ ಎರಡು ಸಿಕ್ಸರ್ ಸಿಡಿಸಿದರು.
ಈ ಹಿಂದೆ 2012ರಲ್ಲಿಆರ್‌ಸಿಬಿ ಆಟಗಾರ ಕ್ರಿಸ್ ಗೇಲ್ ಪುಣೆ ವಾರಿಯರ್ಸ್ ತಂಡ ಸ್ಪಿನ್ನರ್ ರಾಹುಲ್ ಶರ್ಮಾ ಅವರ 5 ಎಸೆತಗಳನ್ನು ಸಿಕ್ಸರ್ ಗೆ ಅಟ್ಟಿದ್ದರು.