ಶಾರ್ಜಾ: ಇಂದಿನ ಪಂದ್ಯವನ್ನು 82 ರನ್‌ಗಳಿಂದ ಆರ್‌ಸಿಬಿ ಗೆಲ್ಲುವ ಮೂಲಕ ತನ್ನ ರನ್‌ರೇಟ್ ಉತ್ತಮ ಪಡಿಸಿದೆ.
ಆರ್‌ಸಿಬಿ ಎರಡನೇ ಪಂದ್ಯವನ್ನು ಪಂಜಾಬ್ ವಿರುದ್ಧ ಆಡಿತ್ತು. 207 ರನ್‌ಗಳ ಗುರಿಯನ್ನು ಬೆನ್ನಟ್ಟಿದ್ದ ಆರ್‌ಸಿಬಿ 17 ಓವರ್‌ಗಳಲ್ಲಿ 109 ರನ್‌ಗಳಿಗೆ ಆಲೌಟ್ ಆಗಿತ್ತು. ಪರಿಣಾಮ ನೆಟ್ ರನ್ ರೇಟ್ -2.175ಕ್ಕೆ ಕುಸಿದಿತ್ತು. ಇದು ಆರ್‌ಸಿಬಿಗೆ ಭಾರೀ ಹೊಡೆತ ನೀಡಿತ್ತು.
Advertisement
Advertisement
ಇಂದು ಪಂದ್ಯಕ್ಕೂ ಮುನ್ನ ಅಂಕ ಪಟ್ಟಿಯಲ್ಲಿ ಆರ್‌ಸಿಬಿ 4ನೇ ಸ್ಥಾನದಲ್ಲಿದ್ದರೂ -0.820 ನೆಟ್ ರನ್ ರೇಟ್ ಹೊಂದಿತ್ತು. 8 ಅಂಕಗಳಿಸಿದ್ದರೂ ನೆಟ್ ರನ್ ರೇಟ್ ಲೆಕ್ಕಾಚಾರ ನೋಡಿದರೆ ಕೊನೆಯ ಸ್ಥಾನದಲ್ಲೇ ಇತ್ತು. ಆದರೆ ಇಂದು 82 ರನ್‌ಗಳ ಅಂತರದಿಂದ ಗೆಲ್ಲುವ ಮೂಲಕ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಜಿಗಿದಿದೆ. ಇದನ್ನೂ ಓದಿ: ಆರ್‌ಸಿಬಿಗೆ 82 ರನ್‍ಗಳ ಭರ್ಜರಿ ಗೆಲುವು – 2013ರ ನಂತರ ವಿಶೇಷ ಸಾಧನೆಗೈದ ಬೆಂಗಳೂರು
Advertisement
Advertisement
8 ಪಂದ್ಯಗಳನ್ನು ಆಡಿರುವ ಮುಂಬೈ, ಡೆಲ್ಲಿ, ಆರ್‌ಸಿಬಿ ಸಮಾನವಾಗಿ 10 ಅಂಕಗಳನ್ನು ಪಡೆಯುವ ಮೂಲಕ ಅನುಕ್ರಮವಾಗಿ ಮೊದಲ ಮೂರು ಸ್ಥಾನಗಳನ್ನು ಪಡೆದುಕೊಂಡಿದೆ. ಮುಂಬೈ +1.327, ಡೆಲ್ಲಿ +1.038, ಬೆಂಗಳೂರು -0.116 ನೆಟ್ ರನ್ ರೇಟ್ ಹೊಂದಿದೆ.
ಒಟ್ಟು 8 ತಂಡಗಳು ಇರುವ ಕಾರಣ ಪ್ಲೇ ಆಫ್‌ಗೆ ಹೋಗುವ ಸಂದರ್ಭದಲ್ಲಿ ಎರಡು ತಂಡಗಳು ಸಮವಾಗಿ ಅಂಕ ಪಡೆದಿದ್ದರೆ ನೆಟ್ ರನ್ ರೇಟ್ ಆಧಾರದ ಮೇಲೆ ತಂಡವನ್ನು ಆಯ್ಕೆ ಮಾಡಲಾಗುತ್ತದೆ. ಈ ವೇಳೆ ಪಂದ್ಯ ಸೋತರೂ ನೆಟ್ ರನ್ ರೇಟ್ ಚೆನ್ನಾಗಿದ್ದರೆ ಆ ತಂಡ ಪ್ಲೇ ಆಫ್‌ಗೆ ಹೋಗುತ್ತದೆ. ಈ ಕಾರಣಕ್ಕೆ ಇಂದಿನ ಭರ್ಜರಿ ಜಯದಿಂದ ಆರ್‌ಸಿಬಿ ನೆಟ್ ರನ್ ಏರಿಕೆಯಾಗಿದೆ.
The emotions and celebrations say it all!
Isuru Udana strikes. Dre Russ departs.#Dream11IPL pic.twitter.com/wC9hkL1GBs
— IndianPremierLeague (@IPL) October 12, 2020