ವಾಷಿಂಗ್ಟನ್: ಪ್ರೀತಿ ಮತ್ತು ಪ್ರಣಯಕ್ಕೆ ವಯಸ್ಸಿನ ಮಿತಿ ಇಲ್ಲ ಎನ್ನುತ್ತಾರೆ. ಅದರಂತೆ 83 ವರ್ಷದ ವೃದ್ಧೆಯೊಬ್ಬರು ಇದಕ್ಕೆ ಸಾಕ್ಷಿಯಾಗಿದ್ದಾರೆ. ಈ ಅಪ್ಡೇಟೆಡ್ ವೃದ್ಧೆ ಈ ಇಳಿ ವಯಸ್ಸಿನಲ್ಲಿಯೂ ಡೇಟಿಂಗ್ ಆ್ಯಪ್ ಮೂಲಕ ಪ್ರೀತಿ ಹುಡುಕುತ್ತಿದ್ದಾರೆ.
ಹೌದು. ಒಂದೆಡೆ ಅಚ್ಚರಿಯಾದರೆ. ಇನ್ನೊಂದೆಡೆ ಈ ವಯಸ್ಸಿನಲ್ಲಿ ಇದೆಲ್ಲಾ ಯಾಕೆ ಬೇಕಿತ್ತಪ್ಪ ಎಂದು ಅನಿಸೋದು ಸಾಮಾನ್ಯ. ವಯಸ್ಸು 80 ಆದರೆ ಬದುಕೇ ಮುಗಿದು ಹೋಯ್ತು ಎಂದುಕೊಳ್ಳುವವರೇ ಹೆಚ್ಚು. ಹೀಗಿರುವಾಗ ಹ್ಯಾಟಿ(85) ಇಳಿ ವಯಸ್ಸಿನಲ್ಲಿ ಡೇಟಿಂಗ್ ಆ್ಯಪ್ ಮೂಲಕ ಪ್ರೀತಿ ಹುಡುಕಿ ಹೊರಟ್ಟಿದ್ದಾರೆ. ವಯಸ್ಸು 80 ಆದರೂ ಯುವತಿಯರಿಗೇ ಸೆಡ್ಡು ಹೊಡೆಯುವಂತೆ ಹ್ಯಾಟಿ ಸ್ಟೈಲಿಶ್ ಲುಕ್ನಲ್ಲಿ ಮಿಂಚುತ್ತಾರೆ. ಅಲ್ಲದೆ ನನಗೂ ಒಬ್ಬ ಗೆಳೆಯ ಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್, ವಿಡಿಯೋ ಹಾಕಿ ಸುದ್ದಿಯಾಗಿದ್ದಾರೆ.
Advertisement
Advertisement
ವಯಸ್ಸಾಗಿದ್ದರೂ ಹ್ಯಾಟಿ ಅವರು ಸಖತ್ ಎನರ್ಜಿಟಿಕ್. ಈ ವಯಸ್ಸಿನಲ್ಲೂ ಸಖತ್ ಬೋಲ್ಡ್ ಲುಕ್ನಲ್ಲಿ ಮಿಂಚುವ ಹ್ಯಾಟಿ ಟಿಂಡರ್ ನಂತಹ ಫೇಮಸ್ ಡೇಟಿಂಗ್ ಆ್ಯಪ್ಗಳಲ್ಲಿ ಸಂಗಾತಿಯ ಹುಡುಕಾಟದಲ್ಲಿದ್ದಾರೆ. ತನ್ನ ಪೀಳಿಗೆಯ ಪುರುಷರು ಯಾರು ಈಗ ಬದುಕಿಲ್ಲ. ಇದ್ದರೂ ಅವರು ಡೇಟಿಂಗೆಲ್ಲಾ ಬರಲ್ಲ. ಅದಕ್ಕೆ ನನಗಿಂತ ಯಂಗ್ ಆಗಿರುವವರೊಂದಿಗೆ ಡೇಟಿಂಗ್ ಮಾಡಲು ಬಯಸುತ್ತೇನೆ ಎಂದು ಹಟ್ಟಿ ಬಿಂದಾಸ್ಸಾಗಿ, ಯಾವುದೇ ಮುಜುಗರವಿಲ್ಲದೆ ಹೇಳಿಕೊಂಡಿದ್ದಾರೆ.
Advertisement
ಒಂದು ವೇಳೆ ನನಗೆ ನನ್ನ ವಯಸ್ಸಿನ ಲವರ್ ಸಿಕ್ಕಿದರೂ ಅವರು ಅಯ್ಯೊ ವಯಸ್ಸಾಯ್ತು ಅನ್ನೋ ಟೆನ್ಷನ್ನಲ್ಲಿಯೇ ಇರುತ್ತಾರೆ. ಆದರೆ ಯುವಕರಿಗೆ ಆ ಸಮಸ್ಯೆ ಇಲ್ಲ. ಅವರು ಆರಾಮಾಗಿ ಡೇಟಿಂಗ್ ಮಾಡುತ್ತಾರೆ ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
Advertisement
ಹ್ಯಾಟಿ ಅವರಿಗೆ ಮದುವೆಯಾಗಿ ಮಕ್ಕಳಿದ್ದಾರೆ. ಆದರೆ ಮಕ್ಕಳು ಕಾಲೇಜಿಗೆ ಹೋಗುವಷ್ಟು ದೊಡ್ಡವರಾದಾಗ ಹಟ್ಟಿ ಪತಿ ಅವರಿಂದ ವಿಚ್ಛೇದನ ಪಡೆದುಕೊಂಡಿದ್ದನು. ಆ ಬಳಿಕ ಆತ ಬೇರೊಬ್ಬರ ಜೊತೆ ಮದುವೆಯಾಗಿ ದಾಂಪತ್ಯ ಶುರು ಮಾಡಿದ್ದನು. ಆದರೆ ಸಾಕಷ್ಟು ವರ್ಷ ಒಬ್ಬಂಟಿಯಾಗಿದ್ದ ಹ್ಯಾಟಿಯವರಿಗೆ 50 ವರ್ಷ ವಯಸ್ಸಾದ ಬಳಿಕ ಮತ್ತೆ ಸಂಗಾತಿಗಾಗಿ ಪರಿತಪಿಸುತ್ತಿದ್ದಾರೆ. ಆಗಲೇ ಅವರು ಪತ್ರಿಕೆಯಲ್ಲಿ ಸಂಗಾತಿಗಾಗಿ ಜಾಹೀರಾತನ್ನು ಸಹ ನೀಡಿದ್ದಾರೆ.
https://www.facebook.com/ExtremeLoveShow/videos/466659747250454/