– ಐಎಎಸ್ ಶ್ರೇಣಿಯ ಅಧಿಕಾರಿಯಾದ ಪ್ರಗತಿ
ಯಾದಗಿರಿ: ರಾಷ್ಟ್ರೀಯ ಹೆಣ್ಣು ಮಗು ದಿನದ ಅಂಗವಾಗಿ, ಗ್ರಾಮೀಣ ಭಾಗದ ಓರ್ವ ಬಡ ವಿದ್ಯಾರ್ಥಿನಿ ಕೆಲ ಸಮಯ ಐಎಎಸ್ ಶ್ರೇಣಿಯ ಅಧಿಕಾರಿಯಾಗಿ ಜಿ.ಪಂ ಸಿಇಒ ಹುದ್ದೆಯನ್ನು ಅಲಂಕರಿಸಿ ಸಂಭ್ರಮಿಸಿದ್ದಾಳೆ.
Advertisement
ಯಾದಗಿರಿ ಜಿಲ್ಲೆಯ ಗುರುಮಿಠಕಲ್ ತಾಲೂಕಿನ ಕಂದಕೂರ ಗ್ರಾಮದ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಪ್ರಗತಿ ಅಥಿತಿ ಜಿ.ಪಂ ಸಿಇಒ ಆಗಿ ಪಟ್ಟಕ್ಕೇರಿದ ಬಾಲಕಿ. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಸ್ಪೂರ್ತಿ ತುಂಬುವ ಉದ್ದೇಶದಿಂದ ಯಾದಗಿರಿಯ ಜಿ.ಪಂ ಹಾಲಿ ಸಿಇಒ ಶಿಲ್ಲಾ ಶರ್ಮಾ ತಮ್ಮ ಹುದ್ದೆಯನ್ನು ಪ್ರಗತಿಗೆ ಬಿಟ್ಟುಕೊಟ್ಟಿದ್ದಾರೆ.
Advertisement
Advertisement
ಶಿಲ್ಲಾ ಶರ್ಮಾ ತಮ್ಮ ಕಾರ್ಯಾದ ಬಗ್ಗೆ ವಿವರಣೆ ನೀಡಿ ಬಳಿಕ ಅಥಿತಿ ಸಿಇಒ ಪ್ರಗತಿ ಸಭೆಯ ನೇತೃತ್ವವನ್ನು ವಹಿಸಿಕೊಂಡರು. ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಸವನಗೌಡ ಯಡಿಯಾಪುರ ಅಧ್ಯಕ್ಷತೆಯಲ್ಲಿ ಪಂಚಾಯತ್ ಸಭಾಂಗಣದಲ್ಲಿ ಸಾಮಾನ್ಯ ಸಭೆ ಸಹ ನಡೆಸಲಾಯಿತು. ಸಭೆಯಲ್ಲಿ ಮಾತನಾಡಿದ ಪ್ರಗತಿ ಹೆಣ್ಣಿನ ಶಿಕ್ಷಣಕ್ಕೆ ಪಾಲಕರು ಹೆಚ್ಚಿನ ಸಹಕಾರ ನೀಡಬೇಕೆಂದು ಭಾಷಣ ಮಾಡಿ ಇತರರಿಗೆ ಪ್ರೇರಣೆಯಾದಳು.
Advertisement
ಇನ್ನೂ ಸಿಇಒ ಕುರ್ಚಿಯಲ್ಲಿ ಕುಳಿತಿದ್ದ ಪ್ರಗತಿಯನ್ನು ಕಂಡು ಆಕೆಯ ಸ್ನೇಹಿತೆಯರು ಮತ್ತು ಶಾಲಾ ಸಿಬ್ಬಂದಿ ಸಂತಸಪಟ್ಟರು. ರಾಷ್ಟ್ರೀಯ ಹೆಣ್ಣು ಮಗುವಿನ ದಿನದ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮುಖ್ಯಾಧಿಕಾರಿ ಪ್ರಭಾಕರ್ ಅವರ ತಂಡ, ಹೆಣ್ಣಿನ ಮಹತ್ವವನ್ನು ಸಾರಲು ಈ ಅಪರೂಪದ, ಕಾರ್ಯಕ್ರಮ ಆಯೋಜನೆ ಮಾಡಿದ್ದರು.