ಬೆಂಗಳೂರು: ಇಂದು 8,655 ಮಂದಿಗೆ ಸೋಂಕು ಬಂದಿದ್ದು, ಆಸ್ಪತ್ರೆಯಿಂದ 5,644 ಮಂದಿ ಬಿಡುಗಡೆಯಾಗಿದ್ದಾರೆ. 86 ಮಂದಿ ಮೃತಪಟ್ಟಿದ್ದಾರೆ.
ಒಟ್ಟು ಸೋಂಕಿತರ ಸಂಖ್ಯೆ 5,57,212ಕ್ಕೆ ಏರಿಕೆಯಾಗಿದೆ. ಈ ಪೈಕಿ 4,50,302 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೆ 98,474 ಸಕ್ರಿಯ ಪ್ರಕರಣಗಳಿವೆ.
ಒಟ್ಟು ಇಲ್ಲಿಯವರೆಗೆ 8,417 ಮಂದಿ ಕೊರೊನಾಗೆ ಬಲಿಯಾಗಿದ್ದು ಐಸಿಯುನಲ್ಲಿ 823 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಒಟ್ಟು 59,919 ಮಂದಿಗೆ ಕೊರೊನಾ ಟೆಸ್ಟ್ ಮಾಡಿಸಿದ್ದು 45,18,923 ಮಂದಿಗೆ ಇಲ್ಲಿಯವರೆಗೆ ಕೊರೊನಾ ಟೆಸ್ಟ್ ಮಾಡಿಸಲಾಗಿದೆ.
ಬೆಂಗಳೂರಿನಲ್ಲಿ 4,080 ಮಂದಿಗೆ ಸೋಂಕು ಬಂದಿದ್ದರೆ 2,517 ಮಂದಿ ಬಿಡುಗಡೆಯಾಗಿದ್ದಾರೆ. ಮೈಸೂರಿನಲ್ಲಿ 702, ಬಳ್ಳಾರಿಯಲ್ಲಿ 498 ಮಂದಿಗೆ ಸೋಂಕು ಬಂದಿದೆ.
ಒಟ್ಟು 823 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಬೆಂಗಳೂರು ನಗರದಲ್ಲಿ 261, ಧಾರವಾಡ 93, ಬಳ್ಳಾರಿ 76, ಹಾನದಲ್ಲಿ 62 ಮಂದಿ ಐಸಿಯುನಲ್ಲಿದ್ದಾರೆ.