ಮಡಿಕೇರಿ: ಕಾಡುಗಳ ನಾಶದಿಂದಲೇ ಕೊಡಗಲ್ಲಿ ಕಂಡು ಕೇಳರಿಯದ ಪ್ರವಾಹ ಉಂಟಾಗಿ ಸಾವಿರಾರು ಕುಟುಂಬಗಳು ಮನೆ, ತೋಟಗಳನ್ನೆಲ್ಲಾ ಕಳೆದುಕೊಂಡು ಆಘಾತ ಅನುಭವಿಸಿವೆ. ಈಗ ಮತ್ತೆ ಮುಂಗಾರು ಬಂದಿದೆ. ಆದರೆ ಕಳೆದ ಬಾರಿಯ ಪ್ರಕೃತಿ ವಿಕೋಪದಿಂದ ಸರ್ಕಾರ ಪಾಠ ಕಲಿತಂತ್ತಿಲ್ಲ.
ಆಂಧ್ರ ಮೂಲದ ಉದ್ಯಮಿಯೊಬ್ಬರಿಗೆ ರೆಸಾರ್ಟ್ ನಿರ್ಮಾಣ ಮಾಡಲು ಬರೋಬ್ಬರಿ 800 ಮರಗಳನ್ನು ಕಡಿಯುವುದಕ್ಕೆ ಸ್ವತಃ ಅರಣ್ಯ ಇಲಾಖೆ ಒಪ್ಪಿಗೆ ನೀಡಿದೆ. ಮಡಿಕೇರಿ ತಾಲೂಕಿನ ಕೆ ನಿಡುಗಣೆಯಲ್ಲಿ 68 ಏಕರೆ ಜಾಗ ಖರೀದಿಸಿರುವ ಆಂಧ್ರ ಮೂಲದ ರೆಡ್ಡಿ ಎಂಬವರು ಜಮೀನು ಖರೀದಿಸಿದ್ದಾರೆ.
ಬೃಹತ್ ಮರ, ಬೆಟ್ಟ ಗುಡ್ಡಗಳಿಂದ ಈ ಜಾಗದಲ್ಲಿ 30 ಎಕರೆಯನ್ನು ಅಭಿವೃದ್ಧಿಪಡಿಸಿ ಹೌಸಿಂಗ್ ಬೊರ್ಡ್ ಗೆ ಕೊಡುತ್ತೇವೆ ಆ 30 ಎಕರೆಯಲ್ಲಿರುವ ಮರಗಳನ್ನು ಕಡಿಯಲು ಅನುಮತಿ ಕೊಡಿ ಎಂದು ಜಾಗದ ಮಾಲೀಕ ಅನುಮತಿ ಕೇಳಿದ್ದಾರೆ. ಅದಕ್ಕೆ ಓಕೆ ಎಂದಿರೋ ಕೊಡಗು ಜಿಲ್ಲಾಡಳಿತ ಕನ್ವರ್ಷನ್‍ಗೆ ಅವಕಾಶ ಕೊಟ್ಟಿದೆ.
ಅಲ್ಲದೆ ಮಡಿಕೇರಿ ಡಿಎಫ್‍ಓ ಮರ ಕಡಿಯೋಕೆ ಅನುಮತಿ ಕೊಟ್ಟಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಜಾಗದ ಮಾಲೀಕ 890 ಮರಗಳ ಮಾರಣ ಹೋಮ ಮಾಡಿದ್ದಾನೆ. ಇನ್ನೊಂದು ಶಾಕಿಂಗ್ ವಿಷಯ ಅಂದರೆ ಮಾಲೀಕ ಮರ ಕಡಿದಿರುವ ಜಾಗವನ್ನು ಹೌಸಿಂಗ್ ಬೋರ್ಡ್ ಗೆ ಕೊಡುವ ಹಾಗೆ ಇಲ್ಲ. ಸದ್ಯ ಮರ ಕಡಿದಿರುವ ಜಾಗದಲ್ಲಿ ರೆಸಾರ್ಟ್ ಗೆ ನಿರ್ಮಾಣಕ್ಕೆ ರೆಡ್ಡಿ ಪ್ಲಾನ್ ಮಾಡಿದ್ದಾರೆ.