ಲಂಡನ್: 85 ವರ್ಷದ ಹರೆಯದ ವೃದ್ಧರೊಬ್ಬರು 24 ಗಂಟೆಯಲ್ಲಿ 123 ಕಿ.ಮಿ(77 ಮೈಲಿ) ಓಡಿ ವಿಶ್ವ ದಾಖಲೆ ಮಾಡಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ದಕ್ಷಿಣ ಲಂಡನ್‍ನ ಹಿಂಕ್ಲಿ ರನ್ನಿಂಗ್ ಕ್ಲಬ್‍ನ ಜಿಯೋಫ್ ಒಲಿವರ್ ಎಂಬವರೇ ಈ ಸಾಧಕ. ಹರೆಯದವರಿಗೆ ಏರ್ಪಡಿಸಲಾಗಿದ್ದ 24 ಗಂಟೆಗಳ ಓಟದ ಸ್ಫರ್ಧೆಯಲ್ಲಿ ಬರೋಬ್ಬರಿ 77 ಮೈಲಿಗಳಷ್ಟು ದೂರವನ್ನು ಓಡುವ ಮೂಲಕ ವಿಶ್ವ ದಾಖಲೆಯನ್ನು ಮುರಿದಿದ್ದಾರೆ.
Advertisement
ಈ ವಿಡಿಯೋವನ್ನುಪತ್ರಕರ್ತೆ ಸೋಫಿ ರಾವರ್ತ್ ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ಇದು ಜೆಫ್ ಆಲಿವರ್ ಎಂಬವರಿಗೆ 85 ವರ್ಷ. ಅವರು 24 ಗಂಟೆಗಳ ಓಟದ ಸ್ಫರ್ಧೆಯಲ್ಲಿ ಸುಮಾರು 70 ಮೈಲಿಗಿಂತ ಹೆಚ್ಚು ಓಡಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
Advertisement
This is Geoff Oliver. He’s 85. He’s been going round and round this track for almost 24 hours and has covered more than 70 miles – a world record. #tooting24 pic.twitter.com/gxzgWmLmFX
— sophieraworth (@sophieraworth) September 23, 2018
Advertisement
ಒಲಿವರ್ ಈ ಮೊದಲು 50ನೇ ದಶಕದಲ್ಲಿ 65 ವರ್ಷ ವಯಸ್ಸಿದ್ದಾಗ ತನ್ನ ಮೊದಲ ವಿಶ್ವ ದಾಖಲೆಯನ್ನು ಸೃಷ್ಟಿಸಿದರು. ದಕ್ಷಿಣ ಲಂಡನ್ ನಲ್ಲಿ 2009 ರಲ್ಲಿ ನಡೆದ ಒಂದೇ ಕ್ರೀಡಾಕೂಟದಲ್ಲಿ ನಾಲ್ಕು ರಾಷ್ಟ್ರೀಯ ಮತ್ತು ಎರಡು ವಿಶ್ವ ದಾಖಲೆಗಳನ್ನು ನಿರ್ಮಿಸಿದ್ದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv