– ಗ್ರಾಮಕ್ಕೆ ಶಾಸಕ ಬಿ.ಆರ್ ಪಾಟೀಲ್ ಭೇಟಿ ರೋಗಿಗಳ ಯೋಗಕ್ಷೇಮ ವಿಚಾರಣೆ
ಕಲಬುರಗಿ: ಜಿಲ್ಲೆಯ ಆಳಂದ ತಾಲೂಕಿನ ನಿಂಬರ್ಗಾ ಗ್ರಾಮದಲ್ಲಿ ಓವರ್ ಹೆಡ್ ಟ್ಯಾಂಕ್ ಕಲುಷಿತ ನೀರು ಸೇವಿಸಿ 80ಕ್ಕೂ ಅಧಿಕ ಜನ ಅಸ್ವಸ್ಥಗೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ನಿಂಬರ್ಗಾ ಪಿಡಿಒ ಸುಕನ್ಯಾ ಅವರನ್ನು ಸೇವೆಯಿಂದ ಅಮಾನತ್ತು ಮಾಡಿ ಆದೇಶ ಹೊರಡಿಸಲಾಗಿದೆ.
Advertisement
ಗ್ರಾಮದ ಭೋವಿ ಸಮಾಜ ಬಡಾವಣೆಯಲ್ಲಿ 3-4 ತಿಂಗಳಿನಿಂದ ಸ್ವಚ್ಛ ಮಾಡದ ಓವರ್ ಹೆಡ್ ಟ್ಯಾಂಕ್ ದಿಂದ ಸರಬರಾಜಾದ ನೀರನ್ನು ಕುಡಿದು ಸೋಮವಾರ 80ಕ್ಕೂ ಅಧಿಕ ಜನರು ವಾಂತಿ ಭೇದಿಯಿಂದ ಬಳಲಿ ಅಸ್ವಸ್ಥಗೊಂಡಿದ್ದರು. ತಕ್ಷಣ ನಿಂಬರ್ಗಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಅವರಿಗೆ ಚಿಕಿತ್ಸೆ ಕೊಡಲಾಗಿದ್ದು, ಕ್ರಮೇನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಅನರ್ಹಗೊಂಡ ನಂತ್ರ ಮೋದಿ ಮಾತನಾಡಲು ಮುಂದಾಗಿದ್ದರು, ನಾನೇ ನಿರಾಕರಿಸಿದ್ದೆ: ವಿನೇಶ್
Advertisement
ಗ್ರಾಮದಲ್ಲಿ ಇಂತಹ ಅವಘಡ ಸಂಭವಿಸಲು ಗ್ರಾಪಂ ಪಂಚಾಯತಿ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಟ್ಯಾಂಕ್ ಸ್ವಚ್ಛಗೊಳಿಸುವಂತೆ ಅನೇಕ ಬಾರಿ ಹೇಳಿದ್ದರೂ ಗಮನ ಹರಿಸದಿದ್ದಕ್ಕೆ ಘಟನೆ ಸಂಭವಿಸಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು. ಬೆನ್ನಲ್ಲೇ ಎಚ್ಚೆತ್ತುಕೊಂಡ ತಾಲೂಕು ಆಡಳಿತ ಪಿಡಿಒ ಸುಕನ್ಯಾ ಅವರನ್ನು ಸೇವೆಯಿಂದ ಅಮಾನತ್ತು ಮಾಡಿ ಆದೇಶ ಹೊರಡಿಸಿದೆ. ಪಕ್ಕದ ಸುಂಟನೂರ ಗ್ರಾಪಂ ಪಿಡಿಒ ಅವರಿಗೆ ಪ್ರಭಾರ ವಹಿಸಲಾಗಿದೆ ಎಂದು ಆಳಂದ ಇಓ ಮಾನಪ್ಪ ಕಟ್ಟಿಮನಿ ತಿಳಿಸಿದರು.
Advertisement
Advertisement
ಗ್ರಾಮಕ್ಕೆ ಶಾಸಕ ಬಿ.ಆರ್ ಪಾಟೀಲ್ ಭೇಟಿ:
ಗ್ರಾಮಸ್ಥರು ಅಸ್ವಸ್ಥರಾಗಿರುವ ಸುದ್ದಿ ತಿಳಿದು ಮಂಗಳವಾರ ನಿಂಬರ್ಗಾ ಗ್ರಾಮಕ್ಕೆ ದೌಡಾಯಿಸಿದ ಶಾಸಕ ಬಿ.ಆರ್ ಪಾಟೀಲ್ ಅವರು ನೇರವಾಗಿ ಆಸ್ಪತ್ರೆಗೆ ತೆರಳಿ ಜನರ ಆರೋಗ್ಯ ವಿಚಾರಿಸಿ ಹಣ್ಣು ಹಂಪಲು ನೀಡಿ ಧೈರ್ಯ ತುಂಬಿದ್ರು. ಸಮುದಾಯ ಆರೋಗ್ಯ ಕೇಂದ್ರದ ಮೆಡಿಕಲ್ ಆಫೀಸರ್ ಡಾ. ಇರ್ಫಾನ್ ಅಲಿ ಅವರೊಂದಿಗೆ ಸಮಾಲೋಚನೆ ನಡೆಸಿ ಜನರ ಆರೋಗ್ಯದ ಸ್ಥೀತಿಗತಿಯ ಬಗ್ಗೆ ಮಾಹಿತಿ ಕಲೆಹಾಕಿದರು. ಇದನ್ನೂ ಓದಿ: ನಾಗಾ-ಸಮಂತಾ ಡಿವೋರ್ಸ್ ಕಿಚ್ಚು ಹಚ್ಚಿದ ತೆಲಂಗಾಣ ಸಚಿವೆ; ರಾಜಕೀಯ ಜಗಳಗಳಿಂದ ನನ್ನ ಹೆಸರು ದೂರವಿಡಿ: ಸಮಂತಾ
ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಭೇಟಿ:
ಕಲುಷಿತ ನೀರು ಸೇವನೆಯಿಂದ ಗ್ರಾಮಸ್ಥರು ಅನಾರೋಗ್ಯದಿಂದ ಬಳಲುತ್ತಿರುವ ವಿಚಾರ ಗೊತ್ತಾಗುತ್ತಿದ್ದಂತೆ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಇನ್ಸ್‌ಪೆಕ್ಟರ್ ಅಕ್ಕಮಹಾದೇವಿ ಅವರ ನೇತೃತ್ವದ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳ ತಂಡ ನಿಂಬರ್ಗಾ ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ರು. ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳಿಂದ ಮತ್ತು ಓವರ್ ಹೆಡ್ ಟ್ಯಾಂಕ್ ಇರುವ ಪ್ರದೇಶ, ಘಟನೆ ಸಂಭವಿಸಿದ ಬಡಾವಣೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು.