ಜೈಪುರ: ನಾಯಿಗಳ ಕಾದಾಟದ (Dog Fight) ಮೇಲೆ ಬೆಟ್ಟಿಂಗ್‌ನಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ 81 ಜನರನ್ನು ಬಂಧಿಸಿರುವ ಘಟನೆ ರಾಜಸ್ಥಾನದ (Rajasthan) ಹನುಮಾನ್‌ಗಢ ಜಿಲ್ಲೆಯಲ್ಲಿ ನಡೆದಿದೆ.
ಫಾರ್ಮ್‌ಹೌಸ್‌ವೊಂದರ ಮೇಲೆ ದಾಳಿ ನಡೆಸಿದ್ದು, 19 ವಿದೇಶಿ ತಳಿಯ ನಾಯಿಗಳು ಹಾಗೂ 15 ವಾಹನಗಳನ್ನ ಜಪ್ತಿ ಮಾಡಿದ್ದು, ಘಟನೆ ವೇಳೆ 81 ಮಂದಿಯನ್ನ ಬಂಧಿಸಿರುವುದಾಗಿ ಹನುಮಾನ್‌ಗಢ ಎಸ್ಪಿ ಅರ್ಷದ್ ಅಲಿ ತಿಳಿಸಿದ್ದಾರೆ. ಇದನ್ನೂ ಓದಿ: ಮಹಿಳೆ ಮೇಲೆ ಲಾರಿ ಹರಿದು ಸ್ಥಳದಲ್ಲೇ ಸಾವು – ಕಣ್ಣೆದುರೇ ತಾಯಿ ಕಳೆದುಕೊಂಡ ಮಕ್ಕಳ ಆಕ್ರಂದನ
- Advertisement 2-
- Advertisement 3-
ಪೊಲೀಸರು ದಾಳಿ ಮಾಡಿದ ತಕ್ಷಣ ಕೆಲವರು ಗೋಡೆ ಹಾರಿ ಎಸ್ಕೇಪ್ ಆದ್ರು. ಕೆಲವರು ಪರವಾನಗಿ ಹೊಂದಿದ್ದ ಶಸ್ತ್ರಾಸ್ತ್ರಗಳನ್ನು ಹೊಂದಿದ್ದರು, ಶಸ್ತ್ರಾಸ್ತ್ರಗಳನ್ನು ಜಪ್ತಿ ಮಾಡಿ, ಆರೋಪಿಗಳನ್ನ ಬಂಧಿಸಲಾಗಿದೆ. ಬೆಟ್ಟಿಂಗ್ ಆರೋಪದ ಮೇಲೆ ಸಿಕ್ಕಿಬಿದ್ದವರ ಪೈಕಿ ಹೆಚ್ಚಿನವರು ಪಂಜಾಬ್, ಹರಿಯಾಣ ಮೂಲದವರಾಗಿದ್ದಾರೆ. ಅವರೆಲ್ಲರೂ ಖಾಸಗಿ ವಾಹನದಲ್ಲಿ ತಮ್ಮ ನಾಯಿಗಳನ್ನ ತಂದಿದ್ದರು. ಕಾದಾಟದ ವೇಳೆ ಕೆಲವು ನಾಯಿಗಳು ಗಾಯಗೊಂಡಿದ್ದು, ಅವುಗಳನ್ನು ಚಿಕಿತ್ಸೆಗಾಗಿ ಶ್ವಾನಕೇಂದ್ರಕ್ಕೆ ರವಾನಿಸಲಾಗಿದೆ ಎಂದು ಅರ್ಷದ್ ಅಲಿ ಹೇಳಿದ್ದಾರೆ. ಇದನ್ನೂ ಓದಿ: ಮರ ಕತ್ತರಿಸುವ ಯಂತ್ರದಿಂದ ಮನೆಯಲ್ಲಿ ಮಲಗಿದ್ದ ವ್ಯಕ್ತಿಯ ಬರ್ಬರ ಹತ್ಯೆ – ಅಪರಿಚಿತನಿಂದ ಕೃತ್ಯ
- Advertisement 4-
ಆರೋಪಿಗಳ ವಿರುದ್ಧ ಪ್ರಾಣಿ ಹಿಂಸೆ ತಡೆ ಕಾಯ್ದೆ ಮತ್ತು ಜೂಜಾಟ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳು ಸುಮಾರು 250 ಸದಸ್ಯರನ್ನು ಹೊಂದಿರುವ ಸೋಷಿಯಲ್ ಮೀಡಿಯಾ ಗ್ರೂಪ್ ಸಹ ಮಾಡಿಕೊಂಡಿದ್ದರು ಎಸ್ಪಿ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಬೆಂಗಳೂರು| ಕ್ರಿಸ್‌ಮಸ್ ಆಚರಣೆಯಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿ – Photo Gallery