ಬೆಂಗಳೂರು: ರಸ್ತೆ ತೆರಿಗೆ ಪಾವತಿಸದೆ ಓಡಾಡಿದ ಪರಿಣಾಮ ವ್ಯಕ್ತಿಯೊಬ್ಬರು 88 ಲಕ್ಷ ರೂ. ಕೊಟ್ಟು ಖರೀದಿಸಿದ ಐಷಾರಾಮಿ ಬೆಂಜ್ ಕಾರು ಇದೀಗ ಕೆಲಸಕ್ಕೆ ಬಾರದ ವಸ್ತುವಾಗಿದೆ.
ಐಷಾರಾಮಿ ಕಾರುಗಳನ್ನು ಖರೀದಿಸಿದಾಗ ಅದಕ್ಕೆ ರಸ್ತೆ ತೆರಿಗೆ ಕಟ್ಟುವುದು ಕಡ್ಡಾಯ. ಬೆಂಗಳೂರಿನ ವ್ಯಕ್ತಿಯೊಬ್ಬರು 88 ಲಕ್ಷ ರೂ. ನೀಡಿ ಐಷಾರಾಮಿ ಬೆಂಜ್ ಕಾರನ್ನು 2019ರ ಜೂನ್ನಲ್ಲಿ ಖರೀಸಿದ್ದರು. ಆಗ ತಾತ್ಕಾಲಿಕ ರಜಿಸ್ಟರ್ ನಂಬರ್ ಕೆಎ-05 ಟಿಎಂಪಿ-9861 ನೀಡಲಾಗಿತ್ತು.
Advertisement
Advertisement
ಕಾರ್ ಬಿಎಸ್-4 ಆಗಿದ್ದು, ಕಾರ್ ರಿಜಿಸ್ಟರ್ 2020ರ ಏಪ್ರಿಲ್ 30ರಂದು ರಿಜಿಸ್ಟರ್ ಅಂತ್ಯವಾಗಿದೆ. ಆದರೆ ಮಾಲೀಕ ಇದುವರೆಗೂ 20 ಲಕ್ಷ ರೂ. ರಸ್ತೆ ತೆರಿಗೆ ಪಾವತಿಸದೆ ಓಡಾಡುತ್ತಿದ್ದ. ಈ ಹಿನ್ನೆಲೆ ಯಶವಂತಪುರ ಹಿರಿಯ ಮೋಟಾರು ವಾಹನ ತನಿಖಾಧಿಕಾರಿಗಳಾದ ರಾಜಣ್ಣ ಎಚ್ ಮತ್ತು ಎಂ.ಎನ್.ಸುಧಾಕರ್ ಅವರು ಕಾರು ಸೀಜ್ ಮಾಡಿದ್ದಾರೆ.
Advertisement
ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಬಿಎಸ್-4 ವೆಹಿಕಲ್ಗಳ ರಿಜಿಸ್ಟ್ರೇಷನ್ ನಿಂತಿದೆ. ಇದೀಗ 88 ಲಕ್ಷ ರೂ. ನೀಡಿ ಖರೀದಿಸಿದ ದುಬಾರಿ ಬೆಂಜ್ ಕಾರು ಕೆಲಸಕ್ಕೆ ಬಾರದ ವಸ್ತುವಾಗಿದೆ. ಇದರಿಂದಾಗಿ ಮಾಲೀಕ ಕಾರಿಗಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಬೇಕಾದ ಅನಿವಾರ್ಯತೆ ಎದುರಾಗಿದೆ.