– ಕಳೆದ 24 ಗಂಟೆಯಲ್ಲಿ 45,230 ಹೊಸ ಪ್ರಕರಣ
ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಒಟ್ಟು ಸಂಖ್ಯೆ 82 ಲಕ್ಷದ ಗಡಿ ದಾಟಿದೆ. ಕಳೆದ 24 ಗಂಟೆಯಲ್ಲಿ 45,230 ಹೊಸ ಪ್ರಕರಣಗಳು ವರದಿಯಾಗಿದ್ದು, 496 ಸೋಂಕಿತರು ಸಾವನ್ನಪ್ಪಿದ್ದಾರೆ.
ಇದುವರೆಗೂ 75,44,798 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ದೇಶದಲ್ಲಿ 5,61,908 ಸಕ್ರಿಯ ಪ್ರಕರಣಗಳಿದ್ದು, ಗುಣಮುಖ ಪ್ರಮಾಣ ಸಹ ಚೇತರಿಕೆ ಕಂಡಿದೆ. ನವೆಂಬರ್ 1ರವರೆಗೆ ದೇಶದಲ್ಲಿ 11,07,43,103 ಸ್ಯಾಂಪಲ್ ಗಳನ್ನ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದ್ದು, ನಿನ್ನೆ ಒಂದೇ ದಿನ 8.55 ಲಕ್ಷ ಸ್ಯಾಂಪಲ್ ಪರೀಕ್ಷೆಗೆ ಒಳಪಡಿಸಲಾಗಿದೆ. ಮಾಹಾಮಾರಿಗೆ ದೇಶದ 1,22,607 ಜನರು ಪ್ರಾಣ ಕಳೆದುಕೊಂಡಿದ್ದಾರೆ.
Advertisement
India records 45,230 new COVID-19 cases, 496 deaths in last 24 hours
Read @ANI Story | https://t.co/pmzYUhvvtf pic.twitter.com/VQXZLX4ZKF
— ANI Digital (@ani_digital) November 2, 2020
Advertisement
ಭಾರತದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಅಕ್ಟೋಬರ್ ನಿಂದ ಇಳಿಮುಖವಾಗುತ್ತಿದ್ದು, ಶೇ. 71.61ರಷ್ಟು ಇಳಿಕೆಯಾಗಿದೆ. ಮರಣ ಪ್ರಮಾಣ ಸಹ ಶೇ.70.57ರಷ್ಟು ಇಳಿಕೆಯಾಗಿದೆ. 10 ಲಕ್ಷ ಸ್ಯಾಂಪಲ್ ಪರೀಕ್ಷೆಯಲ್ಲಿ 5,908 ಮಂದಿಯ ವರದಿ ಪಾಸಿಟಿವ್ ಬರುತ್ತಿದೆ.
Advertisement