ತುಮಕೂರು: ನಗರದ ರೈಲು ನಿಲ್ದಾಣವನ್ನು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಮೇಲ್ದರ್ಜೆಗೇರಿಸಲು ₹88.41 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ (V Somanna) ತಿಳಿಸಿದ್ದಾರೆ.
ರೈಲ್ವೆ ನಿಲ್ದಾಣವನ್ನು ( Railway Station) ಸಿದ್ದಗಂಗಾ ಮಠದ ಮಾದರಿಯ ವಾಸ್ತುಶಿಲ್ಪದ ವಿನ್ಯಾಸದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ಬಹುಮಹಡಿ ಕಟ್ಟಡ, ಸುಸಜ್ಜಿತ ವಾಹನ ನಿಲುಗಡೆ ವ್ಯವಸ್ಥೆ, ಆಗಮನ- ನಿರ್ಗಮನಕ್ಕೆ ಪ್ರತ್ಯೇಕ ದ್ವಾರಗಳು, ಏರ್- ಕಾನ್‌ಕೋರ್ಸ್, ಲಿಫ್ಟ್, ಎಸ್ಕಲೇಟರ್, ವಾಣಿಜ್ಯ ಕಟ್ಟಡ ನಿರ್ಮಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ರೇಣುಕಾಸ್ವಾಮಿ ಕೇಸ್ ಅರೆಬಿಯನ್ ನೈಟ್ಸ್ ಕಥೆಯಂತಿದೆ: ದರ್ಶನ್ ಪರ ಸಿ.ವಿ ನಾಗೇಶ್ ವಾದ ಹೇಗಿತ್ತು?
Advertisement
Advertisement
ಬೆಂಗಳೂರಿನಂತೆ (Bengaluru) ತುಮಕೂರು ಕೂಡ ಅತಿವೇಗವಾಗಿ ಬೆಳೆಯುತ್ತಿದ್ದು, ಸಾಮಾನ್ಯ ರೈಲ್ವೆ ಪ್ರಯಾಣಿಕರಿಗೂ ವಿಶ್ವ ದರ್ಜೆಯ ಸೌಲಭ್ಯಗಳು ಸಿಗಬೇಕೆಂಬ ಉದ್ದೇಶದಿಂದ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪೂರ್ವಜನ್ಮದ ಪುಣ್ಯದಿಂದ ಮಂತ್ರಿ ಆಗಿದ್ದೇವೆ – ಸಚಿವ ಚೆಲುವರಾಯಸ್ವಾಮಿ
Advertisement
Advertisement
ಈಗಾಗಲೇ ನಿಲ್ದಾಣದ ಯೋಜನೆಯ ನೀಲನಕ್ಷೆ ಸಿದ್ಧವಾಗಿದ್ದು, ಮುಂದಿನ ದಿನಗಳಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದಿದ್ದಾರೆ. ಇದನ್ನೂ ಓದಿ: ನಮ್ಮ ಮೆಟ್ರೋದಿಂದ ಮತ್ತೊಂದು ಗುಡ್‌ನ್ಯೂಸ್ – ಹೊಸ ವರ್ಷದಿಂದ್ಲೇ ಎಲೆಕ್ಟ್ರಾನಿಕ್ ಸಿಟಿಗೆ ಮೆಟ್ರೋ ರೈಲು!