ಬೆಂಗಳೂರು: ಪೊಲೀಸರು ಬೆಂಗಳೂರಿನಲ್ಲಿ (Bengaluru) ಬೃಹತ್ ಸೈಬರ್ ಕ್ರೈಂ (Cyber Crime) ಜಾಲವನ್ನು ಪತ್ತೆ ಹಚ್ಚಿದ್ದು, ಸಾವಿರಾರು ಕೋಟಿ ಲೂಟಿ ಮಾಡುತ್ತಿದ್ದ ಗ್ಯಾಂಗ್ ಅನ್ನು ಪತ್ತೆ ಹಚ್ಚಿ 6 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಗ್ಯಾಂಗ್ ದೇಶಾದ್ಯಂತ ಸುಮಾರು 854 ಕೋಟಿ ರೂ. ಲೂಟಿ ಮಾಡಿದ್ದು, ಬೆಂಗಳೂರಿನಲ್ಲಿ 17 ಪ್ರಕರಣಗಳು ದಾಖಲಾಗಿವೆ. ವಿದ್ಯಾರಣ್ಯಪುರ (Vidyaranyapura) ಮೂಲದ ಮನೋಹರ್ ಸೇರಿ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ತನಿಖೆ ವೇಳೆ ದೇಶದ ಹಲವೆಡೆ 5,013 ಪ್ರಕರಣ ದಾಖಲಾಗಿದ್ದು, ಸದ್ಯ 5 ಕೋಟಿ ರೂ. ಹಣವನ್ನು ಸೈಬರ್ ಕ್ರೈಂ ಪೊಲೀಸರು ಫ್ರೀಜ್ ಮಾಡಿದ್ದಾರೆ. ಇದನ್ನೂ ಓದಿ: ಬಲೂಚಿಸ್ತಾನದ ಮಸೀದಿ ಬಳಿ ಭಾರೀ ಸ್ಫೋಟ – 52 ಜನ ದುರ್ಮರಣ
Advertisement
Advertisement
ಆರೋಪಿಗಳು ವಿದೇಶದಲ್ಲಿ ಇದ್ದುಕೊಂಡು ಬೆಂಗಳೂರಿನಿಂದ ಅಕೌಂಟ್‌ಗಳನ್ನು ಮ್ಯಾನೇಜ್ ಮಾಡುತ್ತಿದ್ದರು. ಬೆಂಗಳೂರಿನ ಗ್ಯಾಂಗ್ ವಿದೇಶದಲ್ಲಿ ಇರುವವರಿಗೆ ಸಹಾಯ ಮಾಡುತ್ತಿತ್ತು. ಮನೋಜ್ ಅಲಿಯಾಸ್ ಜಾಕ್, ಫಣೀಂದ್ರ, ವಸಂತ್, ಶ್ರೀನಿವಾಸ, ಚಕ್ರಾದರ್ ಅಲಿಯಾಸ್ ಚಕ್ರಿ, ಸೋಮಶೇಖರ್ ಅಲಿಯಾಸ್ ಅಂಕಲ್ ಬಂಧಿತ ಆರೋಪಿಗಳು. ಬೆಂಗಳೂರಿನ ವಿದ್ಯಾರಣ್ಯಪುರ, ಯಲಹಂಕ, ಭಾಗದಲ್ಲಿ ವಾಸವಾಗಿದ್ದ ಆರೋಪಿಗಳು ವಿದೇಶದಿಂದ ಬರುವ ಆದೇಶದಂತೆ ಬ್ಯಾಂಕ್ ಅಕೌಂಟ್‌ಗಳನ್ನು ಮ್ಯಾನೇಜ್ ಮಾಡುತ್ತಿದ್ದರು. ಇದನ್ನೂ ಓದಿ: ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆ ವೈದ್ಯೆಯಾಗಿದ್ದ ತಮಿಳುನಾಡಿನ ಡಾ. ಸಿಂಧುಜಾ ಅನುಮಾನಾಸ್ಪದ ಸಾವು
Advertisement
Advertisement
ಕೃತ್ಯ ಹೇಗೆ ನಡೆಯುತಿತ್ತು?
ವಾಟ್ಸಪ್ ಮತ್ತು ಟೆಲಿಗ್ರಾಂ ಮೂಲಕ ಭಾರತದಾದ್ಯಂತ ಜಾಬ್ ಆಫರ್ ಮೆಸೇಜ್‌ಗಳನ್ನು ಕಳುಹಿಸಲಾಗುತ್ತಿತ್ತು. ಮೆಸೇಜ್ ಕಳುಹಿಸಲು ಮತ್ತು ಸಾರ್ವಜನಿಕರ ಜೊತೆ ಸಂವಹನ ನಡೆಸಲು ಬೇರೆನೇ ತಂಡ ಇತ್ತು. ಪಾರ್ಟ್ ಟೈಮ್ ಜಾಬ್, ಗೂಗಲ್‌ನಲ್ಲಿ ಹೋಟೆಲ್ ಸೇರಿ ವಿವಿಧ ಶಾಪ್‌ಗಳಿಗೆ ಸ್ಟಾರ್ ರೇಟಿಂಗ್ ನೀಡಿ ಗೂಗಲ್ ರಿವ್ಯೂ ಹಾಕುವಂತೆ ಹೇಳುತ್ತಿದ್ದರು. ಈ ರೀತಿ ಮಾಡಿದರೆ ಹಣ ನೀಡುತ್ತೇವೆ ಎಂದು ನಂಬಿಸಿ ಬಳಿಕ ಟೆಲಿಗ್ರಾಂ ಗ್ರೂಪ್‌ನಲ್ಲಿ ಸೇರಿಸುತ್ತಿದ್ದರು. ಆರೋಪಿಗಳು ಸೇರಿದ್ದ ಟೆಲಿಗ್ರಾಂ ಗ್ರೂಪ್‌ನಲ್ಲಿ ಕ್ರಿಪ್ಟೋ ಕರೆನ್ಸಿಗೆ ಸಂಬಂಧ ಪಟ್ಟು ಹೂಡಿಕೆ ಮಾಡಲು ಪ್ರೇರಣೆ ಮಾಡಲಾಗುತ್ತಿತ್ತು. ಇದನ್ನೂ ಓದಿ: ಪೊಲೀಸ್ ಕಾರಿನ ಮೇಲೆ ಕುಳಿತು ಮಹಿಳೆಯ ಭರ್ಜರಿ ಡಾನ್ಸ್ – ರೀಲ್ಸ್‌ಗಾಗಿ ಕಾರು ಕೊಟ್ಟ ಅಧಿಕಾರಿ ಅಮಾನತು
ಒಂದು ಸಾವಿರದಿಂದ ಹತ್ತು ಸಾವಿರ ಹೂಡಿಕೆ ಮಾಡಲು ಹೇಳುತ್ತಿದ್ದರು. ಇಷ್ಟು ಹೂಡಿಕೆ ಮಾಡಿದರೆ ದಿನಕ್ಕೆ ಸಾವಿರದಿಂದ ಐದು ಸಾವಿರ ಹಣ ಬರುತ್ತೆ ಎಂದು ಹೇಳಿ ಪ್ರಾರಂಭದಲ್ಲಿ ಹಣ ನೀಡುತ್ತಿದ್ದರು. ಗ್ರೂಪ್‌ನಲ್ಲಿ ಇದ್ದವರು ತಮಗೆ ಇಂತಿಷ್ಟು ಲಾಭ ಬಂದಿದೆ ಎಂದೆಲ್ಲಾ ಮಾಹಿತಿ ಹಂಚಿಕೊಳ್ಳುವ ಮೂಲಕ ಸಾರ್ವಜನಿಕರ ನಂಬಿಕೆ ಗಳಿಸಿ ಹೂಡಿಕೆ ಮಾಡಿಸುತ್ತಿದ್ದರು. ಒಬ್ಬೊಬ್ಬರಿಂದ ಲಕ್ಷದಿಂದ ಕೋಟಿ ರೂ.ವರೆಗೆ ಹೂಡಿಕೆ ಮಾಡಿಸಲಾಗುತ್ತಿತ್ತು. ಹೀಗೆ ಹೂಡಿಕೆ ಮಾಡಿಸುತಿದ್ದ ಹಣ ಬೆಂಗಳೂರಿನ ವಿವಿಧ ಬ್ಯಾಂಕ್‌ನಲ್ಲಿನ ಕರೆಂಟ್ ಅಕೌಂಟ್‌ಗೆ ಸೇರುತಿತ್ತು. ನಂತರ ಹಣ ವಿದೇಶದ ಬ್ಯಾಂಕ್ ಅಕೌಂಟ್‌ಗೆ ಹೋಗುತ್ತಿತ್ತು. ಬಳಿಕ ಬ್ಯಾಂಕ್ ಅಕೌಂಟ್ ಮ್ಯಾನೇಜ್ ಮಾಡುತ್ತಿದ್ದ ಗ್ಯಾಂಗ್‌ಗೆ ಕ್ರಿಪ್ಟೋ ಕರೆನ್ಸಿ ಮೂಲಕ ಹಣ ನೀಡಲಾಗುತ್ತಿತ್ತು. ಈ ಹಣವನ್ನು ವಿದೇಶಿ ಗ್ಯಾಂಗ್ ಹಣವನ್ನು ವಿದೇಶದ ವಿವಿಧ ಕಂಪನಿಯಲ್ಲಿ ಹೂಡಿಕೆ ಮಾಡುತ್ತಿದ್ದರು. ಇದನ್ನೂ ಓದಿ: ಸಾಹಿತಿಗಳಿಗೆ ಜೀವ ಬೆದರಿಕೆ ಪತ್ರ – ದಾವಣಗೆರೆ ಮೂಲದ ಹಿಂದೂ ಸಂಘಟನೆಯ ಸಂಚಾಲಕ ಅರೆಸ್ಟ್
ಬಂಧಿತ ಆರೋಪಿಗಳ ಬಳಿ ಕಂಪ್ಯೂಟರ್, ಮೊಬೈಲ್, ಲ್ಯಾಪ್‌ಟಾಪ್, ಬ್ಯಾಂಕ್ ಅಕೌಂಟ್ ದಾಖಲೆಗಳು, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಸ್ವೈಪಿಂಗ್ ಮೆಷಿನ್, ಸಿಮ್ ಕಾರ್ಡ್‌ಗಳು, ಪ್ರಿಂಟರ್, ಚೆಕ್‌ಬುಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ವಿಕೃತಕಾಮಿ; ವನ್ಯಜೀವಿ ತಜ್ಞನಿಂದಲೇ 40 ಕ್ಕೂ ಹೆಚ್ಚು ನಾಯಿಗಳ ಮೇಲೆ ರೇಪ್, ದೌರ್ಜನ್ಯ!
Web Stories