ಮಂಡ್ಯ: 80 ವರ್ಷದ ವೃದ್ಧನೊಬ್ಬ 35ರ ವಿಧವೆಯನ್ನು ಮದುವೆಯಾಗಿದ್ದಕ್ಕೆ ಆತನ ಮೊದಲ ಪತ್ನಿ ಹಾಗೂ ಮಕ್ಕಳು ಹಲ್ಲೆ ನಡೆಸಿರುವ ಪ್ರಕರಣ ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣದಲ್ಲಿ ನಡೆದಿದೆ.
ನಿವೃತ್ತ ಶಿಕ್ಷಕ ಹಾಗೂ ಸಾಹಿತಿ ಎನ್.ಎಂ ಮಹಮ್ಮದ್ ಗೌಸ್ 35ರ ವಿಧವೆಯನ್ನು ಮದುವೆಯಾದ ವೃದ್ಧ. ಮೊದಲ ಪತ್ನಿ ಹಾಗೂ ಮಕ್ಕಳು ನಿರ್ಲಕ್ಷಿಸಿದರು ಎಂಬ ಕಾರಣಕ್ಕೆ ಗೌಸ್ ವಿಧವೆ ಅಬ್ಜಾ ರನ್ನು ಮದುವೆಯಾಗಿದ್ದರು. ಗೌಸ್ ಮರು ಮದುವೆಯಾದ ವಿಷಯ ತಿಳಿದು ಮೊದಲ ಪತ್ನಿ ಹಾಗೂ ಮಕ್ಕಳು ವಿಧವೆ ಅಬ್ಜಾ ಮೇಲೆ ಹಲ್ಲೆ ನಡೆಸಿದ್ದಾರೆ.
Advertisement
Advertisement
ಗೌಸ್ನ ಮೊದಲ ಪತ್ನಿ ಅಮೀನಾ ವಿಧವೆ ಅಬ್ಜಾಳಿಗೆ ಚಪ್ಪಲಿಯಿಂದ ಹೊಡೆದು ಮನೆ ಖಾಲಿ ಮಾಡಿಕೊಂಡು ಹೋಗುವಂತೆ ಪ್ರಾಣ ಬೆದರಿಕೆ ಹಾಕಿದ್ದಾರೆ. ಸದ್ಯ ವಿಧವೆ ಮೇಲೆ ಹಲ್ಲೆ ಮಾಡಿ ಬೆದರಿಕೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮೊದಲ ಪತ್ನಿ ಹಾಗೂ ಮಕ್ಕಳು ನನ್ನನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆಂಬ ಕಾರಣಕ್ಕೆ ಎರಡು ಹೆಣ್ಣು ಮಕ್ಕಳಿರುವ ನೂರ್ ಅಬ್ಜಾರನ್ನು ಗೌಸ್ ಮದುವೆಯಾಗಿದ್ದಾರೆ.
Advertisement
Advertisement
ಮೈಸೂರಿನಲ್ಲಿ ಅ. 17ರಂದು ವೃದ್ಧ ಗೌಸ್ ಹಾಗೂ ಅಬ್ಜಾ ಮದುವೆಯಾಗಿತ್ತು. ಮೊದಲ ಪತ್ನಿಯಿಂದ ನಿರ್ಲಕ್ಷ್ಯಕ್ಕೊಳಗಾದಾಗ ವೃದ್ಧ ಗೌಸ್ಗೆ ಅಬ್ಜಾ ಊಟ ತಿಂಡಿ ಕೊಟ್ಟು ಆರೈಕೆ ಮಾಡುತ್ತಿದ್ದಳು. ಅವರಿಬ್ಬರ ಒಡನಾಟ ಕಂಡು ಮೊದಲ ಪತ್ನಿ ಅಮೀನಾ ಅನೈತಿಕ ಸಂಬಂಧ ಎಂದು ಗೌಸ್ ಗೆ ಮಾನಸಿಕ ಕಿರುಕುಳ ಕೊಡುತ್ತಿದ್ದಳು. ಮಾನಸಿಕ ಕಿರುಕುಳಕ್ಕೊಳಗಾಗಿ ಮಹಮ್ಮದ್ ಗೌಸ್ ವಿಧವೆಯನ್ನು ಮದುವೆಯಾಗಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv