ಬೆಂಗಳೂರು: ರಾಜ್ಯದಲ್ಲಿಂದು 857 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಏಳು ಜನ ಸಾವನ್ನಪ್ಪಿದ್ದಾರೆ. ಇಂದು 964 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
Advertisement
ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 9,15,345ಕ್ಕೆ ಏರಿಕೆಯಾಗಿದ್ದು, 12,051 ಸೋಂಕಿತರು ಪ್ರಾಣ ಕಳೆದುಕೊಂಡಿದ್ದಾರೆ. ಸದ್ಯ ರಾಜ್ಯದಲ್ಲಿ 13,394 ಸಕ್ರಿಯ ಪ್ರಕರಣಗಳಿದ್ದು, 205 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.0.89 ಮತ್ತು ಮರಣ ಪ್ರಮಾಣ ಶೇ.0.41ರಷ್ಟಿದೆ. ಇಂದು 95,552 ಸ್ಯಾಂಪಲ್ ಗಳನ್ನ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು.
Advertisement
Advertisement
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 2, ಬಳ್ಳಾರಿ 7, ಬೆಳಗಾವಿ 12, ಬೆಂಗಳೂರು ಗ್ರಾಮಾಂತರ 13, ಬೆಂಗಳೂರು ನಗರ 471, ಬೀದರ್ 7, ಚಾಮರಾಜನಗರ 10, ಚಿಕ್ಕಬಳ್ಳಾಪುರ 25, ಚಿಕ್ಕಮಗಳೂರು 9, ಚಿತ್ರದುರ್ಗ 9, ದಕ್ಷಿಣ ಕನ್ನಡ 34, ದಾವಣಗೆರೆ 14, ಧಾರವಾಡ 6, ಗದಗ 6, ಹಾಸನ 16, ಹಾವೇರಿ 1, ಕಲಬುರಗಿ 14, ಕೊಡಗು 14, ಕೋಲಾರ 8, ಕೊಪ್ಪಳ 5, ಮಂಡ್ಯ 17, ಮೈಸೂರು 62, ರಾಯಚೂರು 2, ರಾಮನಗರ 2, ಶಿವಮೊಗ್ಗ 31, ತುಮಕೂರು 32, ಉಡುಪಿ 3, ಉತ್ತರ ಕನ್ನಡ 13, ವಿಜಯಪುರದಲ್ಲಿ 12 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. ಯಾದಗಿರಿಯಲ್ಲಿ ಕೊರೊನಾ ಪ್ರಕರಣಗಳು ಪತ್ತೆಯಾಗಿಲ್ಲ.