ಲಂಡನ್: ಅಜ್ಜ-ಅಜ್ಜಿಯರು ಹೆಚ್ಚಾಗಿ ಉದ್ಯಾನವನದಲ್ಲಿ, ತಮ್ಮ ಮೊಮ್ಮಕ್ಕಳ ಜೊತೆ ಆಟವಾಡುತ್ತ ಅಥವಾ ಟಿವಿ ನೋಡುತ್ತ ಕಾಲ ಕಳೆಯುತ್ತಾರೆ. ಆದರೆ ಲಂಡನ್ ಅಜ್ಜಿಯೊಬ್ಬರು ಮೈಕ್ರೋಸಾಫ್ಟ್ ಪೇಂಟ್ ಬಳಸಿ ಅದ್ಭುತವಾದ ಚಿತ್ರ ಬಿಡಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ಕ್ವಾಚಾ ಗಾರ್ಸಿಯಾ ಝೈರಾ (87) ಅದ್ಭುತ ಚಿತ್ರ ಬಿಡಿಸಿದ ಮಹಿಳೆ. ಸಾಮಾನ್ಯವಾಗಿ ಕಂಪ್ಯೂಟರ್ ನ ಮೈಕ್ರೋಸಾಫ್ಟ್ ಪೇಂಟ್ ಬಳಸಿ ಚಿತ್ರಗಳನ್ನು ಬಿಡಿಸಿದ್ದು, ಈ ಮೂಲಕ ಎಲ್ಲರನ್ನು ಆಶ್ಚರ್ಯಗೊಳಿಸಿದ್ದಾರೆ.
Advertisement
https://www.instagram.com/p/BgPT42RAUnt/?hl=en&taken-by=conchagzaera
Advertisement
ಕ್ವಾಚಾ ಅವರು ತಾವು ಬಿಡಿಸಿರುವ ಈ ಚಿತ್ರಗಳನ್ನು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಬಳಿಕ ತಮ್ಮ ಮೊಮ್ಮಕ್ಕಳ ಸಲಹೆ ಮೇರೆಗೆ ಇನ್ ಸ್ಟಾಗ್ರಾಮ್ ನಲ್ಲಿಯೂ ಹಂಚಿಕೊಂಡಿದ್ದಾರೆ. ಈ ಚಿತ್ರಗಳನ್ನು ಹಂಚಿಕೊಳ್ಳುವ ಮುನ್ನ ಅಂದರೆ ಮಾರ್ಚ್ 9 ಇವರ ಖಾತೆಗೆ ಕೇವಲ 300 ಮಂದಿ ಫಾಲೋವರ್ಸ್ ಗಳನ್ನು ಹೊಂದಿದ್ದರು. ಆದರೆ ಈ ಚಿತ್ರಗಳನ್ನು ಹಂಚಿಕೊಂಡ ಅಲ್ಪ ಸಮಯದಲ್ಲಿ 1.36 ಲಕ್ಷ ಜನರು ಅಜ್ಜಿಯನ್ನು ಇನ್ ಸ್ಟಾಗ್ರಾಂನಲ್ಲಿ ಫಾಲೋ ಮಾಡ್ತಿದ್ದಾರೆ.
Advertisement
ಈ ಕುರಿತು ಪ್ರತಿಕ್ರಿಯಿಸಿದ ಕ್ವಾಚಾ, `ನನ್ನ ಪತಿ ಅನಾರೋಗ್ಯಕ್ಕೆ ಒಳಗಾದ ಮೇಲೆ ನಾನು ಅವರನ್ನು ನೋಡಿಕೊಳ್ಳಬೇಕಿತ್ತು. ನನಗೆ ಮನೆಯಿಂದ ಹೊರಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಈ ವೇಳೆ ತಮ್ಮ ಪತಿ ನನಗೆ ಪೋಸ್ಟ್ ಮಾಡಿದ್ದ ಕಾರ್ಡ್ ಗಳಿಂದ ಸ್ಫೂರ್ತಿ ಪಡೆದು ಈ ಚಿತ್ರಗಳನ್ನು ಬಿಡಿಸಲು ಪ್ರಯತ್ನಿಸಿದ್ದೆನೆಂದು ಹೇಳಿದ್ದಾರೆ.
Advertisement
https://www.instagram.com/p/BfipO3YHI_Y/?hl=en&taken-by=conchagzaera
ಈ ಮುನ್ನ ಕ್ವಾಚಾ ಅವರ ಮಕ್ಕಳು ಇವರಿಗೆ ಸಮಯ ಕಳೆಯಲು ಕಂಪ್ಯೂಟರ್ ಒಂದನ್ನು ತಂದುಕೊಟ್ಟಿದ್ದರು. ಆಗ ಅವರು ಎಂಎಸ್ ಪೇಂಟ್ ನಲ್ಲಿ ಸಣ್ಣ ಮನೆ, ಮರಗಳನ್ನು ಬಿಡಿಸಲು ಪ್ರಾರಂಭಿಸಿದರು. ಬಳಿಕ ಇದು ಹವ್ಯಾಸವಾಗಿ ಸುಂದರ ಚಿತ್ರಗಳನ್ನು ಬಿಡಿಸಿದ್ದಾರೆ.
ಕ್ವಾಚಾ ಅವರ ಈ ಚಿತ್ರಗಳನ್ನು ಗಮನಿಸಿದ್ರೆ ಎಂಎಸ್ ಪೈಂಟ್ ಮೂಲಕ ಇಂತಹ ಚಿತ್ರ ಬಿಡಿಸಲು ಕಷ್ಟ ಸಾಧ್ಯ ಎಂದು ಅಭಿಪ್ರಾಯ ವ್ಯಕ್ತವಾಗುತ್ತದೆ.
https://www.instagram.com/p/BbWu9xGn7SB/?hl=en&taken-by=conchagzaera