ಸಿಯೋಲ್: ಹೋಟೆಲ್‍ಗಳಲ್ಲಿ ತಂಗಿದ್ದ ದಕ್ಷಿಣ ಕೊರಿಯಾದ ಸುಮಾರು 800 ದಂಪತಿಯ ಸೆಕ್ಸ್ ನಲ್ಲಿ ತೊಡಗಿದ್ದ ವಿಡಿಯೋವನ್ನು ಸ್ಪೈಕ್ಯಾಮ್ ಮೂಲಕ ಲೈವ್ ಮಾಡುತ್ತಿದ್ದ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ.
ದೇಶದ ಸ್ಪೈಕ್ಯಾಮೆರಾ ಪ್ರಕರಣಗಳಲ್ಲೇ ಇದು ಅತಿ ದೊಡ್ಡ ಸೆಕ್ಸ್ ಹಗರಣ ಎಂದು ಪೊಲೀಸರು ತಿಳಿಸಿದ್ದಾರೆ. ದಕ್ಷಿಣ ಕೊರಿಯಾದಲ್ಲಿ ಸ್ಪೈಕ್ಯಾಮ್ ಹಗರಣ ಈಗ ಜಾಸ್ತಿ ನಡೆಯುತ್ತಿದ್ದು, ಸಾಮಾನ್ಯವಾಗಿ ರಹಸ್ಯವಾಗಿ ಶಾಲೆಗಳು, ಟ್ರಯಲ್ ರೂಮ್ ಮತ್ತು ಮಹಿಳೆಯರ ಶೌಚಾಲಯ ಸೇರಿದಂತೆ ಅನೇಕ ಕಡೆಯಲ್ಲಿ ಈ ಕ್ಯಾಮೆರಾವನ್ನು ಬಳಸಲಾಗುತ್ತದೆ. ಆದರೆ ಹೋಟೆಲ್ ನಲ್ಲಿ ಸ್ಪೈಕ್ಯಾಮ್ ಬಳಸಿ ಅದನ್ನು ಲೈವ್ ಮಾಡಿದ್ದು ಇದೆ ಮೊದಲು ಎಂದು ತಿಳಿದು ಬಂದಿದೆ.
Advertisement
Advertisement
ನಾಲ್ವರು ಹುಡುಗರು ಈ ರೀತಿ ಸಣ್ಣ ಕ್ಯಾಮೆರಾಗಳನ್ನು 30 ಹೋಟೆಲ್ ಗಳಲ್ಲಿ 42 ರೂಮ್‍ಗಳಲ್ಲಿ ಗ್ರಾಹಕರ ಗಮನಕ್ಕೆ ಬಾರದಂತೆ ಅಳವಡಿಸಿದ್ದಾರೆ. ಹೇರ್ ಡ್ರೈಯರ್, ಗೋಡೆ ಸಾಕೆಟ್ (ಸ್ವಿಚ್ ಬೋರ್ಡ್)ಮತ್ತು ಡಿಜಿಟಲ್ ಟಿವಿ ಬಾಕ್ಸ್ ಗಳಲ್ಲಿ ರಹಸ್ಯವಾಗಿ ಸ್ಪೈಕ್ಯಾಮೆರಾ ಅವರನ್ನು ಅಳವಡಿಸಲಾಗಿತ್ತು. ನಂತರ ಅದರ ಮೂಲಕ 42 ರೂಮ್ ಗಳಲ್ಲಿ ನಡೆಯುವ ದೃಶ್ಯಗಳನ್ನು ವೆಬ್ ಸೈಟ್ ವೊಂದು ತನ್ನ 4000 ಗ್ರಾಹಕರಿಗೆ 24 ಗಂಟೆಗಳ ಕಾಲ ಲೈವ್ ಮಾಡಿದೆ. ಈ ಲೈವ್ ವಿಡಿಯೋಗಾಗಿ ಗ್ರಾಹಕರು ಪ್ರತಿ ತಿಂಗಳು 50 ಸಾವಿರ ವೊನ್( ಅಂದಾಜು 3 ಸಾವಿರ ರೂ.) ಪಾವತಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಕಳೆದ ಮೂರು ತಿಂಗಳಿಂದ ಸುಮಾರು 800 ದಂಪತಿಯ ಸೆಕ್ಸ್ ನಲ್ಲಿ ತೊಡಗಿದ್ದನ್ನು ವೆಬ್ ಸೈಟ್ ಮೂಲಕ ಲೈವ್ ಮಾಡಲಾಗಿದೆ. ಈ ಹಗರಣದ ಮೂಲಕ ಗ್ಯಾಂಗ್ ಸುಮಾರು 70 ಲಕ್ಷ ವೊನ್(ಅಂದಾಜು 4.25 ಲಕ್ಷ ರೂ.) ಗಳಿಸಿದ್ದಾರೆ. ಈ ಸಂಬಂಧ ಇಬ್ಬರು ಶಂಕಿತರನ್ನು ಬಂಧಿಸಲಾಗಿದ್ದು, ಮತ್ತಿಬ್ಬರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
2017 ರಲ್ಲಿ ದಕ್ಷಿಣ ಕೊರಿಯಾದಲ್ಲಿ ಸ್ಪೈಕಾಮ್ ಹಗರಣಕ್ಕೆ ಸಂಬಂಧಿಸಿದಂತೆ 5,400 ಕ್ಕಿಂತಲೂ ಹೆಚ್ಚು ಆರೋಪಿಗಳನ್ನು ಬಂಧಿಸಲಾಗಿತ್ತು. ಕಳೆದ ವರ್ಷ ಸಿಯೋಲ್‍ನಲ್ಲಿ ಮೀಟೂ ಅಭಿಯಾನದಲ್ಲಿ ಸಾವಿರಾರು ಮಹಿಳೆಯರು ಸ್ಪೈಕಾಮ್ ವೀಡಿಯೋಗಳ ವಿರುದ್ಧ ಪ್ರತಿಭಟಿಸಿದ್ದರು.