ಮೈಸೂರು: ಮಗಳನ್ನು ಕೊಟ್ಟು ಮದುವೆ ಮಾಡಲಿಲ್ಲ ಎಂಬ ದ್ವೇಷಕ್ಕೆ ಯುವತಿಯ ಪೋಷಕರು ಕಷ್ಟ ಪಟ್ಟು ಬೆಳೆದಿದ್ದ 850 ಅಡಿಕೆ ಗಿಡಗಳನ್ನು (Arcanut Trees) ನಾಶ ಮಾಡಿದ ಘಟನೆ ಹುಣಸೂರಿನ ಕಡೇ ಮನುಗನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಅಶೋಕ್ ಎಂಬಾತ ಈ ಕೃತ್ಯ ಎಸಗಿದ್ದಾನೆ. ಅದೇ ಗ್ರಾಮದ ವೆಂಕಟೇಶ್ ಎಂಬವರ ಪುತ್ರಿಯನ್ನು ಅಶೋಕ್ ಎಂಬಾತನಿಗೆ ಕೊಟ್ಟು ವಿವಾಹ ಮಾಡಲು ಮಾತುಕತೆ ನಡೆದಿತ್ತು. ಆದರೆ ಹುಡುಗ ಸರಿಯಿಲ್ಲ ಎಂದು ಯುವತಿ ಮದುವೆ ನಿರಾಕರಿಸಿದ್ದಳು. ಇದೇ ದ್ವೇಷದಿಂದ ಆತ ಮೊದಲಿಗೆ ಅರ್ಧ ಎಕರೆಯಲ್ಲಿ ಬೆಳೆದಿದ್ದ ಶುಂಠಿಯನ್ನ ನಾಶ ಮಾಡಿದ್ದ. ಇದನ್ನೂ ಓದಿ: ಕರ್ನಾಟಕ ಸುವರ್ಣ ಮಹೋತ್ಸವ – ಸಾಹಿತಿಗಳ ಸಲಹೆ ಪಡೆದ ಶಿವರಾಜ್ ತಂಗಡಗಿ
ಈಗ ಜಮೀನಿಗೆ ನುಗ್ಗಿ ಮೂರು ಎಕರೆಯಲ್ಲಿ ಬೆಳೆದಿದ್ದ ಅಡಿಕೆ ಗಿಡಗಳ ನಾಶ ಮಾಡಿದ್ದಾನೆಂದು ಯುವತಿಯ ತಂದೆ ವೆಂಕಟೇಶ್ ಗಂಭೀರ ಆರೋಪ ಮಾಡಿದ್ದಾರೆ. ಈ ಸಂಬಂಧ ಹುಣಸೂರು ಗ್ರಾಮಾಂತರ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಇನ್‍ಸ್ಟಾದಲ್ಲಿ ವಿದ್ಯಾರ್ಥಿನಿಯರ ಅಶ್ಲೀಲ ಫೋಟೋ ಅಪ್ಲೋಡ್ ಪ್ರಕರಣ – ಆರೋಪಿ ಅರೆಸ್ಟ್
Web Stories