ಬೀಜಿಂಗ್: ಸರಿಸುಮಾರು 800 ವರ್ಷಗಳ ಹಿಂದೆ ಮದ್ಯದ ಸಂಗ್ರಹಿಸಿಡಲು ಬಳಸುತ್ತಿದ್ದ ಅವಶೇಷಗಳು ಮಧ್ಯ ಚೀನಾದಲ್ಲಿ ಪತ್ತೆಯಾಗಿವೆ.
ಈ ವಿಚಾರವಾಗಿ ಮಾಹಿತಿ ನೀಡಿದ ಪುರಾತತ್ವ ಶಾಸ್ತ್ರಜ್ಞರು, ಮಣ್ಣಿನ ಮಡಿಕೆಯಲ್ಲಿ ಮದ್ಯ ಸಂಗ್ರಹಿಸಿಟ್ಟಿಡುತ್ತಿರುವುದು ಪತ್ತೆಯಾಗಿದೆ. ಇದು ಸುಮಾರು 800 ವರ್ಷಗಳ ಹಿಂದಿನದ್ದಾಗಿದೆ. ಚೀನಾದ ಜನರು ಮೊನಾಸ್ಕಸ್ ಅಲ್ಕೋಹಾಲ್ ತಯಾರಿಸಲು ಬಳಸುತ್ತಿದ್ದರು ಅನ್ನೋದಕ್ಕೆ ಪುರಾವೆ ಸಿಕ್ಕಿವೆ ಎಂದು ತಿಳಿಸಿದ್ದಾರೆ.
ಚೀನಾದ ಸಾಂಸ್ಕ್ರತಿಕ ತಾಣ ಹೆನಾನ್ ಪ್ರಾಂತ್ಯದ ಪೀಲಿಗಾಂಗ್‍ನಲ್ಲಿ 2 ಮಣ್ಣಿನ ಮಡಿಕೆಗಳು ಪತ್ತೆ ಆಗಿವೆ ಎಂದು ಚೀನಾದ ಪುರಾತತ್ವ ಇಲಾಖೆಯ ಅಧಿಕಾರಿ ಯೊಂಗ್‍ಕಿಯಾಂಗ್ ಹೇಳಿದ್ದಾರೆ. ಇದನ್ನೂ ಓದಿ: ರಾತ್ರೋ, ರಾತ್ರಿ ಪುನೀತ್ ಹೆಸರಿಟ್ಟಿದ್ದ ಬಡಾವಣೆ ನಾಮಫಲಕ ಧ್ವಂಸ – ಸ್ಥಳೀಯರ ಆಕ್ರೋಶ
ಇಲ್ಲಿ ಪತ್ತೆಯಾಗಿರುವ ಮಡಿಕೆಗಳು ಮದ್ಯ ತುಂಬಲು ಮತ್ತು ಮದ್ಯ ತಯಾರಿಸಲು ಬಳಸುಲಾಗುತ್ತಿತ್ತು ಅನ್ನೋದು ಸ್ಪಷ್ಟವಾಗುತ್ತಿದೆ. ಪೀಲಿಗಾಂಗ್ ಪ್ರಾಂತ್ಯವು ಚೀನಾದ ಅತ್ಯಂತ ಪ್ರಾಚೀನ ಕಾಲದ ಪ್ರದೇಶವಾಗಿದೆ. ಇದನ್ನೂ ಓದಿ: ಸಿಎಂ ಭಾವುಕ ಭಾಷಣಕ್ಕೆ ಸಿ.ಎಂ ಇಬ್ರಾಹಿಂ ಲೇವಡಿ