ಭೋಪಾಲ್: ಉಜ್ಜಯಿನಿಯ ಮಹಾಕಾಲ್ ಮಂದಿರದ ಉತ್ಖನನದ ವೇಳೆ 9ನೇ ಶತಮಾನದ ಶಿವಲಿಂಗವೊಂದು ಪತ್ತೆಯಾಗಿದೆ.
ಸ್ಥಳಕ್ಕಾಮಿಗಿಸಿ ಪುರಾತತ್ವ ಶಾಸ್ತ್ರ ಅಧಿಕಾರಿ ಧ್ರುವೇಂದ್ರ ಜೋಧಾ ದೇವಸ್ಥಾನದೊಳಗಿರುವ ಶಿವಲಿಂಗದಷ್ಟು ಎತ್ತರ ಅಂದ್ರೆ 5 ಅಡಿ ಎತ್ತರದ ಶಿವಲಿಂಗ ಇದಾಗಿದೆ ಎಂದಿದ್ದಾರೆ. ಇದನ್ನೂ ಓದಿ: ನಾನು ಅಂಗಾಂಗ ದಾನ ಮಾಡುತ್ತೇನೆ, ನೀವೂ ಮಾಡಿ- ಸಿಎಂ ಬೊಮ್ಮಾಯಿ ಕರೆ
Advertisement
Advertisement
ಈ ಶಿವಲಿಂಗವನ್ನು ಜಲಧಾರಿ ಎಂದು ಗುರುತಿಸಲಾಗಿದ್ದು, ಸುಮಾರು 9ನೇ ಶತಮಾನದ ಕಾಲದ್ದು ಎಂದು ಗುರುತಿಸಲಾಗಿದೆ. ಇದೇ ವೇಳೆ ಶಿವಲಿಂಗದ ಅಡಿಯಲ್ಲಿ ಇದ್ದ ಇಟ್ಟಿಗೆಗಳು ದೊರಕಿವೆ. ಈ ಇಟ್ಟಿಗೆಗಳು 5ನೇ ಶತಮಾನದವು ಎನ್ನಲಾಗಿದೆ.
Advertisement
So, Again In the series..
9th C Jaladhari Shivlinga found in the excavation of Mahakal Mandir Ujjain.
In fact,on today morning, Archaeological Officer Dhruvendra Jodha, who reached the temple, studied & told that the Shivalinga is 2.6 feet above & as much inside,@LostTemple7 pic.twitter.com/MkHOSHpWKU
— Darshana ???????? (@We_The_Saffron) August 11, 2021
Advertisement
ಶಿವಲಿಂಗದ ಜೊತೆಗೆ ಸಣ್ಣದೊಂದು ವಿಷ್ಣುವಿನ ವಿಗ್ರಹ ಕೂಡ ಪತ್ತೆಯಾಗಿದ್ದು, ವಿಷ್ಣು ಚತುರ್ಭುಜ ಸ್ಥಾನಕ ಆಸನದಲ್ಲಿದ್ದಾನೆ ಎಂದು ಹೇಳಲಾಗಿದೆ. ಈ ವಿಗ್ರಹ ಸುಮಾರು 10ನೇ ಶತಮಾನದ್ದಿರಬಹುದು ಎಂದು ಗುರುತಿಸಲಾಗಿದೆ. ಕೆಲವು ದಿನಗಳ ಹಿಂದೆಯೂ ಈ ಸ್ಥಳದಲ್ಲಿ ಕೆಲವು ಕೆತ್ತನೆಗಳು, ಮೂರ್ತಿ ಸಹ ಪತ್ತೆಯಾಗಿದ್ದವು ಎನ್ನಲಾಗಿದೆ.