ಕೋಲಾರ: ಜಿಲ್ಲೆಯಲ್ಲಿ ಬೃಹತ್ ಆನ್ ಲೈನ್‍ಟ್ರಿಪ್ ಚೀಟಿಂಗ್ ಪ್ರಕರಣವೊಂದನ್ನ ಬೇಧಿಸುವಲ್ಲಿ ಅರಣ್ಯ ಇಲಾಖೆ ಹಾಗು ಪೊಲೀಸ್ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಕೋಲಾರ ಹೊರವಲಯದ ಅಂತರಗಂಗೆ ಬೆಟ್ಟದಲ್ಲಿ 80 ಮಂದಿ ಅತಿಕ್ರಮ ಪ್ರವೇಶ ಮಾಡಿ ಚಾರಣಕ್ಕಾಗಿ ಬಂದಿದ್ದ ಪ್ರವಾಸಿಗರನ್ನು ಕೋಲಾರ ಗ್ರಾಮಾಂತರ ಪೊಲೀಸರು ಹಾಗು ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
Advertisement
Advertisement
ಬೆಂಗಳೂರು ಮೂಲದ ತಿಲೋಫಿಲಿಯಾ ಎಂಬ ಆನ್‍ಲೈನ್ ಸಂಸ್ಥೆ ಬೆಂಗಳೂರಿಂದ ಪ್ರವಾಸಿಗರನ್ನ ಕರೆತಂದು ಟ್ರಕ್ಕಿಂಗ್ ಅವಕಾಶ ಕೊಡಿಸೋದಾಗಿ ಚೀಟಿಂಗ್ ಮಾಡಿದೆ. ನಂತರ ಅಂತರಗಂತೆ ಬೆಟ್ಟದ ನಿಷೇದಿತ ಅರಣ್ಯ ಪ್ರದೇಶದಲ್ಲಿ ಸಂಚರಿಸಿದ್ದಾರೆ. ಆದ್ದರಿಂದ 80 ಮಂದಿಯನ್ನ ವಶಕ್ಕೆ ಪಡೆದ ಅಧಿಕಾರಿಗಳು ಮುಚ್ಚಳಿಕೆ ಬರೆದುಕೊಂಡು ಬಿಡುಗಡೆಗೊಳಿಸಿದ್ದಾರೆ.
Advertisement
ಪ್ರವಾಸಿಗರನ್ನ ಕರೆತಂದಿದ್ದ ನಾಲ್ವರು ಹಾಗೂ ಒಂದು ಬಸ್ ಮತ್ತು ಟೆಂಪೋ ಟ್ರಾವಲರ್ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಘಟನೆ ಸಂಬಂಧ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.