ಬೆಂಗಳೂರು: ರಾಜ್ಯದ ಜನ ವಿದ್ಯುತ್ ಬಿಲ್ (Electricity Bill) ಕಟ್ಟದೇ ಇದ್ರೆ ಪವರ್ ಕಟ್ ಅಥವಾ ಫಟಾಫಟ್ ಅಂತಾ ವಸೂಲಿ ಮಾಡುವ ಇಂಧನ ಇಲಾಖೆ ಸರ್ಕಾರಿ ಕಚೇರಿಗಳಿಗೆ ಮಾತ್ರ ಭರ್ಜರಿ ವಿನಾಯಿತಿ ನೀಡಿದೆ. ಇದು ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿದೆ.
ಒಂದು ತಿಂಗಳು ಜನಸಾಮಾನ್ಯರು ವಿದ್ಯುತ್ ಬಿಲ್ ಕಟ್ಟೋದು ಹೆಚ್ಚು ಕಮ್ಮಿ ಆದ್ರೂ ಪವರ್‌ಕಟ್ (Power Cut) ಮಾಡ್ತಾರೆ.. ಇಲ್ಲ ದಂಡ ಹಾಕಿ ಕರೆಂಟ್ ಬಿಲ್ ವಸೂಲಿ ಮಾಡ್ತಾರೆ. ಆದ್ರಿಲ್ಲಿ ಸರ್ಕಾರಿ ಇಲಾಖೆ & ಕಚೇರಿಗಳಿಗೆ ಇಂಧನ ಇಲಾಖೆ ಭಾರೀ ವಿನಾಯ್ತಿ ಕೊಟ್ಟಂತೆ ಕಾಣ್ತಿದೆ. ಯಾಕಂದ್ರೆ ಬಹುತೇಕ ಸರ್ಕಾರಿ ಇಲಾಖೆಗಳು (Government Departments) ಕರೆಂಟ್ ಬಿಲ್ ಬಾಕಿ ಉಳಿಸಿಕೊಂಡಿವೆ. ಅದು ಒಂದಲ್ಲ.. ಎರಡಲ್ಲ, ಬರೋಬ್ಬರಿ 8 ಸಾವಿರ ಕೋಟಿಯಷ್ಟು ವಿದ್ಯುಲ್ ಬಿಲ್ ಬಾಕಿ ಉಳಿಸಿಕೊಂಡಿವೆ.
Advertisement
Advertisement
ಹೌದು, ಸರ್ಕಾರಿ ಇಲಾಖೆಗಳು ಬರೋಬ್ಬರಿ 8 ಸಾವಿರ ಕೋಟಿಯಷ್ಟು ವಿದ್ಯುತ್ ಬಿಲ್ ಬಾಕಿ ಇಟ್ಟುಕೊಂಡಿದೆ. ಅಚ್ಚರಿಯಾದ್ರೂ ಇದು ಸತ್ಯ. ಇಂಧನ ಇಲಾಖೆಯೇ ಈ ಡೇಟಾವನ್ನು ನೀಡಿದೆ. ಹಾಗಿದ್ರೇ ಯಾವ್ಯಾವ ಸರ್ಕಾರಿ ಇಲಾಖೆ ಎಷ್ಟೆಷ್ಟು ಬಾಕಿ ಬಿಲ್ ಉಳಿಸಿಕೊಂಡಿದೆ ಅಂತ ನೋಡೋದಾದ್ರೆ…
Advertisement
ಯಾವ್ಯಾವ ಇಲಾಖೆಯಿಂದ ಎಷ್ಟೆಷ್ಟು ಬಾಕಿ?
* ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್ – 4,106 ಕೋಟಿ ರೂ.
* ನಗರಾಭಿವೃದ್ಧಿ ಇಲಾಖೆ – 2,313 ಕೋಟಿ ರೂ.
* ನೀರಾವರಿ ಇಲಾಖೆ – 1,085 ಕೋಟಿ ರೂ.
* ವಾಣಿಜ್ಯ & ಕೈಗಾರಿಕಾ ಇಲಾಖೆ – 353 ಕೋಟಿ ರೂ.
* ಸಣ್ಣ ನೀರಾವರಿ ಇಲಾಖೆ – 126 ಕೋಟಿ ರೂ.
* ಆರೋಗ್ಯ ಇಲಾಖೆ – 33 ಕೋಟಿ ರೂ.
* ಇತರೆ 30 ಸರ್ಕಾರಿ ಇಲಾಖೆಗಳು – 90 ಕೋಟಿ ರೂ.
* ಒಟ್ಟು ಹಣ ಬಾಕಿ – 8,169 ಕೋಟಿ ರೂ.
Advertisement
ಹಣದ ಕೊರತೆ ನೆಪವೊಡ್ಡಿ ಬಿಲ್ ಪಾವತಿಸದ ಇಲಾಖೆಗಳು:
ಇನ್ನೂ ಸರ್ಕಾರಿ ಇಲಾಖೆಗಳಿಗೆ ಕರೆಂಟ್ ಬಿಲ್ ಕಟ್ಟುವಂತೆ ಇಂಧನ ಇಲಾಖೆ ಸೂಚಿಸಿದೆ. ಆದ್ರೆ ಕೆಲ ಇಲಾಖೆಗಳು ದುಡ್ಡಿನ ಕೊರತೆ ನೆಪವೊಡ್ಡಿ ಕಟ್ಟಿಲ್ಲ. ಹೀಗಾಗಿ ಇಂಧನ ಇಲಾಖೆಗೆ 8 ಸಾವಿರ ಕೋಟಿಯಷ್ಟು ಬೊಕ್ಕಸಕ್ಕೆ ನಷ್ಟವಾಗಿದೆ. ಪ್ರತಿ ವರ್ಷವೂ ನಷ್ಟದ ನೆಪವೊಡ್ಡಿ ಜನರಿಗೆ ದರ ಏರಿಕೆಯ ಬಿಸಿಯನ್ನು ಇಲಾಖೆ ನೀಡುತ್ತೆ. ಆದ್ರೆ ಬಿಲ್ ಪಾವತಿ ಮಾಡದ ಸರ್ಕಾರಿ ಇಲಾಖೆಗಳ ಬಳಿ ಮಾತ್ರ ಬಿಲ್ ಕಲೆಕ್ಟ್ ಮಾಡೋಕೆ ಇನ್ನೂ ಮೀನಮೇಷ ಎಣಿಸುತ್ತಿದೆ.
ರಾಜ್ಯದಲ್ಲಿ ಈ ಬಾರಿಯ ಬೇಸಿಗೆಯಲ್ಲಿ ವಿದ್ಯುತ್ ಸಮಸ್ಯೆ ಆಗಲ್ಲ. ಲೋಡ್ ಶೆಡ್ಡಿಂಗ್ ಇಲ್ಲ ಎಂದು ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ. ಅಲ್ಲದೇ, ಸ್ಮಾರ್ಟ್ ಮೀಟರ್ ಕಡ್ಡಾಯಗೊಳಿಸ್ತೇವೆ. ಕೆಲ ಜಿಲ್ಲೆಗಳಲ್ಲಿ ಟ್ರಾನ್ಸ್ಮಿಷನ್ ಕೆಪಾಸಿಟಿ ಓವರ್ ಲೋಡ್‌ನಿಂದ ಸಮಸ್ಯೆ ಆಗುತ್ತಿದೆ. ಇದು ಪವರ್ ಕಟ್ ಅಲ್ಲ ಎಂದಿದ್ದಾರೆ. ಪ್ರಸ್ತುತ 18,500 ಮೆಗಾವ್ಯಾಟ್ ವಿದ್ಯುತ್‌ಗೆ ಡಿಮ್ಯಾಂಡ್ ಇದೆ. ಯುಪಿ, ಪಂಜಾಬ್ ಸೇರಿದಂತೆ ಬೇರೆ ರಾಜ್ಯಗಳ ಜೊತೆ ಒಪ್ಪಂದ ಮಾಡಿಕೊಳ್ಳುವ ಮೂಲಕ ವಿದ್ಯುತ್ ಖರೀದಿ ಮಾಡುತ್ತೇವೆ ಎಂದು ಜಾರ್ಜ್ ಹೇಳಿದ್ದಾರೆ.