ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy) ಅಪಹರಣ ಹಾಗೂ ಕೊಲೆ ಪ್ರಕರಣದ 8ನೇ ಆರೋಪಿ-ಚಾಲಕ ರವಿ ಚಿತ್ರದುರ್ಗ ಪೊಲೀಸರ (Chitradurga Police) ಮುಂದೆ ಶರಣಾಗಿದ್ದಾನೆ.
ಬಾಡಿಗೆಗೆ ಅಂತ ಹೇಳಿ ಆರೋಪಿ ಜಗ್ಗ ಮತ್ತು ರಘು ಕರೆಸಿಕೊಂಡಿದ್ದರು. ದರ್ಶನ್ (Actor Darshan) ಭೇಟಿಗೆಂದು ಹೇಳಿ ರೇಣುಕಾಸ್ವಾಮಿ ಕರೆದುಕೊಂಡು ಬಂದಿದ್ದರು. ರೇಣುಕಾಸ್ವಾಮಿ ಖುಷಿಯಿಂದಲೇ ಕಾರಿನಲ್ಲಿ ಬಂದಿದ್ದ ಎಂದು ರವಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ಇನ್ನೂ ಫೇಕ್ ಅಕೌಂಟ್ ಬಳಸಿ ಕಾಮೆಂಟ್ ಹಾಕ್ತಿದ್ದ ರೇಣುಕಾಸ್ವಾಮಿಯ ಲೊಕೇಶನ್ ಟ್ರೇಸ್ ಮಾಡಲು ದರ್ಶನ್ ಗ್ಯಾಂಗ್, ಕೆಲ ಪೊಲೀಸ್ ಅಧಿಕಾರಿಗಳ ಸಹಕಾರ ಪಡೆದಿತ್ತು ಎಂದು ಸಹ ಹೇಳಲಾಗಿದೆ. ಇದನ್ನೂ ಓದಿ: ನನ್ ತಂದೆ ಬಗ್ಗೆ ನಿಂದಿಸಿದ್ದಕ್ಕೆ ಥ್ಯಾಂಕ್ಸ್ – ದರ್ಶನ್ ಪುತ್ರ ವಿನೀಶ್ ಭಾವುಕ ಪೋಸ್ಟ್!
ಜೂನ್ ಮೊದಲ ವಾರದಿಂದಲೇ ದರ್ಶನ್ ಗ್ಯಾಂಗ್ ರೇಣುಕಾಸ್ವಾಮಿಯ ಬೆನ್ನುಬಿದ್ದಿತ್ತು. ಜೂನ್ 2ರಂದು ಫೋನ್ ಮಾಡಿ ಬೆದರಿಕೆ ಹಾಕಿತ್ತು. ಇದರಿಂದ ರೇಣುಕಾಸ್ವಾಮಿ ವಿಚಲಿತರಾಗಿದ್ದರು. ಜೂನ್ 8ರಂದು ರೇಣುಕಾಸ್ವಾಮಿ ಕಿಡ್ನಾಪ್‌ಗೂ ಮುನ್ನ, ಆತನನ್ನು ಮನೆಯಿಂದ ಫಾರ್ಮಸಿವರೆಗೂ ರಾಘವೇಂದ್ರ ಅಂಡ್ ಗ್ಯಾಂಗ್ ಕಾರಲ್ಲಿ ಫಾಲೋ ಮಾಡಿತ್ತು ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ನನಗೆ ದರ್ಶನ್ ಮೇಲೆ ಕೇಸು ದಾಖಲಾಗಿ 24 ಗಂಟೆ ನಂತ್ರ ವಿಷಯ ಗೊತ್ತಾಯ್ತು – ಡಿಕೆಶಿ
ಈ ಮಧ್ಯೆ, ರೇಣುಕಾಸ್ವಾಮಿ ಶವ ಸಾಗಿಸಲು ಪುನೀತ್ ಎಂಬುವವರ ಸ್ಕಾರ್‌ಪಿಯೋ ಬಳಸಲಾಗಿತ್ತು. ಹೀಗಾಗಿ ಪುನೀತ್‌ನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಈ ಮಧ್ಯೆ, ರಾಘವೇಂದ್ರ ಸೇರಿ ಕೆಲ ಆರೋಪಿಗಳನ್ನು ಮಹಜರಿಗಾಗಿ ಪೊಲೀಸರು ಚಿತ್ರದುರ್ಗಕ್ಕೆ ಕರೆದೊಯ್ದಿದ್ದಾರೆ. ಬಂಧಿತರ ಪೈಕಿ ಪ್ರದೋಶ್, ದರ್ಶನ್ ಜೊತೆ ಕೆಲ ಸಿನಿಮಾಗಳಲ್ಲಿ ನಟಿಸಿದ್ದ. ಬಿಜೆಪಿಯಲ್ಲಿಯೂ ಗುರುತಿಸಿಕೊಂಡಿದ್ದ, ದರ್ಶನ್ ಮ್ಯಾನೇಜರ್ ನಾಗರಾಜ್ ಇತ್ತೀಚಿಗೆ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದ. ರಾಜ್ಯ ಕುರುಬರ ಸಂಘದ ನಿರ್ದೇಶನಕನೂ ಆಗಿದ್ದ. ಮೈಸೂರು ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಲು ತಯಾರಿ ಮಾಡಿಕೊಂಡಿದ್ದ ಎಂಬ ವಿಚಾರ ಗೊತ್ತಾಗಿದೆ. ಮಂಡ್ಯ, ರಾಮನಗರದಲ್ಲಿ ದರ್ಶನ್ ವಿರುದ್ಧ ಪ್ರತಿಭಟನೆಗಳು ನಡೆದಿವೆ. ಇದನ್ನೂ ಓದಿ: ಚಿತ್ರರಂಗದಿಂದ ದರ್ಶನ್ ಬ್ಯಾನ್? – ಫಿಲ್ಮ್ ಚೇಂಬರ್ ಹೇಳಿದ್ದೇನು?