– ಸಮ್ಮೇಳನಾಧ್ಯಕ್ಷರ ಮೆರವಣಿಗೆ, ಮುಖ್ಯಮಂತ್ರಿಯಿಂದ ಉದ್ಘಾಟನೆ
ಕಲಬುರಗಿ: ಇಂದಿನಿಂದ ತೊಗರಿ ಕಣಜ ಕಲಬುರಗಿಯಲ್ಲಿ ಕನ್ನಡದ ಕಂಪು ಮೇಳೈಸಲಿದ್ದು, 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆರಂಭವಾಗಲಿದೆ.
ಕಲಬುರಗಿ ವಿಶ್ವವಿದ್ಯಾಲಯದ 35 ಎಕರೆ ಪ್ರದೇಶದಲ್ಲಿ ಭವ್ಯವಾದ ಮಂಟಪ ನಿರ್ಮಿಸಲಾಗಿದ್ದು, ಮಹಾದ್ವಾರಕ್ಕೆ ಕಡಕೋಳ ಮಡಿವಾಳೇಶ್ವರರ ಹೆಸರಿಡಲಾಗಿದೆ. ಕನ್ನಡ ಹಬ್ಬಕ್ಕಾಗಿ ಕಲಬುರಗಿ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಎಲ್ಲೆಡೆಯೂ ನಾಡಧ್ವಜಗಳು ರಾರಾಜಿಸ್ತಿವೆ.
Advertisement
Advertisement
ಮುಖ್ಯಬೀದಿಗಳು ರಂಗೋಲಿ, ತಳಿರು ತೋರಣ, ದೀಪಾಲಂಕಾರದಿಂದ ಝಗಮಗಿಸುತ್ತಿವೆ. ಬೆಳಗ್ಗೆ 8 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಧ್ವಜಾರೋಹಣ ಮಾಡಲಿದ್ದಾರೆ.
Advertisement
ಬೆಳಗ್ಗೆ 8.30ಕ್ಕೆ ಸಮ್ಮೇಳಾನಾಧ್ಯಕ್ಷರೂ ಆಗಿರುವ ಕವಿ ಹೆಚ್ ಎಸ್ ವೆಂಕಟೇಶ್‍ಮೂರ್ತಿ ಅವರನ್ನು ಮೆರವಣಿಗೆಯ ಮೂಲಕ ವೇದಿಕೆಗೆ ಕರೆದುಕೊಂಡು ಬರಲಾಗುತ್ತದೆ. ಬೆಳಗ್ಗೆ 11.20ಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ.