ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡಿದ್ದು, ಸಾವಿನ ಪ್ರಕರಣ ಶೂನ್ಯವಾಗಿದೆ. ಕಳೆದ 24 ಗಂಟೆಯಲ್ಲಿ 816 ಮಂದಿಯಲ್ಲಿ ಕೋವಿಡ್ 19 ಇರುವುದು ದೃಢಪಟ್ಟಿದೆ.
Advertisement
ಇಂದು 703 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಈ ಮೂಲಕ ಇದುವರೆಗೆ 39,19,155 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಂದು 22,527 ಮಂದಿಯನ್ನು ಕೊರೊನಾ ಟೆಸ್ಟ್ಗೆ ಒಳಪಡಿಸಲಾಗಿದ್ದು, ಇದುವರೆಗೆ 66,859,681 ಮಂದಿಯನ್ನು ಪರೀಕ್ಷೆ ನಡೆಸಲಾಗಿದೆ.
Advertisement
Advertisement
5,180 ಸಕ್ರಿಯ ಪ್ರಕರಣಗಳಿವೆ. ಇಂದು ಓರ್ವ ಮಹಾಮಾರಿಗೆ ಬಲಿಯಾಗಿದ್ದು, ಈ ಮೂಲಕ ಒಟ್ಟು 40072 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ. ಕೋವಿಡ್ ಪಾಸಿಟಿವಿಟಿ ದರ ಶೇ.3.62 ಇದ್ದು, ಮೃತರ ಪ್ರಮಾಣ ಶೇ.0.00 ಇದೆ. ಒಟ್ಟು 22,527 ಸ್ಯಾಂಪಲ್ (ಆರ್ ಟಿಪಿಸಿಆರ್ 16,176+ 6,351 (ರ್ಯಾಪಿಡ್ + ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ: ಆಫ್ಘನ್ನಲ್ಲಿ ಭೂಕಂಪನ: ಸಾವಿನ ಸಂಖ್ಯೆ 1,150ಕ್ಕೆ ಏರಿಕೆ, 3 ಸಾವಿರ ಮನೆಗಳು ನಾಶ
Advertisement
ಬೆಂಗಳೂರು ನಗರ ಒಂದರಲ್ಲೇ 776 ಪ್ರಕರಣಗಳು ಪತ್ತೆಯಾಗಿದ್ದು, ಬಳ್ಳಾರಿ 3, ದಕ್ಷಿಣ ಕನ್ನಡ 11, ದಾವಣಗೆರೆ 1, ಧಾರವಾಡ 4, ಕಲಬುರಗಿ 3, ಕೋಲಾರ 2, ಮಂಡ್ಯ 1, ಮೈಸೂರು 8, ರಾಮನಗರ 2, ಶಿವಮೊಗ್ಗ 2, ಉಡುಪಿಯಲ್ಲಿ ಮೂರು ಪ್ರಕರಣಗಳು ಇಂದಿನ ಹೆಲ್ತ್ ಬುಲೆಟಿನ್ನಲ್ಲಿ ವರದಿಯಾಗಿದೆ.