ಜೈಪುರ್: ರಾಜಸ್ಥಾನದ ಉದಯ್‍ಪುರ್ ನ ಸರ್ಕಾರಿ ಆಸ್ಪತ್ರೆಯ ವೈದ್ಯರು ಮಾನಸಿಕ ರೋಗಿಯ ಹೊಟ್ಟೆಯಲ್ಲಿದ್ದ ವಸ್ತುಗಳನ್ನು ಕಂಡು ದಂಗಾಗಿದ್ದಾರೆ.
ಹೌದು.. ಸೋಮವಾರ ನಾಲ್ವರು ವೈದ್ಯರ ತಂಡವು 90 ನಿಮಿಷಗಳ ಕಾಲ ಆಪರೇಷನ್ ಮಾಡಿದೆ. ಈ ವೇಳೆ ವ್ಯಕ್ತಿಯ ಹೊಟ್ಟೆಯಲ್ಲಿ ಚುಟ್ಟಾ, ಕೀಗಳು ಮತ್ತು ನಾಣ್ಯಗಳು ಸೇರಿದಂತೆ ಸುಮಾರು 80 ವಸ್ತುಗಳು ಪತ್ತೆಯಾಗಿದ್ದು, ಅವುಗಳನ್ನು ಹೊರ ತೆಗೆದಿದ್ದಾರೆ.
Advertisement
Advertisement
ಇದನ್ನು ವಿಚಿತ್ರ ಕೇಸ್ ಎಂದು ಪರಿಗಣಿಸಲಾಗಿದೆ. ವ್ಯಕ್ತಿ ತೀವ್ರ ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದನು. ನಂತರ ನಾವು ವ್ಯಕ್ತಿಗೆ ಎಕ್ಸ್-ರೇ ಮಾಡಿಸಿದ್ದೆವು. ಆಗ ಆತನ ಹೊಟ್ಟೆಯೊಳಗೆ ಉಗುರುಗಳು ಸೇರಿದಂತೆ ಸಣ್ಣ ಮತ್ತು ದೊಡ್ಡ ಮೆಟಲ್ ವಸ್ತುಗಳನ್ನು ಕಂಡು ಬಂದಿದ್ದು, ನಮಗೆ ನಿಜಕ್ಕೂ ಅಚ್ಚರಿಯಾಯಿತು ಎಂದು ಡಾ.ಡಿ.ಕೆ ಶರ್ಮಾ ತಿಳಿಸಿದ್ದಾರೆ.
Advertisement
ವೈದ್ಯರು ತಡಮಾಡದೆ ತಕ್ಷಣ ಶಸ್ತ್ರಚಿಕಿತ್ಸೆಗೆ ರೋಗಿಯನ್ನು ಒಳಪಡಿಸಿ ಒಟ್ಟು 800 ಗ್ರಾಂ ತೂಕದ ವಸ್ತುಗಳನ್ನು ಹೊರ ತೆಗೆದಿದ್ದಾರೆ. ರೋಗಿಯು ಮಾನಸಿಕ ಅಸ್ವಸ್ಥ ಮತ್ತು ವ್ಯಸನಿಯಾಗಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ
Advertisement
Rajasthan: Doctors remove more than 80 items including keys, coins & 'chillam' among other items from a patient's stomach in Udaipur. pic.twitter.com/zrT4iHcvu0
— ANI (@ANI) June 17, 2019
ರೋಗಿ ಮಾನಸಿಕ ಅಸ್ವಸ್ಥ, ವ್ಯಸನಿಯಾಗಿದ್ದನು. ಆತನಿಗೆ ನಿರಂತರವಾಗಿ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಕುಟುಂಬದವರು ಅವನನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು ಎಂದು ಶರ್ಮಾ ಹೇಳಿದ್ದಾರೆ.
ಸದ್ಯಕ್ಕೆ ರೋಗಿಯ ಆರೋಗ್ಯದಲ್ಲಿ ಚೇತರಿಕೆಯಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ. ಕಳೆದ ತಿಂಗಳು 40 ವರ್ಷ ವಯಸ್ಸಿನ ವ್ಯಕ್ತಿಯೊಬ್ಬನ ಹೊಟ್ಟೆಯಲ್ಲೂ ವೈದ್ಯರು 116 ಉಗುರುಗಳು, ಉದ್ದನೆಯ ತಂತಿಯನ್ನು ಆಪರೇಷನ್ ಮಾಡಿ ಹೊರ ತೆಗೆದಿದ್ದರು.