ಮುಂಬೈ: ರಣವೀರ್ ಸಿಂಗ್ ಅಭಿನಯದ 83 ಸಿನಿಮಾ ದೃಶ್ಯವೊಂದರಲ್ಲಿರುವ ಜಾತಿವಾದಿ ಸಂಭಾಷಣೆಯಿಂದಾಗಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಕಪಿಲ್ ದೇವ್ ಪಾತ್ರ ನಿರ್ವಹಿಸಿದ ರಣವೀರ್ ಸಿಂಗ್ ಹಾಗೂ ಕೆ. ಶ್ರೀಕಾಂತ್ ಪಾತ್ರ ನಿರ್ವಹಿಸಿದ ಜೀವಾ ನಡುವಿನ ಸಂಭಾಷಣೆಯಲ್ಲಿ ಜೀವಾ, ನಾವು ಸೆಮಿಫೈನಲ್ ಪಂದ್ಯದವರೆಗೂ ಕಠಿಣ ಪರಿಶ್ರಮದಿಂದ ಬಂದಿದ್ದೇವೆ. ʼಕೋಟಾʼ ವ್ಯವಸ್ಥೆಯನ್ನು ಬಳಸಿ ಬಂದಿಲ್ಲ ಎಂದಿದ್ದಾರೆ. ಇದು ಹೊಸ ವಿವಾದ ಹುಟ್ಟು ಹಾಕಿದೆ.
Advertisement
Advertisement
ಜಾತಿಯಾಧಾರಿತ ಕೋಟಾ ವ್ಯವಸ್ಥೆಯಡಿಯಲ್ಲಿ ಮೀಸಲಾತಿ ಪಡೆಯುವುದು ಕೀಳು ಎಂಬಂತೆ ಇಲ್ಲಿ ಚಿತ್ರಿಸಲಾಗಿದೆ. ಕೋಟಾ ವ್ಯವಸ್ಥೆಯ ಬಗ್ಗೆ ಅವಹೇಳನಕಾರಿ ಕಾಮೆಂಟ್ ಮಾಡಲಾಗಿದೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. ಕೆಲವರು ಸಿನಿಮಾ ಪ್ರದರ್ಶನ ನಿಷೇಧಕ್ಕೂ ಆಗ್ರಹಿಸಿದ್ದಾರೆ.
Advertisement
Advertisement
1983ರಲ್ಲಿ ವಿಶ್ವಕಪ್ ಫೈನಲ್‍ನಲ್ಲಿ ವೆಸ್ಟ್ ಇಂಡೀಸ್ ಅನ್ನು ಸೋಲಿಸಿ ಟ್ರೋಫಿಯನ್ನು ಗೆದ್ದುಕೊಂಡ ನೈಜ ಘಟನೆ ಆಧಾರಿತ ಸಿನಿಮಾ ಇದಾಗಿದೆ. ಕಪಿಲ್ ದೇವ್ ಅವರ ನಾಯಕತ್ವದಲ್ಲಿ ಭಾರತ ತಂಡ ಫೈನಲ್‍ನಲ್ಲಿ ವೆಸ್ಟ್ ಇಂಡೀಸ್ ಅನ್ನು ಸೋಲಿಸಿ ವಿಶ್ವಕಪ್ ಟ್ರೋಫಿಯನ್ನು ಪಡೆದಿತ್ತು. ರಿಲಯನ್ಸ್ ಎಂಟರ್ಟೈನ್ಮೆಂಟ್ ಮತ್ತು ಫ್ಯಾಂಟಮ್ ಫಿಲ್ಮ್ಸ್ ಪ್ರಸ್ತುತಪಡಿಸುತ್ತಿರುವ ʼ83ʼ ಸಿನಿಮಾ ಹಿಂದಿ, ತಮಿಳು, ತೆಲುಗು, ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ಡಿಸೆಂಬರ್ 24ರಂದು ತೆರೆ ಕಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದನ್ನೂ ಓದಿ: ವಿಶ್ವಕಪ್ ಗೆಲ್ಲುವ ಕಥೆಯಾಧಾರಿತ 83 ಸಿನಿಮಾಗೆ ಟ್ಯಾಕ್ಸ್ ಇಲ್ಲ!
ಚಿತ್ರದಲ್ಲಿ ತ್ರಿಪಾಟಿ, ತಾಹಿರ್ ರಾಜ್ ಭಾಸಿನ್, ಜೀವಾ, ಸಾಕಿಬ್ ಸಲೀಂ, ಜತಿನ್ ಸರ್ನಾ, ಚಿರಾಗ್ ಪಾಟೀಲ್, ದಿನಕರ್ ಶರ್ಮಾ, ನಿಶಾಂತ್ ದಹಿಯಾ ಹೀಗೆ ಹಲವರು ನಟಿಸಿದ್ದಾರೆ. ನಟಿ ದೀಪಿಕಾ ಪಡುಕೋಣೆ ಅವರು ಕಪಿಲ್ ಪತ್ನಿ ರೋಮಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇದನ್ನೂ ಓದಿ: ಕಪಿಲ್ ದೇವ್ ಆಗಲು ನಿತ್ಯ 4 ಗಂಟೆ ಕ್ರಿಕೆಟ್ ಅಭ್ಯಾಸ ಮಾಡುತ್ತಿದ್ದ ರಣವೀರ್ ಸಿಂಗ್!