ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ (Tamil Nadu Assembly Election) ಎನ್‌ಡಿಎ ಗೆದ್ದರೆ ಉಪಮುಖ್ಯಮಂತ್ರಿ ಹುದ್ದೆಯನ್ನು ತಮಿಳಗ ವೆಟ್ರಿ ಕಳಗಂ (TVK) ಮುಖ್ಯಸ್ಥ ವಿಜಯ್ (VIjay) ಅವರಿಗೆ ಬಿಜೆಪಿ ನೀಡಿದೆ.
ಸೀಟು ಹಂಚಿಕೆ ಒಪ್ಪಂದದ ಭಾಗವಾಗಿ ಬಿಜೆಪಿ ಟಿವಿಕೆಗೆ ಸುಮಾರು 80 ಸ್ಥಾನಗಳನ್ನು ನೀಡಿದೆ. ಚುನಾವಣೆಗೆ ಮುನ್ನ ಎರಡೂ ಪಕ್ಷಗಳ ನಡುವಿನ ಮಾತುಕತೆ ಅಂತಿಮ ಹಂತಕ್ಕೆ ತಲುಪಿದೆ ಎಂದು ಮೂಲಗಳು ತಿಳಿಸಿವೆ.
ಒಂದು ವೇಳೆ ಇದು ಕಾರ್ಯರೂಪಕ್ಕೆ ಬಂದರೆ ರಾಜ್ಯದಲ್ಲಿ ಚುನಾವಣಾ ಲೆಕ್ಕಾಚಾರಗಳೇ ಬದಲಾಗುವ ಸಾಧ್ಯತೆಯಿದೆ. ವಿಜಯ್ ಅವರು ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ. ಈ ಹಿಂದೆ ನಾನು ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ವಿಜಯ್ ಹೇಳಿದ್ದರು. ಇದನ್ನೂ ಓದಿ: ಶಬರಿಮಲೆ ವಿಚಾರದಲ್ಲಿ ಪಿಣರಾಯಿ ಯೂಟರ್ನ್ – ಮಹಿಳೆಯರ ಪ್ರವೇಶ ಹಿಂದಿನ ನಿಲುವು ಬದಲಾಯಿಸಿದ ಸರ್ಕಾರ
ವಿಜಯ್ ಅವರಿಗೆ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಮೂಲಗಳ ಪ್ರಕಾರ ಹಲವಾರು ಕ್ಷೇತ್ರಗಳಲ್ಲಿ ಶೇ.2 ರಷ್ಟು ಮತಗಳು ಬಿದ್ದರೂ ಸಹ ಗೆಲುವಿನ ದಿಕ್ಕನ್ನು ಬದಲಾಯಿಸುವ ಸಾಧ್ಯತೆಯಿದೆ. ಇದನ್ನೂ ಓದಿ: ಅಸ್ಸಾಂ, ತಮಿಳುನಾಡು, ಕೇರಳಕ್ಕೆ ಏ.9 ರಂದು ಚುನಾವಣೆ – ಮೇ 4 ರಂದು ಫಲಿತಾಂಶ

