9ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿ ಪ್ರಿನ್ಸ್ ಮಹೇಶ್ ಬಾಬು ಪುತ್ರಿ

Public TV
1 Min Read
Mahesh Babu

ಹೈದರಾಬಾದ್: ಟಾಲಿವುಡ್ ಸೂಪರ್ ಸ್ಟಾರ್ ನಟ ಮಹೇಶ್ ಬಾಬು ಪುತ್ರಿ ಸಿತಾರಾ 6ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾಳೆ. ಮಗಳಿಗೆ ವಿಶೇಷವಾಗಿ ವಿಶ್ ಮಾಡಿದ್ದಾರೆ.

 

View this post on Instagram

 

A post shared by Mahesh Babu (@urstrulymahesh)

ಮಹೇಶ್ ಬಾಬು ಹಾಗೂ ನಮ್ರತಾರ ಪುತ್ರಿ ಸಿತಾರಾಗೆ 9 ನೇ ವರ್ಷದ ಹುಟ್ಟುಹಬ್ಬ. ಈ ಸಂತೋಷವನ್ನ ನಟ ಮಹೇಶ್ ಬಾಬು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಹ್ಯಾಪಿ ಬರ್ತ್ ಡೇ ಮೈ ಲಿಟಲ್ ಒನ್, ಯಾವಾಗಲೂ ನನ್ನ ಪ್ರಪಂಚ ಬೆಳಗುತ್ತಿರು, ಹ್ಯಾಪಿ 9.. ನೀನು ಊಹೆ ಮಾಡದಷ್ಟು ನನ್ನ ಪ್ರೀತಿ ನಿನ್ನ ಮೇಲೆ ಇರುತ್ತೆ ಎಂದು ಬರೆದುಕೊಂಡು ಮಗಳ ಮುದ್ದಾದ ಫೋಟೋ ಹಂಚಿಕೊಂಡು ವಿಶ್ ಮಾಡಿದ್ದಾರೆ. ಇದನ್ನೂ ಓದಿ: ತಿರುಪತಿ ತಿಮ್ಮಪ್ಪನಿಗೆ ಆರೂವರೆ ಕೆ.ಜಿಯ ಚಿನ್ನದ ಖಡ್ಗ ನೀಡಿದ ದಂಪತಿ

ಮಹೇಶ್ ಬಾಬು ಮಗಳು ಈಗಾಗಲೇ ಜಾಹೀರಾತೊಂದರ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾಳೆ. ಸ್ಟಾರ್ ಕಿಡ್ ಸಿತಾರ ತನ್ನ ಯೂಟ್ಯೂಬ್ ಚಾನಲ್ ಜೊತೆಗೆ ಫೋಟೋಶೂಟ್‍ಗಳಲ್ಲೂ ಬ್ಯುಸಿಯಾಗಿದ್ದಾಳೆ. ಸಿತಾರಾ ತಮ್ಮ ಲೆಟೆಸ್ಟ್ ಫೋಟೋಶೂಟ್‍ನ ಚಿತ್ರಗಳನ್ನು ಇನ್‍ಸ್ಟಾಗ್ರಾಂನಲ್ಲಿ ಕೆಲವು ದಿನಗಳ ಹಿಂದೆ ಹಂಚಿಕೊಂಡಿದ್ದಾರೆ.

 

View this post on Instagram

 

A post shared by Mahesh Babu (@urstrulymahesh)

ಟಾಲಿವುಡ್ ಸ್ಟಾರ್ ಕಿಡ್‍ಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಸುದ್ದಿಯಲ್ಲಿರುವ ಸಿತಾರಾ ಹೊಸ, ಹೊಸ ಫೋಟೋಶೂಟ್‍ಗೆ ಪೋಸ್ ಕೊಡುತ್ತಲಿರುತ್ತಾಳೆ. ಕೊರೊನಾ ಸಮಯದಲ್ಲಿ ಸಿನಿಮಾ ಶೂಟಿಂಗ್ ಇದ್ದೇ ಇದ್ದಾಗ ತಮ್ಮ ಮಕ್ಕಳ ಜೊತೆಗೆ ಆಡವಾಡುತ್ತಾ ಕಲಾಕಳೆಯುತ್ತಿರುವ ಮಹೇಶ್ ಬಾಬು ಮುದ್ದಾದ ಕ್ಷಣಗಳನ್ನು ಆಗಾಗ ಹಂಚಿಕೊಳ್ಳುತ್ತಿದ್ದರು.

Share This Article